ಶರತ್ ಬಚ್ಚೇಗೌಡ ಕುಟುಂಬ ಬಡವರ 229 ಎಕರೆ ಕೃಷಿ ಜಮೀನು ಕಬಳಿಸಿಕೊಂಡಿದೆ: ಸಚಿವ ಎಂಟಿಬಿ ನಾಗರಾಜ್ ಗಂಭೀರ ಆರೋಪ

ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ನಡುವಿನ ಜಗಳ ತಾರಕಕ್ಕೇರಿದೆ. ಬಡವರ ಕೃಷಿ ಜಮೀನು ಮತ್ತು ಸ್ಮಶಾನದ ಜಮೀನುಗಳನ್ನು ಶರತ್ ಬಚ್ಚೇಗೌಡರ ತಂದೆ ಕಬಳಿಸಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ.

Published: 11th June 2021 07:48 AM  |   Last Updated: 11th June 2021 12:47 PM   |  A+A-


Sharath Bacchegowda, MTB Nagaraj(File photo)

ಶರತ್ ಬಚ್ಚೇಗೌಡ, ಎಂಟಿಬಿ ನಾಗರಾಜ್(ಸಂಗ್ರಹ ಚಿತ್ರ)

Posted By : Sumana Upadhyaya
Source : Online Desk

ದೇವನಹಳ್ಳಿ: ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ನಡುವಿನ ಜಗಳ ತಾರಕಕ್ಕೇರಿದೆ.  ಬಡವರ ಕೃಷಿ ಜಮೀನು ಮತ್ತು ಸ್ಮಶಾನದ ಜಮೀನುಗಳನ್ನು ಶರತ್ ಬಚ್ಚೇಗೌಡರ ತಂದೆ ಕಬಳಿಸಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ.

ಅಧಿಕಾರ ದುರುಪಯೋಗಪಡಿಸಿಕೊಂಡು ಬಡವರನ್ನು ಬೆದರಿಸಿ, ಹೆದರಿಸಿ ಜಮೀನುಗಳನ್ನು ಕಿತ್ತುಕೊಂಡಿದ್ದಾರೆ. ಸ್ಮಶಾನದ ಜಾಗವನ್ನು ಕೂಡ ಕಿತ್ತುಕೊಂಡಿದ್ದಾರೆ. ಜನರ ಸೇವೆ ಎಂದು ಹೇಳಿಕೊಂಡು ಜನಪ್ರತಿನಿಧಿಗಳಾಗಿ ಬಡವರನ್ನು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ, ನಾನು ನೀಡುತ್ತೇನೆ, ತಂದೆ-ಮಕ್ಕಳಿಗೆ ಮನುಷ್ಯತ್ವ ಇದ್ದರೆ, ರಾಜಕೀಯದಲ್ಲಿ ಇನ್ನೂ ಮುಂದುವರಿಯಬೇಕು ಎಂದಿದ್ದರೆ ಬಡವರ ಜಮೀನುಗಳನ್ನು ತಕ್ಷಣವೇ ವಾಪಸ್ ನೀಡಲಿ ಎಂದು ಸಚಿವ ನಾಗರಾಜ್ ಸವಾಲು ಹಾಕಿದ್ದಾರೆ.

ರಾಜಕಾರಣಿಗಳು ರಾಜಕೀಯಕ್ಕೆ ಬರುವುದು, ಅಧಿಕಾರ ಕೊಟ್ಟ ಜನಕ್ಕೆ ಸೇವೆ ಮಾಡಲು, ನ್ಯಾಯ ಒದಗಿಸಲು, ನಾಲ್ಕು ಜನಕ್ಕೆ ಸಹಾಯ ಮಾಡಲು ರಾಜಕೀಯಕ್ಕೆ ಬಂದವನು ನಾನು. ನನ್ನ ವಿರುದ್ಧ ಏನೂ ಆರೋಪ ಮಾಡುವುದಿದ್ದರೂ ಸಾಬೀತು ಮಾಡಲಿ ಎಂದು ಕೇಳಿಕೊಂಡರು.

ನಾನು ಅಕ್ರಮ ಆಸ್ತಿ ಮಾಡಿದ್ದೇನೆ, ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದೇನೆ, ಭ್ರಷ್ಟಾಚಾರವೆಸಗುತ್ತಿದ್ದೇನೆ ಎಂದು ಶರತ್ ಬಚ್ಚೇಗೌಡ ಮಾಡಿರುವ ಆರೋಪವನ್ನು ಸಾಬೀತು ಮಾಡಿದರೆ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.


Stay up to date on all the latest ರಾಜಕೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp