ಪ್ರತಿ ಜಿಲ್ಲೆಯಿಂದ 5 ಲಕ್ಷ ಹಣದ ಆಡಿಯೋ ವೈರಲ್: ಸಚಿವ ಗೋಪಾಲಯ್ಯ ಹೇಳಿದ್ದಿಷ್ಟು!

ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಐದು ಲಕ್ಷ ಹಫ್ತಾ ನೀಡುವಂತೆ ಸಚಿವರಿಂದ ಒತ್ತಡ ಇದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರು ಮಾತನಾಡುತ್ತಿರುವ ಆಡಿಯೋ ಆರೋಪ ವಿಚಾರ ಸತ್ಯಕ್ಕೆ ದೂರ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.‌
ಗೋಪಾಲಯ್ಯ
ಗೋಪಾಲಯ್ಯ

ಬೆಂಗಳೂರು: ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಐದು ಲಕ್ಷ ಹಫ್ತಾ ನೀಡುವಂತೆ ಸಚಿವರಿಂದ ಒತ್ತಡ ಇದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರು ಮಾತನಾಡುತ್ತಿರುವ ಆಡಿಯೋ ಆರೋಪ ವಿಚಾರ ಸತ್ಯಕ್ಕೆ ದೂರ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ.‌

ಕೆಲವರು ನನ್ನ ಹೆಸರಿನಲ್ಲಿ ತಿಂಗಳಿಗೆ ಇಂತಿಷ್ಟು ಹಣ ನೀಡಬೇಕೆಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ನಾನು ನನ್ನ ಇಲಾಖೆಯ ಯಾವುದೇ ಅಕಾರಿಗೂ ಹಣ ನೀಡಬೇಕೆಂಬ ಬೇಡಿಕೆ ಇಟ್ಟಿಲ್ಲ. ಆಡಿಯೋದಲ್ಲಿ ಕೆಲವರು ನನ್ನ ಘನತೆಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾನು ಆಡಿಯೋ ವೈರಲ್ ಆದ ಬೆನ್ನಲ್ಲೇ ಕೆಲವು ಅಕಾರಿಗಳನ್ನು ಅಮಾನತ್ತುಪಡಿಸಿದ್ದೇನೆ. ನನ್ನ ಹೆಸರಿನಲ್ಲಿ ಯಾರೊಬ್ಬರಿಗೂ ಹಣ ನೀಡಬೇಕೆಂದು ಸೂಚನೆ ಕೊಟ್ಟಿಲ್ಲ. ಆ ರೀತಿ ಯಾವುದಾದರೂ ಪ್ರಕರಣಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ಖುದ್ದು ಸಚಿವರಾದ ಗೋಪಾಲಯ್ಯ ಮನವಿ ಮಾಡಿದ್ದಾರೆ.

ಆಡಿಯೋದಲ್ಲಿ ಯಾರು ಮಾತನಾಡಿದ್ದಾರೋ ಆ ಬಗ್ಗೆ ತನಖೆಯಾಗಲಿ. ತೇಜೋವಧೆ ಮಾಡುವ ನಿಟ್ಟುನಲ್ಲಿ ಹೀಗೆ ಮಾಡಿರಬಹುದು. ಆದರೆ, ಆಡಿಯೋದಲ್ಲಿ ನಾನು ಮಾತನಾಡಿರೋ ಬಗ್ಗೆ ಪುರಾವೆ ಇದೆಯಾ ಎಂದು ಪ್ರಶ್ನಿಸಿದರು.‌ ಯಾರೋ ಮಾಡಿರುವ ಷಡ್ಯಂತ್ರ ಇದು. ತನಿಖೆಯಾದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಅಬಕಾರಿ ಆಯುಕ್ತರಿಂದ ಈ ಕುರಿತಾಗಿ ತನಿಖೆ ಮಾಡಿಸಲಾಗುವುದು ಎಂದರು.‌

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com