ಜೆಡಿಎಸ್ ಸೇರ್ಪಡೆಗೂ ಮುನ್ನ ಸಮುದಾಯ ಸದಸ್ಯರ ಮನಸ್ಥಿತಿ ಅರಿಯಲು ಮುಂದಾದ ಸಿಎಂ ಇಬ್ರಾಹಿಂ!

ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ ಎಂಎಲ್'ಸಿ ಸಿಎಂ ಇಬ್ರಾಹಿಂ ಅವರು, ಇದಕ್ಕೂ ಮುನ್ನು ಸಮುದಾಯ ಸದಸ್ಯರ ಮನಸ್ಥಿತಿ ಅರಿಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. 
ಸಿಎಂ ಇಬ್ರಾಹಿಂ
ಸಿಎಂ ಇಬ್ರಾಹಿಂ

ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ ಎಂಎಲ್'ಸಿ ಸಿಎಂ ಇಬ್ರಾಹಿಂ ಅವರು, ಇದಕ್ಕೂ ಮುನ್ನು ಸಮುದಾಯ ಸದಸ್ಯರ ಮನಸ್ಥಿತಿ ಅರಿಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. 

ಇದಕ್ಕಾಗಿ ಸಮುದಾಯದ ಸದಸ್ಯರ ನಡುವೆ ತಮ್ಮ ಜನರನ್ನು ನಿಲ್ಲಿಸಿ, ಅವರ ಮನಸ್ಥಿತಿ ಅರಿಯುವ ಪ್ರಯತ್ನ ಮಾಡುತ್ತಿದ್ದು, ನಂತರ ಪ್ರಾದೇಶಿಕ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ವರದಿಗಳು ತಿಳಿಸಿವೆ. 

ದೇಶದ ಪ್ರಧಾನಿಯಾದ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆಗೆ ಹೆಚ್.ಡಿ.ದೇವೇಗೌಡ ಅವರು ಪಾತ್ರರಾಗಿದ್ದು, ದೇವೇಗೌಡ ನೇತೃತ್ವದ ಕೇಂದ್ರದ ಯುಡಿಎಫ್ ಸರ್ಕಾರದಲ್ಲಿ ಇಬ್ರಾಹಿಂ ಅವರು, 11 ತಿಂಗಳ ಕಾಲ ನಾಗರಿಕ ವಿಮಾನಯಾನ ಖಾತೆಯನ್ನು ನಿರ್ವಹಿಸಿದ್ದರು. 

ತುಮಕೂರಿನಲ್ಲಿ ತಮ್ಮ ಸಮುದಾಯದ ಸದಸ್ಯರೊಂದಿಗೆ ನಿನ್ನೆಯಷ್ಟೇ ಇಬ್ರಾಹಿಂ ಅವರು ಸಭೆ ನಡೆಸಿ ಮಾತುಕತೆ ನಡೆಸಿದ್ದರು. 

ಈ ವೇಳೆ ಅಲ್ಪಸಂಖ್ಯಾತರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ನಾನು ಕೆಲ ಮೂಲಭೂತ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡಿದ್ದೆ. ಆದರೆ, ಇದಕ್ಕೆ ಕೆಪಿಸಿಸಿ ಯಾವುದೇ ರೀತಿಯ ಉತ್ತರವನ್ನು ನೀಡಲಿಲ್ಲ. ಅಲ್ಪಸಂಖ್ಯಾತ ನಾಯಕರೇಕೆ ಕೆಪಿಸಿಸಿ ಅಧ್ಯಕ್ಷರಾಗಬಾರದು? ಸ್ವಾತಂತ್ರ್ಯ ಬಂದಾಗಿನಿಂದಲೂ ಈ ವರೆಗೂ ನಮ್ಮ ಸಮುದಾಯದ ಯಾವುದೇ ನಾಯಕನಿಗೂ ಆ ಸ್ಥಾನವನ್ನು ನೀಡಿಲ್ಲ. ಕನಿಷ್ಠ, ಸಮುದಾಯದ ಒಬ್ಬ ನಾಯಕನನ್ನು ಉಪ ಮುಖ್ಯಮಂತ್ರಿಯಾಗಿ ಘೋಷಿಸಿ ಎಂದು ಕೇಳಿದ್ದೆ. ಆದರೆ, ಅದಾವುದಕ್ಕೂ ಉತ್ತರ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

2023ರ ಜನವರಿ ವೇಳೆಗೆ ಖಾಲಿಯಿರಲಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಸ್ಥಾನಕ್ಕೆ ಇಬ್ರಾಹಿಂ ಅವರು ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಅದಕ್ಕಿಂತಲೂ ದೊಡ್ಡ ಸ್ಥಾನ ಪಕ್ಷದ ಅಧ್ಯಕ್ಷ ಸ್ಥಾನವನ್ನೇ ನೀಡುವ ಆಫರ್ ನೀಡಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ 2023 ವಿಧಾನಸಬೆ ಚುನಾವಣೆಗೂ ಮುನ್ನ ಇಬ್ರಾಹಿಂ ಅವರು ಜೆಡಿಎಸ್ ಪಕ್ಷ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಏತನ್ಮಧ್ಯೆ, ಇಬ್ರಾಹಿಂ ಅಲ್ಪಸಂಖ್ಯಾತರ ವೇದಿಕೆಯನ್ನು ಆರಂಭಿಸಲು ಸಜ್ಜಾಗಿದ್ದಾರೆಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತ ಸಮುದಾಯದ ಕೆಲವು ಉನ್ನತ ನಾಯಕರು ಮತ್ತು ವಿಚಾರವಾದಿಗಳು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದಲ್ಲಿ, ಪಕ್ಷದಿಂದ ಜೆಡಿಎಸ್ ಗೆ ಮತ್ತು ಎಐಎಂಐಎಂನಂತಹ ಇತರ ಪಕ್ಷಗಳಿಗೆ ಸೇರ್ಪಡೆಗೊಳ್ಳಲು ಮುಂದಾಗಿರುವವರ ಕುರಿತು ಪರಿಶೀಲನೆ ನಡೆಸಲು ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಆದರೆ, ಈ ಕುರಿತು ಸುದ್ದಿಗಳನ್ನು ಕಾಂಗ್ರೆಸ್ ನಾಯಕ ರಿಜ್ವಾನ್ ಹರ್ಷದ್ ಅವರು ತಿರಸ್ಕರಿಸಿದ್ದಾರೆ. ಇತರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುವ ಪರಿಸ್ಥಿತಿಗಳು ಎದುರಾಗಿದ್ದೇ ಆದರೆ, ಪರಿಸ್ಥಿತಿ ಎದುರಿಸಲು ಒಬ್ಬ ಸಾಮೂಹಿಕ ನಾಯಕ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com