ಪಂಚಮಸಾಲಿ ಲಿಂಗಾಯತ ಸಮುದಾಯದವರೇ ಸಿಎಂ ಆಗಲಿ, ಯಡಿಯೂರಪ್ಪನವರ ಬದಲಾವಣೆ ಆಗಬೇಕು: ಹೆಚ್. ವಿಶ್ವನಾಥ್

ಸಿಎಂ ಯಡಿಯೂರಪ್ಪನವರಿಗೆ ವಯಸ್ಸಾಗಿದೆ, ಅವರಿಗೆ ಮೊದಲಿನಂತೆ ಕೆಲಸ ಮಾಡಲು ಆಗುತ್ತಿಲ್ಲ, ಹೀಗಾಗಿ ತಮ್ಮ ಪರಿಸ್ಥಿತಿ, ವಯಸ್ಸಿನ ಇತಿಮಿತಿ, ಆರೋಗ್ಯವನ್ನು ಮನಗಂಡು ಬೇರೆಯವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮತ್ತೊಮ್ಮೆ ಅಪಸ್ವರ ಎತ್ತಿದ್ದಾರೆ.
ಹೆಚ್ ವಿಶ್ವನಾಥ್
ಹೆಚ್ ವಿಶ್ವನಾಥ್

ಬೆಂಗಳೂರು: ಸಿಎಂ ಯಡಿಯೂರಪ್ಪನವರಿಗೆ ವಯಸ್ಸಾಗಿದೆ, ಅವರಿಗೆ ಮೊದಲಿನಂತೆ ಕೆಲಸ ಮಾಡಲು ಆಗುತ್ತಿಲ್ಲ, ಹೀಗಾಗಿ ತಮ್ಮ ಪರಿಸ್ಥಿತಿ, ವಯಸ್ಸಿನ ಇತಿಮಿತಿ, ಆರೋಗ್ಯವನ್ನು ಮನಗಂಡು ಬೇರೆಯವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮತ್ತೊಮ್ಮೆ ಯಡಿಯೂರಪ್ಪ ನಾಯಕತ್ವದ ಬಗ್ಗೆ ಅಪಸ್ವರ ಎದ್ದಿದ್ದಾರೆ.

ಬಿಜೆಪಿಯಲ್ಲಿ ಸಾಕಷ್ಟು ಬೇರೆ ನಾಯಕರಿದ್ದಾರೆ, ಬೇರೆಯವರಿಗೆ ಬೆಳೆಯಲು ಯಡಿಯೂರಪ್ಪನವರು ಅವಕಾಶ ನೀಡಲಿ. ಪಂಚಮಸಾಲಿ ಲಿಂಗಾಯತ ಸಮುದಾಯದವರೇ ಬೇಕಾದರೆ ಮುಖ್ಯಮಂತ್ರಿ ಆಗಲಿ, ಮುರುಗೇಶ್ ನಿರಾಣಿ, ಬಸನ ಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ ಬೆಲ್ಲದ್ ಅವರು ಮೂವರಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಗಳಾಗಲಿ ಎಂದರು.

ಬಿಜೆಪಿ ಕಚೇರಿಯಲ್ಲಿ ಇಂದು ಅರುಣ್ ಸಿಂಗ್ ಅವರ ಜೊತೆ ಒನ್ ಟು ಒನ್ ಮೀಟಿಂಗ್ ನಡೆಸಿದ ನಂತರ ಹೊರಗೆ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ನಮಗೆ ಮೊದಲಿನಂದಲೂ ಗೌರವವಿದೆ, ಆದರೆ ರಾಜ್ಯದ ಹಿತದೃಷ್ಟಿಯಿಂದ ಅವರ ಬದಲಾವಣೆ ಮುಖ್ಯ, ಅವರಲ್ಲಿ ಮೊದಲು ಇದ್ದಂತಹ ಶಕ್ತಿ, ಆಡಳಿತವನ್ನು ವೇಗವಾಗಿ ತೆಗೆದುಕೊಂಡು ಹೋಗುವ ಉತ್ಸಾಹ ಕಾಣುತ್ತಿಲ್ಲ. ಬಹುತೇಕ ಶಾಸಕರು, ಸಚಿವರು ಕೂಡ ಅವರ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದಾರೆ, ಆದರೆ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ ಅಷ್ಟೆ, ಅನೇಕ ಇಲಾಖೆಗಳಲ್ಲಿ ಯಡಿಯೂರಪ್ಪನವರ ಕುಟುಂಬದ ಹಸ್ತಕ್ಷೇಪ ನಡೆಯುತ್ತಿದೆ. ಭ್ರಷ್ಟಾಚಾರ ಮಿತಿಮೀರುತ್ತಿದೆ. ಸಚಿವರುಗಳಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ರಾಜ್ಯಕ್ಕೆ, ಪಕ್ಷಕ್ಕೆ ಒಳ್ಳೆಯದಲ್ಲ, ಹಾಗಾಗಿ ನಾಯಕತ್ವ ಬದಲಾವಣೆ ಅನಿವಾರ್ಯ ಎಂದು ವಿಶ್ವನಾಥ್ ವಾದ ಮಂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com