ನಾನೂ ಸಿಎಂ ಹುದ್ದೆಯ ಆಕಾಂಕ್ಷಿ: ಮೈಸೂರಿನಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್

ಕಾಂಗ್ರೆಸ್‌ನಲ್ಲಿ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಗುರುತಿಸಿಕೊಳ್ಳುವ ನಾಯಕರು ಪಕ್ಷದಲ್ಲಿ ಇತ್ತೀಚೆಗೆ ಸಾಮಾನ್ಯವೆನ್ನುವಂತಾಗಿದ್ದಾರೆ, ಇದಕ್ಕೆ ಹೊಸ ಸೇರ್ಪಡೆ ಮಾಜಿ ಸಚಿವ ಎಂಬಿ ಪಾಟೀಲ್.
ಎಂಬಿ ಪಾಟೀಲ್
ಎಂಬಿ ಪಾಟೀಲ್

ಮೈಸೂರು:  ಕಾಂಗ್ರೆಸ್‌ನಲ್ಲಿ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಗುರುತಿಸಿಕೊಳ್ಳುವ ನಾಯಕರು ಪಕ್ಷದಲ್ಲಿ ಇತ್ತೀಚೆಗೆ ಸಾಮಾನ್ಯವೆನ್ನುವಂತಾಗಿದ್ದಾರೆ, ಇದಕ್ಕೆ ಹೊಸ ಸೇರ್ಪಡೆ ಮಾಜಿ ಸಚಿವ ಎಂಬಿ ಪಾಟೀಲ್. "ನಾನು ಇತರರಂತೆ ಸಿಎಂ ಹುದ್ದೆಯ ಆಕಾಂಕ್ಷಿ ಹೌದು"ಎಂದು ಅವರು ಹೇಳಿದ್ದಾರೆ ಆದರೆ ಅಂತಹ ಸದಾಶಯಗಳು ದುರಾಸೆಯಾಗಿ ಬದಲಾಗಬಾರದು ಎಂದು ಎಚ್ಚರಿಸಿದರು.

ಇತ್ತೀಚೆಗೆ ತಾಯಿಯ ಮರಣದ ಕಾರಣ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿಜಿಗೆ ಸಂತಾಪ ಸೂಚಿಸಲು ಮೈಸೂರಿಗೆ ಆಗಮಿಸಿದ್ದ ಪಾಟೀಲ್ ಅವರು ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ಪಕ್ಷದ ರಾಜ್ಯ ಉಸ್ತಿವಾರಿ ರಣದೀಪ್ ಸುರ್ಜೆವಾಲಾ ಅವರ ಸೂಚನೆಯಂತೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಅವರು ನಿರಾಕರಿಸಿದರು ಮತ್ತು 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಸಾಧಿಸಲು ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲಿದೆ ಎಂದು ಹೇಳಿದರು.

ಈ ವೇಳೆ ಅವರು ಕಾಂಗ್ರೆಸ್ಸಿಗರನ್ನು ವಲಸಿಗರು ಮತ್ತು ಸ್ಥಳೀಯರು ಎಂದು ವರ್ಗೀಕರಿಸುವ ಹೇಳಿಕೆ ನೀಡಿದ ಪಾಟೀಲ್ ಈ ಬಗ್ಗೆ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಕ್ಷದ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಎಚ್ಚರಿಸಿದ್ದಾರೆ, ಖಾನ್ ಸಿದ್ದರಾಮಯ್ಯ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿಯಾಗಿ ಬಿಂಬಿಸುತ್ತಿದ್ದಾರೆ. "ಅಂತಹ ವ್ಯತ್ಯಾಸ(ವಲಸಿಗರು ಮತ್ತು ಸ್ಥಳೀಯರು)ವನ್ನು ತರುವುದು ತಪ್ಪು. ಒಮ್ಮೆ ಅವರು ಕಾಂಗ್ರೆಸ್ ಗೆ ಸೇರಿದ್ದರೆ ಅವರೆಲ್ಲರೂ ಕಾಂಗ್ರೆಸ್ಸಿಗರು. ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದೇವೆ" ಎಂದು ಅವರು ಹೇಳಿದರು. ಚುನಾವಣೆಯಲ್ಲಿ ಗೆಲ್ಲುವುದು ಪಕ್ಷಕ್ಕೆ ಆದ್ಯತೆಯಾಗಿದೆ ಮತ್ತು ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್ ಶಿಫಾರಸುಗಳ ಮೇಲೆ ನಿರ್ಧರಿಸಲಾಗುವುದು ಎಂದು ಬಬಲೇಶ್ವರ ಶಾಸಕರು ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ ನಂತರ ಲಿಂಗಾಯತರಲ್ಲಿ ನಾಯಕತ್ವದ ಶೂನ್ಯತೆ ಬಗ್ಗೆ ಕೇಳಿದಾಗ, ಪಾಟೀಲ್ ಅವರು ಯಡಿಯೂರಪ್ಪ ಒಬ್ಬ ಎತ್ತರದ ನಾಯಕ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಸಮುದಾಯದ ಎರಡನೇ ಸಾಲಿನ ನಾಯಕರು, ಖಂಡ್ರೆ ಮತ್ತು ಬೊಮ್ಮಾಯಿ, ಯತ್ನಾಳ್ ಮತ್ತಿತರರೌ ಕೂಡ ಇದ್ದಾರೆ.ಬಿಜೆಪಿಯಲ್ಲಿ ಬೆಲ್ಲದ್  ಅಂತಹಾ ಒಂದು ಹೊಸ ಹೆಸರಾಗಿದೆ" ಎಂದರು.

ಒಬ್ಬ ನಾಯಕನನ್ನು ಸಿಎಂ ಆಗಿ ನೇಮಕ ಮಾಡಲು ನಿರ್ಧರಿಸುವುದು ಜನರ ಜವಾಬ್ದಾರಿಯಾಗಿದೆಯೇ ಹೊರತು ಸ್ವಯಂ ಪ್ರಮಾಣೀಕರಣದ ಮೂಲಕ ಅಲ್ಲ ಎಂದು ಅವರು ಹೇಳಿದರು. ಲಸಿಕೆ ಅಭಿಯಾನ ಸಾಂಕ್ರಾಮಿಕ ಅಲೆಗಳ ವಿರುದ್ಧ ಹೋರಾಡುವ ಪ್ರಮುಖ ಮಾರ್ಗವಾಗಿದೆ ಎಂದು ಮಾಜಿ ಸಚಿವರು ಗಮನಸೆಳೆದರು ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇದರಲ್ಲಿ ವಿಫಲವಾಗಿವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com