ಬೆಂಗಳೂರು ಉಸ್ತುವಾರಿಯನ್ನು ವಿಭಾಗಿಸಿ ಇಬ್ಬರು ಸಚಿವರಿಗೆ ಜವಾಬ್ದಾರಿ ನೀಡಲಿ: ವಿ. ಸೋಮಣ್ಣ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿಯನ್ನು ವಿಭಾಗಿಸಿ ಇಬ್ಬರು ಸಚಿವರಿಗೆ ಜವಾಬ್ದಾರಿ ನೀಡಲಿ ಎಂದು ಸಚಿವ ವಿ.ಸೋಮಣ್ಣ ಅವರು ಪ್ರಸ್ತಾಪವಿಟ್ಟಿದ್ದಾರೆ.
ಆರ್.ಅಶೋಕ್ ಮತ್ತು ಸೋಮಣ್ಣ
ಆರ್.ಅಶೋಕ್ ಮತ್ತು ಸೋಮಣ್ಣ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿಯನ್ನು ವಿಭಾಗಿಸಿ ಇಬ್ಬರು ಸಚಿವರಿಗೆ ಜವಾಬ್ದಾರಿ ನೀಡಲಿ ಎಂದು ಸಚಿವ ವಿ.ಸೋಮಣ್ಣ ಅವರು ಪ್ರಸ್ತಾಪವಿಟ್ಟಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಬೆಂಗಳೂರು ಉಸ್ತುವಾರಿಯನ್ನು ತಮಗರ್ಧ ಹಾಗೂ ಇನ್ನರ್ಧ ಅಶೋಕ್‌ಗೆ ನೀಡಲಿ. ನಾನು ಹಿಂದೆ ಸಚಿವ ಆಗಿದ್ದಾಗ ಅಶೋಕ್ ಇನ್ನೂ ಶಾಸಕರಾಗಿರಲಿಲ್ಲ. ನಾನು ಸಭೆ ಕರೆದಿದ್ದಾಗ ಅಶೋಕ್ ಬಂದಿರಲಿಲ್ಲ. ನಾನು ಏನು ಮಾಡಲಿ?. ಅವರು ಸಭೆ ಕರೆದರೆ ನಾನು ಹೋಗುತ್ತೇನೆ. ನಾನು ಸಭೆ ಕರೆದರೆ ಅವರು ಬರಬೇಕು. ಇಲ್ಲ ಅಂದರೆ ಅವರಿಗೆ ಲಾಸ್. ಮನೆಗಳನ್ನು ನಮ್ಮ ಕಾರ್ಯಕರ್ತರಿಗೆ ಕೊಡುತ್ತೇನೆ ಅಷ್ಟೇ. ನಾನು ಸೀನಿಯರ್ ಇದ್ದೇನೆ ಎಂದರು.

ಅವರಿಗೆ ಸಾಮ್ರಾಟ್ ಎಂದು ಅವರ ಅಪ್ಪ ಅಮ್ಮ ಏಕೆ ಹೆಸರಿಟ್ಟರೋ ಗೊತ್ತಿಲ್ಲ. ಅವನು ಸಾಮ್ರಾಟ್ ಥರನೇ ಆಡುತ್ತಾನೆ ಎಂದು ಸಚಿವ ಆರ್ ಅಶೋಕ್‌ ಅವರ ಬಗ್ಗೆ ಸೋಮಣ್ಣ ಲೇವಡಿ ಮಾಡಿದರು‌.

ನನಗೆ ದುರಹಂಕಾರ ಇಲ್ಲ, ನನಗೆ ಪಕ್ಷವೇ ಮುಖ್ಯ. ನನಗೆ ಬೆಂಗಳೂರು ಉಸ್ತುವಾರಿ ಕೊಟ್ಟರೆ ನಿಭಾಯಿಸ್ತೇನೆ. ಗಾಡಿ ಇನ್ನೂ ಕೂಡಾ ಬೆಂಝ್ ಇದ್ದ ಹಾಗೆ ಇದೆ. ನನಗೆ ಜನಸಾಮಾನ್ಯರ ಜೊತೆ ಉತ್ತಮ ಒಡನಾಟವಿದೆ. ನನಗೆ ಉಸ್ತುವಾರಿ ಕೊಟ್ರೆ ಹೈಕ್ಲಾಸ್ ಆಗಿ ನಿಭಾಯಿಸ್ತೇನೆ. ಬೆಂಗಳೂರು ನಗರಕ್ಕೆ ಯಾರನ್ನೂ ಉಸ್ತುವಾರಿ ಮಾಡಿಲ್ಲ. ಈಗ ಇರುವ ಉಸ್ತುವಾರಿ ಕೊವಿಡ್‌ಗಾಗಿ ಮಾಡಿದ್ದು. ಅಶೋಕ್ ಹೇಗೆ ಸಭೆ ನಡೆಸ್ತಾರೆಂದು ಸಿಎಂ ಕೇಳಬೇಕು. 3-4 ದಿನಗಳಲ್ಲಿ ಉಸ್ತುವಾರಿ ಯಾರೆಂದು ತಿಳಿಯುತ್ತೆ. ಅಶೋಕ್‌ಗೆ ಕೊಡ್ತಾರಾ, ನನಗೆ ಉಸ್ತುವಾರಿ ಕೊಡ್ತಾರಾ. ಎರಡು ಉಸ್ತುವಾರಿ ಮಾಡ್ತಾರಾ ಎಂದು ತಿಳಿಯುತ್ತದೆ ಎಂದಿದ್ದಾರೆ.

ಇನ್ನೂ ಬೆಂಗಳೂರಿನ ಉಸ್ತುವಾರಿ ನನಗೇ ನೀಡಬೇಕೆಂದು ಎಂದಿಗೂ ನಾನು ಸಿಎಂ ಬಳಿ ಬೇಡಿಕೆ ಇಟ್ಟಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸಚಿವ ವಿ.ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಬೇಕೆಂಬುದು ಸಿಎಂ ವಿವೇಚನೆಗೆ ಬಿಟ್ಟಂತಹ ವಿಚಾರ. ರಾಜ್ಯದ 31 ಜಿಲ್ಲೆಗಳಿಗೂ ಯಾರನ್ನು ಉಸ್ತುವಾರಿಯಾಗಿ ಮಾಡಬೇಕು ಎಂಬುದು ಸಿಎಂ ಪರಮಾಧಿಕಾರ. ಅವರ ವಿವೇಚನೆಗೆ ಎಲ್ಲವನ್ನೂ ಬಿಟ್ಟಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com