ವಿಧಾನ ಪರಿಷತ್ ಚುನಾವಣೆ: ಕಿತ್ತೂರು ಕರ್ನಾಟಕದಲ್ಲಿ ಯಡಿಯೂರಪ್ಪ ವರ್ಚಸ್ಸಿನ ಲಾಭ ಪಡೆಯುವ ಆಶಯದಲ್ಲಿ ಬಿಜೆಪಿ!

 ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹಮ್ಮಿಕೊಂಡಿರುವ ಜನಸ್ವರಾಜ್ ಯಾತ್ರೆಯ ಲಾಭವನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಬಂಡವಾಳವಾಗಿಸಿಕೊಳ್ಳಲು ಬಿಜೆಪಿ ಮುಂದಾಗಿದೆ
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ

ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹಮ್ಮಿಕೊಂಡಿರುವ ಜನಸ್ವರಾಜ್ ಯಾತ್ರೆಯ ಲಾಭವನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಬಂಡವಾಳವಾಗಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.

ಈ ಭಾಗದಲ್ಲಿ ಒಟ್ಟು 7 ವಿಧಾನಪರಿಷತ್ ಸ್ಥಾನಗಳಿವೆ, ಅದರಲ್ಲಿ ಮೂರು ಬಿಜೆಪಿ ಪಾಲಾಗಿದ್ದು ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸದಸ್ಯರಿದ್ದಾರೆ.

ಈ ಪ್ರದೇಶದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಅಧಿಕವಾಗಿದ್ದರೂ, ಯಡಿಯೂರಪ್ಪ ಇತರ ಸಮುದಾಯಗಳ ಮೇಲೆಯೂ ಭಾರಿ ಪ್ರಭಾವ ಬೀರಿದ್ದಾರೆ. ಪಕ್ಷವು ಅವರ ಜನಪ್ರಿಯತೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಬಯಸುತ್ತದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಗೋವಿಂದ್ ಕಾರಜೋಳ ಮತ್ತು ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತ್‌ಕುಮಾರ್ ಮತ್ತು ಎಂ ಬಿ ನಂದೀಶ್ ಅವರನ್ನೊಳಗೊಂಡ ಅವರ ತಂಡವು ಈ ಪ್ರದೇಶದಲ್ಲಿ ಯಾತ್ರೆ ಕೈಗೊಳ್ಳಲಿದೆ.

ನಾಲ್ಕು ಕ್ಷೇತ್ರಗಳಾದ ಬೆಳಗಾವಿ, ವಿಜಯಪುರ, ಧಾರವಾಡ ಮತ್ತು ಕಾರವಾರಗಳಾಗಿವೆ,  ಮೊದಲ ಮೂರು ಕ್ಷೇತ್ರಗಳು ದ್ವಿಸದಸ್ಯ ವಿಭಾಗಗಳಾಗಿದ್ದು, ಕಾರವಾರ ಸ್ಥಳೀಯ ಸಂಸ್ಥೆಯಿಂದ ಒಬ್ಬ ಸದಸ್ಯನನ್ನು ಆಯ್ಕೆ ಮಾಡಲಾಗುತ್ತದೆ.

ವಿಜಯಪುರದಲ್ಲಿ ಕಾಂಗ್ರೆಸ್ ಎರಡೂ ಸ್ಥಾನಗಳನ್ನು ಹೊಂದಿದ್ದರೆ, ಬೆಳಗಾವಿಯಲ್ಲಿ ಬಿಜೆಪಿ ಮೇಲ್ಮನೆಯಲ್ಲಿ ಎರಡೂ ಸ್ಥಾನಗಳನ್ನು ಪ್ರತಿನಿಧಿಸುತ್ತಿದೆ. ಧಾರವಾಡದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ತಲಾ ಒಂದು ಸ್ಥಾನವನ್ನು ಹೊಂದಿದ್ದರೆ, ಉತ್ತರ ಕನ್ನಡ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದೆ. ಈಗ ಈ ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯವಾಗಿರುವ ಕಾರಣ ಹೋರಾಟ ತೀವ್ರವಾಗಲಿದೆ.

ಜನ ಸ್ವರಾಜ್ ಯಾತ್ರೆಗಾಗಿ ರಚಿಸಲಾಗಿರುವ ನಾಲ್ಕು ತಂಡಗಳಲ್ಲಿ ಯಡಿಯೂರಪ್ಪ ಅವರ ತಂಡವೂ ಒಂದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ತಿಳಿಸಿದ್ದಾರೆ.

ತಂಡವು ಪ್ರತಿ ದಿನ ಎರಡು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ನವೆಂಬರ್ 19 ರಂದು ಉತ್ತರ ಕನ್ನಡದಿಂದ ಆರಂಭಗೊಂಡು ನಂತರ ಧಾರವಾಡ ಮತ್ತು ಗದಗ, ಮೂರನೇ ದಿನ ಬಾಗಲಕೋಟೆ ಮತ್ತು ವಿಜಯಪುರ, ಮತ್ತು ಕೊನೆಯ ದಿನ ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಪ್ರವಾಸ ಮಾಡಲಿದೆ.

ಜನಸ್ವರಾಜ್ ಯಾತ್ರೆಯ ಸಂದರ್ಭದಲ್ಲಿ ಮತದಾರರ ಸಂಪರ್ಕ ಕಾರ್ಯಕ್ರಮಗಳ ಜೊತೆಗೆ ಸಾರ್ವಜನಿಕ ರ್ಯಾಲಿಗಳೂ ನಡೆಯಲಿವೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ಪಕ್ಷ ಸ್ವರಾಜ್ ಯಾತ್ರೆ ನಡೆಸಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com