ಆರ್ ಎಸ್ ಎಸ್ ವಿರುದ್ಧ ಅಟ್ಯಾಕ್; ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್: ಮುಂದಿನ ವಿಧಾನಸಭೆ ಚುನಾವಣೆಯ ಸೆಕ್ಯುಲರ್ ತಂತ್ರ!

ಅಕ್ಟೋಬರ್ 30 ರಂದು ನಡೆಯುವ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಜೆಡಿಎಸ್ ಗೆ  2023ರ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದೆ. 
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬೆಂಗಳೂರು: ಅಕ್ಟೋಬರ್ 30 ರಂದು ನಡೆಯುವ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಜೆಡಿಎಸ್ ಗೆ  2023ರ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದೆ. 

ಮುಸ್ಲಿಮರನ್ನು ಓಲೈಸಲು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕಿಳಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಅಲ್ಪಸಂಖ್ಯಾತ ವಿಷಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಿಗೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಜೊತೆಗೆ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸುವುದನ್ನು ಮುಂದುವರಿಸುತ್ತಿದೆ. ಇದು ಅಲ್ಪ ಸಂಖ್ಯಾತರ ಮತಗಳನ್ನು ಪಡೆಯುವ ಒಂದು ತಂತ್ರವಾಗಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಕಟ್ಟುನಿಟ್ಟಿನ ಹಿಂದುತ್ವದ ನಿಲುವನ್ನು ತೆಗೆದುಕೊಳ್ಳುವುದರಿಂದ, 2023 ರ ಚುನಾವಣೆ ಸಮಯದಲ್ಲಿ ಕರ್ನಾಟಕವು ಜಾತ್ಯತೀತ ಮತ್ತು ಕೋಮುವಾದ ಚರ್ಚೆಗೆ ಸಾಕ್ಷಿಯಾಗಲಿದೆ. ಜೆಡಿಎಸ್ ಮೂಕಪ್ರೇಕ್ಷಕನಾಗಲು ಸಿದ್ಧವಾಗಿಲ್ಲ, ಅಂತಹ ಧ್ರುವೀಕರಣದ ಲಾಭವನ್ನು ಪಡೆದುಕೊಳ್ಳಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತದೆ. 

ಭಾರತದಾದ್ಯಂತ 5 ಕೋಟಿ ಮುಸ್ಲಿಂ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ಪರ ಗುಂಪುಗಳಂತೆ ಸಕ್ರಿಯರಾಗಿದ್ದಾರೆ. ಎಲ್ಲಾ ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ.  ಜೆಡಿಎಸ್ ನಾಯಕರು ಈಗಾಗಲೇ ಆರ್‌ಎಸ್‌ಎಸ್ ವಿರುದ್ಧ ಪ್ರಚಾರ ಆರಂಭಿಸಿದ್ದು, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಆರ್‌ಎಸ್‌ಎಸ್‌ ಪರ ಒಲವು ಸುಳ್ಳು ಎಂದು ಹೇಳಿದ್ದಾರೆ.  ಉಪಚುನಾವಣೆಯ ಫಲಿತಾಂಶ ಏನೇ ಇರಲಿ, ಪಕ್ಷವು 123 ಸ್ಥಾನಗಳನ್ನು ಗುರಿಯಾಗಿರಿಸಿಕೊಳ್ಳುತ್ತದೆ ಮತ್ತು ಮುಸ್ಲಿಮರಿಗೆ ಕನಿಷ್ಠ 10 ಟಿಕೆಟ್ ಗಳನ್ನು ನೀಡುತ್ತದೆ ಎಂದು ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಮುಸ್ಲಿಮರು ಹೆಚ್ಚಿರುವ ಕಲಬುರಗಿಯಿಂದ ಸಮುದಾಯದ ಮುಖಂಡರಾದ ನಾಸಿರ್ ಹುಸೇನ್ ಉಸ್ತಾದ್ ಅವರನ್ನು ಗುರುತಿಸಿ, ಕಲಬುರಗಿ ಉತ್ತರ ಕ್ಷೇತ್ರದಿಂದ 2018 ರ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಲಾಗಿತ್ತು. ಹೀಗಾಗಿ  ಇತ್ತೀಚೆಗೆ ನಡೆದ ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡಿತು. ಆದರೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಹೋಗುವುದು ದೇವೇಗೌಡರ ಬಯಕೆಯಾಗಿದೆ.

ಪರಿಸ್ಥಿತಿ ಯಾವುದೇ ಇದ್ದರೂ, ನಾವು ನಮ್ಮ ಜಾತ್ಯತೀತ ನಿಲುವುಗಳನ್ನು ಕಾಪಾಡುತ್ತೇವೆ. ಮುಸ್ಲಿಂ ನಾಯಕರನ್ನು ಗುರುತಿಸಲು ಪಕ್ಷವು ಸಿದ್ಧವಾಗಿದೆ ಮತ್ತು ಸ್ಪರ್ಧಿಸಲು ಸಹ ಅವಕಾಶ ನೀಡುತ್ತದೆ ಎಂದು ಎಂಎಲ್‌ಸಿ ಕೆ ಎ ತಿಪ್ಪೇಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com