ಸಿಂಧಗಿಯಲ್ಲಿ ಜೆಡಿಎಸ್ ಗೆ ಆಘಾತ: ಠೇವಣಿ ಕಳೆದುಕೊಂಡಿದ್ದಕ್ಕೆ ಗೌಡರು ಕೊತಕೊತ; ಹಳೇ ಮೈಸೂರು ಭಾಗದಲ್ಲಿಯೂ ಸಂಕಷ್ಟ!

ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಫಲಿತಾಂಶ ಜೆಡಿಎಸ್ ಗೆ ಆಘಾತ ಉಂಟುಮಾಡಿದೆ, ಹಳೇ ಮೈಸೂರು ಭಾಗದಲ್ಲಿರುವಂತೆ ಜೆಡಿಎಸ್ ಗೆ ಭದ್ರ ನೆಲೆಯಿಲ್ಲದಂತಾಗಿದೆ.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಫಲಿತಾಂಶ ಜೆಡಿಎಸ್ ಗೆ ಆಘಾತ ಉಂಟುಮಾಡಿದೆ, ಹಳೇ ಮೈಸೂರು ಭಾಗದಲ್ಲಿರುವಂತೆ ಜೆಡಿಎಸ್ ಗೆ ಭದ್ರ ನೆಲೆಯಿಲ್ಲದಂತಾಗಿದೆ.

ದಿವಂಗತ ಸಿಎಂ ಮನಗೂಳಿ ಸೇರಿದಂತೆ ಉತ್ತರ ಕರ್ನಾಟಕದ ಸುಮಾರು 6 ಜೆಡಿಎಸ್ ಶಾಸಕರುತಮ್ಮ ವರ್ಚಸ್ಸಿನಿಂದಲೇ ಗೆಲವು ಸಾಧಿಸಿದ್ದರು.  ವಿಧಾನಸಭೆ ಚುನಾವಣೆಯಲ್ಲಿ ಇವರ ಗೆಲುವಿಗೆ ಪಕ್ಷ ಎರಡನೇ ಪಾತ್ರ ವಹಿಸಿತ್ತು.  ಆದರೆ ಉಪಚುನಾವಣೆಯಲ್ಲಿನ ಸೋಲು, ವಿಶೇಷವಾಗಿ ಸಿಂದಗಿಯಲ್ಲಿ, ಪಕ್ಷವು ವರ್ಚಸ್ಸಿರುವ ನಾಯಕನನ್ನು ಕಣಕ್ಕೆ ಇಳಿಸದಿದ್ದರೆ ಪ್ರಯೋಜನವಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ನೀಡಿತು.

ಯಾವುದೇ ಭದ್ರನೆಲೆಯಿಲ್ಲದ ಹಾನಗಲ್‌ನಲ್ಲಿ ತನ್ನ ಅಭ್ಯರ್ಥಿ ನಿಯಾಜ್ ಶೇಕ್ ಅವರನ್ನು ಕಣಕ್ಕಿಳಿಸುವ ಮೂಲಕ ಪಕ್ಷವು ಕೇವಲ 927 ಮತಗಳನ್ನು ಗಳಿಸಿ ಅವಮಾನವನ್ನು ಎದುರಿಸಿತು. ಜೆಡಿಎಸ್ ನ ಈ ನಿರ್ಧಾರದಿಂದ ಅಲ್ಪಸಂಖ್ಯಾತರು ಕಾಂಗ್ರೆಸ್ ಅಭ್ಯರ್ಥಿಗೆ ಮತಚಲಾಯಿಸಿದರು.  ಇನ್ನೂ ದಕ್ಷಿಣದಲ್ಲಿ  ಜೆಡಿಎಸ್ ಐದು ಜಿಲ್ಲೆಗಳಲ್ಲಿ ಪ್ರಬಲ ನೆಲೆಯನ್ನು ಹೊಂದಿದೆ, ಆದರೆ ಸ್ವತಂತ್ರವಾಗಿ ಸ್ಪರ್ಧಿಸಿ ನಾಲ್ಕು ಬಾರಿ ಗೆದ್ದ ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ಅವರಂತಹ ನಾಯಕರು ಪಕ್ಷವನ್ನು ತೊರೆಯಲು ಮುಂದಾಗಿರುವುದರಿಂದ ಸಮಸ್ಯೆ ಎದುರಾಗಿದೆ. ಗುಬ್ಬಿ ಶಾಸಕ ಶ್ರೀನಿವಾಸ್ ಅವರು ತಮ್ಮದೇ ಚರಿಷ್ಮಾ ಮೂಲಕ ಗೆಲ್ಲಬಹುದು ಎಂದು ಭಾವಿಸಿದ್ದಾರೆ.

ಹಿರಿಯ ನಾಯಕ, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದೇವೇಗೌಡರು ಪಕ್ಷ ತೊರೆಯುವುದಾಗಿ ಎಂದಾದರೂ ಹೇಳಿದ್ದಾರಾ? ನನ್ನ ಮೊಮ್ಮಗ ನಿಖಿಲ್ ಮತ್ತು ಅವರ ಮಗ ಹರೀಶ್ ಮಾತುಕತೆ ನಡೆಸಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.

ಉಪ ಚುನಾವಣೆ ಫಲಿತಾಂಶ 2023ರ ವಿಧಾನಸಭೆ ಚುನಾವಣೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ  ಹೇಳಿದ್ದರೂ ದೇವೇಗೌಡರು ಸಿಂದಗಿ ಫಲಿತಾಂಶದಿಂದ ಅಸಮಾಧಾನ ಗೊಂಡಿದ್ದಾರೆ. ತೀವ್ರ ಪ್ರಚಾರ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ನೀರಾವರಿಗೆ ಕೊಡುಗೆ ನೀಡಿದರೂ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿ ಕಳೆದುಕೊಂಡಿರುವುದು ಅವರ ಆತಂಕಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com