ಸಣ್ಣವರ ಲೂಟಿ ಇಷ್ಟಿರುವಾಗ ದೊಡ್ಡವರ ದರೋಡೆ ಎಸ್ಟಿರಬಹುದು? ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ವಿಸ್ತಾರ ಎಷ್ಟಿರಬಹುದು?
ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಸಹಾಯಕನ ಮನೆ ಮೇಲೆ ನಡೆದ ಐಟಿ ದಾಳಿ ಸಂಬಂಧ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
Published: 08th October 2021 02:44 PM | Last Updated: 08th October 2021 03:14 PM | A+A A-

ವಿಜಯೇಂದ್ರ
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಸಹಾಯಕನ ಮನೆ ಮೇಲೆ ನಡೆದ ಐಟಿ ದಾಳಿ ಸಂಬಂಧ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂದರೆ ವಿಧಾನಸೌಧದ ನೌಕರರು ಕೆಲಸ ಕೊಡಿಸುವ ಡೀಲಿಗಿಳಿಯುತ್ತಾರೆ. ಆರ್. ಅಶೋಕ್ ಹಾಗೂ ಶ್ರೀರಾಮುಲು ಸಹಾಯಕರು ವಸೂಲಿ, ಡೀಲ್‌ಗಳಲ್ಲಿ ತೊಡಗುತ್ತಾರೆ ಎಂದು ಟ್ವೀಟ್ ಮಾಡಿದೆ.
'@BJP4Karnataka ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂದರೆ ವಿಧಾನಸೌಧದ ನೌಕರರು ಕೆಲಸ ಕೊಡಿಸುವ ಡೀಲಿಗಿಳಿಯುತ್ತಾರೆ.@RAshokaBJP ಹಾಗೂ @sriramulubjp ಸಹಾಯಕರು ವಸೂಲಿ, ಡೀಲ್‌ಗಳಲ್ಲಿ ತೊಡಗುತ್ತಾರೆ.@BSYBJP ಸಹಾಯಕ 2000 ಕೋಟಿ ದೋಚುತ್ತಾನೆ.
— Karnataka Congress (@INCKarnataka) October 8, 2021
ಸಣ್ಣವರ ಲೂಟಿ ಇಷ್ಟಿರುವಾಗ ದೊಡ್ಡವರ ದರೋಡೆ ಎಸ್ಟಿರಬಹುದು?#ಭ್ರಷ್ಟಜನತಾಪಾರ್ಟಿ
ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ 2000 ಕೋಟಿ ದೋಚುತ್ತಾನೆ. ಸಣ್ಣವರ ಲೂಟಿ ಇಷ್ಟಿರುವಾಗ ದೊಡ್ಡವರ ದರೋಡೆ ಎಸ್ಟಿರಬಹುದು? ಎಂದು ಪ್ರಶ್ನಿಸಿದೆ. ಯಡಿಯೂರಪ್ಪ ಅವರ ಆಪ್ತ ಸಹಾಯಕನ ಮೇಲಾದ ಐಟಿ ದಾಳಿಯೇ ಎಲ್ಲವನ್ನೂ ಹೇಳುತ್ತಿದೆ. ಸಾರಿಗೆ ನೌಕರನಾಗಿದ್ದವನು ಸಹಾಯಕನಾದ ಮಾತ್ರಕ್ಕೆ 2000 ಕೋಟಿ ಆಸ್ತಿಯ ಒಡೆಯ ಎಂದಾದರೆ, ರೈಸ್ ಮಿಲ್‌ನಲ್ಲಿ ಲೆಕ್ಕ ಬರೆಯುತ್ತಿದ್ದವರು ಇನ್ನೆಷ್ಟು ಕೋಟಿ ಒಡೆಯನಾಗಿರಬಹುದು ಎಂದು ಚಾಟಿ ಬೀಸಿದೆ.
ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿದ್ದು ಅವರ ಹಾಗೂ ಸಹಾಯಕರ ಭ್ರಷ್ಟಾಚಾರ ಮಿತಿ ಮೀರಿದ್ದಕ್ಕಾ? ಈಗಲಾದರೂ ಉತ್ತರಿಸಿ ,ಸಹಾಯಕರು, ಅಡುಗೆಯವರಿಂದ ಹಿಡಿದು ಮನೆಕೆಲಸದವರವರೆಗೂ ಕೋಟಿ ಕೋಟಿಗಳಲ್ಲಿ ಕೋಟೆ ಕಟ್ಟಿದ್ದಾರೆ ಎಂದಾದರೆ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಲೂಟಿಯ ಕಬಂದಬಾಹುಗಳ ವಿಸ್ತಾರ ಎಸ್ಟಿರಬಹುದು? ಎಂದು ಪ್ರಶ್ನಿಸಿದೆ.
'@BSYBJP ಅವರನ್ನು ಪದಚ್ಯುತಿಗೊಳಿಸಿದ್ದು ಅವರ ಹಾಗೂ ಸಹಾಯಕರ ಭ್ರಷ್ಟಾಚಾರ ಮಿತಿ ಮೀರಿದ್ದಕ್ಕಾ?
— Karnataka Congress (@INCKarnataka) October 8, 2021
ಈಗಲಾದರೂ ಉತ್ತರಿಸಿ @BJP4Karnataka.
ಸಹಾಯಕರು, ಅಡುಗೆಯವರಿಂದ ಹಿಡಿದು ಮನೆಕೆಲಸದವರವರೆಗೂ ಕೋಟಿ ಕೋಟಿಗಳಲ್ಲಿ ಕೋಟೆ ಕಟ್ಟಿದ್ದಾರೆ ಎಂದಾದರೆ #VijayendraServiceTax ಲೂಟಿಯ ಕಬಂದಬಾಹುಗಳ ವಿಸ್ತಾರ ಎಸ್ಟಿರಬಹುದು?#ಭ್ರಷ್ಟಜನತಾಪಾರ್ಟಿ