ಮೊದಲ ಪ್ರಾಶಸ್ತ್ಯದ ಮತ ಬಿಜೆಪಿಗೆ, ಎರಡನೇ ಮತ ಕಾಂಗ್ರೆಸ್ ಗೆ ಹಾಕಬೇಡಿ: ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಮರ್ಮವೇನು?

ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತವನ್ನು ಬಿಜೆಪಿಗೆ ಹಾಕಿ, ಎರಡನೇ ಮತ ಕಾಂಗ್ರೆಸ್​​ಗೆ ಹಾಕದಂತೆ ಮನವಿ ಮಾಡುವುದಾಗಿ ಕೆಎಂಎಫ್ ‌ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹೇಳಿದ್ದಾರೆ.
ಲಖನ್ ಜಾರಕಿಹೊಳಿ
ಲಖನ್ ಜಾರಕಿಹೊಳಿ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತವನ್ನು ಬಿಜೆಪಿಗೆ ಹಾಕಿ, ಎರಡನೇ ಮತ ಕಾಂಗ್ರೆಸ್​​ಗೆ ಹಾಕದಂತೆ ಮನವಿ ಮಾಡುವುದಾಗಿ ಕೆಎಂಎಫ್ ‌ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, 2ನೇ ಮತ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಮತ ನೀಡುವಂತೆ ಪರೋಕ್ಷವಾಗಿ ಕೇಳಿದರು. ರಮೇಶ್ ಜತೆಗೆ ಇದೀಗ ಬಾಲಚಂದ್ರ ಕೂಡ ಲಖನ್ ಪರ ಮತಯಾಚನೆ ಮಾಡುತ್ತಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ  ಸಹಕಾರಿ ಪ್ರತಿನಿಧಿಗಳ ಸಭೆ ಕರೆಯಲಾಗಿತ್ತು. ಈ ಸಭೆಗೆ ಡಿಸಿಸಿ ಬ್ಯಾಂಕ್, ಕೆಎಂಎಫ್ ನಿರ್ದೇಶಕರು ಆಗಮಿಸಿದ್ದರು.

ಈ ಸಭೆ ಬಳಿಕ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ‌, 'ಪಕ್ಷಕ್ಕೆ ಅನುಕೂಲ ಆಗಬೇಕೆಂಬ ದೃಷ್ಟಿಯಿಂದ ಸಭೆ ಮಾಡಿ, ಯಾರಿಗೇನು ಜವಾಬ್ದಾರಿ ನೀಡಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಈ ಚುನಾವಣೆಯಲ್ಲಿ ಯಾರೂ ನಿರ್ಣಾಯಕ ಅಲ್ಲ. ನಾನು ಬಿಜೆಪಿ ಪರ ಕೆಲಸ ಮಾಡುತ್ತಿದ್ದೇನೆ. ಬೆಳಗಾವಿ ಜಿಲ್ಲೆಯಿಂದ ಇಬ್ಬರು ಅಭ್ಯರ್ಥಿಗಳು ಗೆಲ್ಲಬೇಕು. ನಾವು ಬಿಜೆಪಿ ಗೆಲ್ಲಿಸಲು ಏನು ಪ್ರಯತ್ನ ಬೇಕೋ ಅದನ್ನು ಮಾಡುತ್ತಿದ್ದೇವೆ' ಎಂದರು.

ಇನ್ನು ಕೆಲವು ಮತದಾರರು, ನಾಯಕರು ಅವರವರೇ ಸ್ವಂತ ನಿರ್ಧಾರ ತೆಗೆದುಕೊಂಡು ಚುನಾವಣೆ ಮಾಡುತ್ತಿದ್ದಾರೆ. ಫಲಿತಾಂಶ ಏನಾಗುತ್ತದೆ ಎಂಬುವುದು ಗೊತ್ತಾಗಲಿದೆ. ಚುನಾವಣೆ ಎಂದ ಮೇಲೆ ಎಲ್ಲ ಕಡೆಯಿಂದ ಆರೋಪಗಳು ಬರುತ್ತವೆ.

ಪಕ್ಷಾತೀತವಾಗಿ, ಶಾಸಕರಾದ ರಮೇಶ್ ಜಾರಕಿಹೊಳಿ (ಬಿಜೆಪಿ), ಸತೀಶ್ ಜಾರಕಿಹೊಳಿ (ಕಾಂಗ್ರೆಸ್) ಮತ್ತು ಬಾಲಚಂದ್ರ ಜಾರಕಿಹೊಳಿ (ಬಿಜೆಪಿ) ಒಟ್ಟಾಗಿ ಲಖನ್ ಅವರ ಚುನಾವಣಾ ಕಾರ್ಯತಂತ್ರವನ್ನು ರೂಪಿಸಿದ್ದು, ಉಭಯ ಸದಸ್ಯ ಬೆಳಗಾವಿ ಕ್ಷೇತ್ರದಲ್ಲಿ `ಮೊದಲ ವಿಜೇತ'ರಾಗಿ ಹೊರಹೊಮ್ಮಲು ಸಹಾಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಸಹೋದರರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಗಳನ್ನು ಸಕ್ರಿಯವಾಗಿ ನಡೆಸುವ ಮೂಲಕ ಅದೇ ಸಮಯದಲ್ಲಿ ಸಮತೋಲನದ ಕಾರ್ಯವನ್ನು ಮುಂದುವರೆಸುತ್ತಾರೆ ಎಂದು ಹೇಳಿದರು.

ಉಭಯ ಸದಸ್ಯ ಬಲದ ಬೆಳಗಾವಿ ಕ್ಷೇತ್ರದಲ್ಲಿ ಲಖನ್ ಮೊದಲ ವಿಜೇತರಾಗಿ ಮತ್ತು ಕವಟಗಿಮಠ ಅವರನ್ನು ಎರಡನೇ ವಿಜೇತರಾಗಿ ಗೆಲ್ಲಿಸಲು ಅವರೆಲ್ಲರಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಜಾರಕಿಹೊಳಿ ಸಹೋದರರ ಆಪ್ತ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com