ಉಪಚುನಾವಣೆಯಲ್ಲಿ 'ಪವಾಡ' ಮಾಡಲಿದ್ದಾರಾ ಬಿಎಸ್ ವೈ: ಎಲ್ಲರ ಚಿತ್ತ ಪ್ರಚಾರಕ್ಕೆ ಹೊರಟಿರುವ ಯಡಿಯೂರಪ್ಪನವರತ್ತ!

ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಗೆಲ್ಲಲು ಬಿಜೆಪಿ ವಿಶೇಷವಾದದ್ದನ್ನೇ ಮಾಡಬೇಕಿದೆ, ಏಕೆಂದರೇ ಗ್ರೌಂಡ್ ರಿಪೋರ್ಟ್ ಪ್ರಕಾರ ಫಲಿತಾಂಶ ಬಿಜೆಪಿ ಫೇವರ್ ಆಗಿಲ್ಲ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಗೆಲ್ಲಲು ಬಿಜೆಪಿ ವಿಶೇಷವಾದದ್ದನ್ನೇ ಮಾಡಬೇಕಿದೆ, ಏಕೆಂದರೇ ಗ್ರೌಂಡ್ ರಿಪೋರ್ಟ್ ಪ್ರಕಾರ ಫಲಿತಾಂಶ ಬಿಜೆಪಿ ಫೇವರ್ ಆಗಿಲ್ಲ.

ಉಪ ಚುನಾವಣೆಯಲ್ಲಿ ಯಾವಾಗಲೂ ಆಡಳಿತ ಪಕ್ಷವೇ ಜಯ ಸಾಧಿಸುವುದು ವಾಡಿಕೆ. ಆದರೆ ಈ ಬಾರಿ ಆಡಳಿತ ಪಕ್ಷದಲ್ಲಿರುವ ಅನಾನುಕೂಲದಿಂದಾಗಿ ಜಯ ಗಳಿಸಲು ಅತಿ ಹೆಚ್ಚು ಶ್ರಮಿಸುವ ಅಗತ್ಯತೆ ತೋರುತ್ತಿದೆ. 

ಉಪ ಚುನಾವಣೆಗೆ ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಸ್ಟಾರ್ ಪ್ರಚಾರಕರು, ಸೋಮವಾರ ಮಧ್ಯಾಹ್ನ ಚಿತ್ರದುರ್ಗಕ್ಕೆ ಹೊರಟ ಯಡಿಯೂರಪ್ಪ ರಾತ್ರಿ ಶಿವಮೊಗ್ಗದಲ್ಲಿ ತಂಗಿದ್ದರು. ಒಂದು ವಾರಗಳ ಕಾಲು ಸುದೀರ್ಘ ಎರಡು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ, ಅವರ ಪ್ರಯಾಣದ ವೇಳಾಪಟ್ಟಿ ಸ್ಪಷ್ಟವಾಗಿಲ್ಲವಾದರೂ, ಸ್ಥಳೀಯ ನಾಯಕರು ಅವರ ದಿನನಿತ್ಯದ ಪ್ರವಾಸವನ್ನು ನಿರ್ಧರಿಸುತ್ತಾರೆ. ಅವರು ಮಂಗಳವಾರ ರಾತ್ರಿ ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಸಿಂದಗಿಯಿಂದ ಯಡಿಯೂರಪ್ಪ ಪ್ರಚಾರ ಆರಂಭಿಸಲಿದ್ದಾರೆ, ಯಡಿಯೂರಪ್ಪನವರ ಅನುಭವವನ್ನು ಬಿಜೆಪಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಗಣನೆಗೆ ಬರಲಿದೆ. ಸಿಂದಗಿ ನಂತರ ಯಡಿಯೂರಪ್ಪ ಹಾನಗಲ್ ಗೆ ತೆರಳಲಿದ್ದಾರೆ.  ಸಿಂದಗಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ್ ಗೆ ಹಾನಗಲ್ ಉಸ್ತುವಾರಿ ವಹಿಸಲಿದ್ದಾರೆ. ಯಡಿಯೂರಪ್ಪನವರ ಪ್ರಚಾರವು ಹೆಚ್ಚಾಗಿ ರೋಡ್ ಶೋಗಳು ಮತ್ತು ಸಭೆಗಳನ್ನು ಒಳಗೊಂಡಿರುತ್ತದೆ, ಅಲ್ಲಿ ದೊಡ್ಡ ಜನಸಮೂಹವನ್ನು ನಿರೀಕ್ಷಿಸಲಾಗಿದೆ.

ಅವರು ಇನ್ನು ಮುಂದೆ ಮುಖ್ಯಮಂತ್ರಿಯಲ್ಲದಿದ್ದರೂ, ತಳಮಟ್ಟದ ಕಾರ್ಯಕರ್ತರು ಈಗಲೂ ಅವರೊಂದಿಗೆ ಇದ್ದಾರೆ. ಪಕ್ಷದ ಮುಖಂಡರು ಮತ್ತು ಹಲವು ಶ್ರೇಣಿಯ ಸದಸ್ಯರು ಅವರನನ್ನು ಅವಲಂಬಿಸಿದ್ದಾರೆ. ಅವರು ಅಧಿಕಾರದಲ್ಲಿ ಎರಡು ವರ್ಷಗಳನ್ನು ಪೂರೈಸಿದ ವೇಳೆ ಅವರು ಸುರಿಸಿದ ಕಣ್ಣೀರನ್ನು ಬೇಗನೆ ಮರೆಯುವ ಸಾಧ್ಯತೆಯಿಲ್ಲ ಎಂದು ಪಕ್ಷದ ಒಳಗಿನವರು ಹೇಳುತ್ತಾರೆ. ಇದುವರೆಗೂ ಪಕ್ಷವು ಮಗ ಬಿ ವೈ ವಿಜಯೇಂದ್ರ ಅವರಿಗಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡದಿರುವುದಕ್ಕೆ ಯಡಿಯೂರಪ್ಪ ಅಸಮಾಧಾನ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

40 ವರ್ಷಗಳಿಂದ, ಯಡಿಯೂರಪ್ಪ ಅವರು 'ಸ್ವತಂತ್ರ ಚಿಂತನೆ'ಯ ರಾಜಕಾರಣಿಯಾಗಿದ್ದಾರೆ, ಅವರು ಪಕ್ಷದ ಮಾರ್ಗವನ್ನು ಧಿಕ್ಕರಿಸಿ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ, ಬೊಮ್ಮಾಯಿ ಏನನ್ನೂ ಮಾಡಲು ಸಾಧ್ಯವಿಲ್ಲ.

ಯಡಿಯೂರಪ್ಪನವರು ಜಾತ್ಯತೀತ ಇಮೇಜ್ ಅನುಭವಿಸಿದರು. ಇದು ಇತರ ಅನೇಕ ಬಿಜೆಪಿ ರಾಜಕಾರಣಿಗಳ ಹೆಗ್ಗಳಿಕೆಗೆ ಪಾತ್ರವಾಗಿಲ್ಲ. ಅವರು ರೈತ ಪರವಾದ ಇಮೇಜ್ ಹೊಂದಿದ್ದಾರೆ, ಇದು ಒಂದು ಪ್ಲಸ್ ಪಾಯಿಂಟ್ ಆಗಿದೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್. ಮೂರ್ತಿ ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com