ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

'ತೆನೆ' ಇಳಿಸಿ ಹೋಗುತ್ತಿರುವ ಮುಖಂಡರು: ಹೊಸ ಮುಖಗಳ ಹುಡುಕಾಟದಲ್ಲಿ ಜೆಡಿಎಸ್!

2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ತೊರೆಯಲು ತಯಾರಿ ನಡೆಸುತ್ತಿರುವ 'ಬಂಡಾಯ' ಶಾಸಕರಿಗೆ ಜೆಡಿಎಸ್ ಪ್ರಬಲ ಸಂದೇಶ ರವಾನಿಸಲು ಸಿದ್ಧವಾಗಿದೆ.

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ತೊರೆಯಲು ತಯಾರಿ ನಡೆಸುತ್ತಿರುವ 'ಬಂಡಾಯ' ಶಾಸಕರಿಗೆ ಜೆಡಿಎಸ್ ಪ್ರಬಲ ಸಂದೇಶ ರವಾನಿಸಲು ಸಿದ್ಧವಾಗಿದೆ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕ್ಷೇತ್ರಗಳಿಗೆ ಪರ್ಯಾಯ ನಾಯಕರನ್ನು ಪರಿಚಯಿಸುವ ಅಭಿಯಾನವನ್ನು ಆರಂಭಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತುಮಕೂರಿನ ಗುಬ್ಬಿ ಕ್ಷೇತ್ರವನ್ನು ಗುರಿಯಾಗಿಸಿಕೊಂಡಿರುವ ಅವರು ಶಾಸಕ ಎಸ್ ಆರ್ ಶ್ರೀನಿವಾಸ್ ಬದಲಿಗೆ ಮತ್ತೊಬ್ಬ ನಾಯಕನನ್ನು ತರಲು ಸಿದ್ಧತೆ ನಡೆಸುತ್ತಿದ್ದಾರೆ. ಕುಟುಂಬ ರಾಜಕಾರಣದ ವಿರುದ್ಧ ದನಿ ಎತ್ತಿದ್ದ ಶ್ರೀನಿವಾಸ್ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ.

ಅಕ್ಟೋಬರ್ 25 ರಂದು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹಾಗೂ  ಮಾಜಿ ತುಮಕೂರು ಜಿಲ್ಲಾ ಪಂಚಾಯತ್ ಸದಸ್ಯೆ ಬಿ ಎಸ್ ಗಾಯತ್ರಿ ದೇವಿಯ ಪತಿ ಬಿ ಎಸ್ ನಾಗರಾಜು ಚಂದ್ರಶೇಖರಪುರದಲ್ಲಿ ಏರ್ಪಡಿಸಿರುವ  ರ್ಯಾಲಿಯಲ್ಲಿ ಕುಮಾರಸ್ವಾಮಿ ಭಾಗವಹಿಸುವ ನಿರೀಕ್ಷೆಯಿದೆ.  ಶಾಸಕ ಶ್ರೀನಿವಾಸ್ ಹೊರತುಪಡಿಸಿ ಎಲ್ಲಾ ಜಿಲ್ಲಾ ಮಟ್ಟದ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ, ರ್ಯಾಲಿಯು ನಾಗರಾಜುಗೆ 2023 ರ ಚುನಾವಣಾ ಅಭ್ಯರ್ಥಿಯಾಗಿ ಲಾಂಚ್‌ಪ್ಯಾಡ್ ಆಗಲಿದೆ.

ಅದೇ ರೀತಿ, ಹಳೆ ಮೈಸೂರಿನ ಕೆಲವು ಕ್ಷೇತ್ರಗಳಲ್ಲಿಯೂ, ಕೋಲಾರ ಹೊರತು ಪಡಿಸಿ ಜೆಡಿಎಸ್ ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ, ಹೀಗಾಗಿ ಕುಮಾರಸ್ವಾಮಿ ಪರ್ಯಾಯ ಅಭ್ಯರ್ಥಿಗಳನ್ನು ಕಂಡುಕೊಂಡಿದ್ದಾರೆ, ಅವರನ್ನು ಹಂತ ಹಂತವಾಗಿ ರ್ಯಾಲಿ ಮೂಲಕ ಪರಿಚಯಿಸಲಾಗುವುದು ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿವೆ. ಇತ್ತೀಚೆಗೆ ಪಕ್ಷದ 'ಜನತಾ ಪರ್ವ' ಕಾರ್ಯಾಗಾರದಲ್ಲಿ ಕುಮಾರಸ್ವಾಮಿ ಇದನ್ನು ಹೇಳಿಕೊಂಡಿದ್ದರು.

ಅನೇಕ ಶಾಸಕರು ಪಕ್ಷವನ್ನು ತೊರೆಯಲು  ಬಯಸುತ್ತಿದ್ದಾರೆ,  ಅವರು ಕಾಂಗ್ರೆಸ್ ಸೇರಿದರೆ  ಜೆಡಿಎಸ್ ತೊರೆದವರನ್ನು ಸೋಲಿಸಲು ಪರ್ಯಾಯ ನಾಯಕರ ಬಗ್ಗೆ ಕುಮಾರಸ್ವಾಮಿ ಅವರಿಗೆ ಭಯವಿದೆ.  ಪ್ರತಿಸ್ಪರ್ಧಿ ಪಕ್ಷಗಳು, ವಿಶೇಷವಾಗಿ ಬಿಜೆಪಿ ಇನ್ನೂ ತನ್ನ ನಡೆಯನ್ನು ಬಹಿರಂಗಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

2018 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಅಭ್ಯರ್ಥಿ ಬೆಟ್ಟಸ್ವಾಮಿ 46,000 ಮತಗಳನ್ನು ಪಡೆದಿದ್ದರು,  ಪಕ್ಷದ ಬಂಡಾಯ ಅಭ್ಯರ್ಥಿ ದಿಲೀಪ್ ಕುಮಾರ್ 30,000 ಮತಗಳನ್ನು ಗಳಿಸಿದ್ದರು. 

ರ್ಯಾಲಿ ನಡೆಸುತ್ತಿರುವ ನಾಗರಾಜು ಅವರು ಗುಬ್ಬಿ ಸ್ಥಾನಕ್ಕೆ ಪ್ರಬಲ ಸ್ಪರ್ಧಿ ಎಂದು  ತಿಳಿಸಿದ್ದಾರೆ.  ಮುಂಬರುವ ರ್ಯಾಲಿಯಿಂದ ಶ್ರೀನಿವಾಸ್ ವಿಚಲಿತರಾಗಿಲ್ಲ, ಆದರೆ ಇದು ಫ್ಲಾಪ್ ಶೋ ಎಂದು ಖಚಿತಪಡಿಸಿಕೊಳ್ಳಲು ಗುಬ್ಬಿಯಲ್ಲಿ ಬಿಡಾರ ಹೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

"ಯಾರೂ ನನ್ನನ್ನು ರ್ಯಾಲಿಗೆ ಆಹ್ವಾನಿಸಿಲ್ಲ. ಇತ್ತೀಚೆಗೆ ಅವರ ಸೊಸೆಯ ಸೀಮಂತ ಕಾರ್ಯಕ್ರಮಕ್ಕೆ ಹೋದಾಗಲು ಕುಮಾರಸ್ವಾಮಿ ನನ್ನೊಂದಿಗೆ ಮಾತನಾಡಲಿಲ್ಲ ಎಂದು ನಾಲ್ಕು ಬಾರಿ ಶಾಸಕರಾಗಿ  ಆಯ್ಕೆಯಾಗಿರುವ ಶ್ರೀನಿವಾಸ್ ಬೇಸರ ವ್ಯಕ್ತ ಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com