ಉಪಚುನಾವಣಾ ಕದನದಲ್ಲಿ ಹರಿಯುತ್ತಿದೆ ಹಣದ ಹೊಳೆ: ಪ್ರತಿ ವೋಟಿಗೆ 1,500 ರಿಂದ 3000 !

ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗೆ ಇನ್ನೂ ಕೆಲವೇ ಗಂಟೆಗಳು ಮಾತ್ರ ಬಾಕಿಯಿದೆ. ಹೀಗಿರುವ ಉಪ ಚುನಾವಣಾ ಕಣದಲ್ಲಿ  ಹಣದ ಹೊಳೆ ಹರಿಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗೆ ಇನ್ನೂ ಕೆಲವೇ ಗಂಟೆಗಳು ಮಾತ್ರ ಬಾಕಿಯಿದೆ. ಹೀಗಿರುವ ಉಪ ಚುನಾವಣಾ ಕಣದಲ್ಲಿ  ಹಣದ ಹೊಳೆ ಹರಿಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ, ಪ್ರತಿ ಕ್ಷೇತ್ರದಲ್ಲಿ ಸುಮಾರು 50 ರಿಂದ 60 ಕೋಟಿ ರು ಹಣ ಖರ್ಚಾಗುತ್ತಿದೆ ಎಂದು ಹೇಳಲಾಗಿದೆ.

ಕ್ಷೇತ್ರಗಳ ಕೆಲವೆಡೆ ಹಣದ ಹೊಳೆ ಹರಿದಿದ್ದು ಎಂದು ಮೂಲಗಳು ತಿಳಿಸಿವೆ. ಕ್ಷೇತ್ರಗಳಲ್ಲಿ ಮತ್ತು ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಪಕ್ಷದ ಪ್ರಭಾವಿ ಪದಾಧಿಕಾರಿಗಳು ಹಣ ಹಂಚಿಕೆ ಕೈಗೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಬ್ಯಾಂಕ್ ವಹಿವಾಟುಗಳು ಮತ್ತು ದೊಡ್ಡ ಮೊತ್ತದ ಹಣ ಡ್ರಾ ಮಾಡುವುದರಿಂದ  ಮೇಲ್ವಿಚಾರಣೆ ಮಾಡುವ ಕಾರಣದಿಂದ, ಸ್ಥಳೀಯ ಉದ್ಯಮಿಗಳು ಮತ್ತು ಗುತ್ತಿಗೆದಾರರಿಂದ ಹಣವನ್ನು ಪಡೆಯಲಾಗುತ್ತದೆ.

ಒಂದು ಪಕ್ಷವು ಪ್ರತಿ ಕ್ಷೇತ್ರದಲ್ಲಿ ಸುಮಾರು 30-40 ಕೋಟಿ ರೂ.ಗಳನ್ನು ಹಂಚಿದ್ದರೆ, ಇನ್ನೊಂದು ಪಕ್ಷವು ಸುಮಾರು 10 ಕೋಟಿ ರೂ.ಗಳನ್ನು ನೀಡಿದೆ. ಒಂದು ರಾಷ್ಟ್ರೀಯ ಪಕ್ಷವು ತನ್ನ ಮತದಾರರನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ ಎಂದು ಮೂಲಗಳು ಹೇಳುತ್ತವೆ ತಿಳಿಸಿವೆ.

ಎ. ಬಿ ಮತ್ತು ಸಿ. 'ಎ' ವರ್ಗದಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಸಾಧ್ಯತೆ ಕಡಿಮೆ ಇರುವ ಮತದಾರರು. ಇವರ ಅಂದರೆ ಎ ವರ್ಗದ ಪ್ರತಿ ಮತಕ್ಕೆ ರೂ. 3,000 ರು ಹಣ ಪಾವತಿಸುತ್ತಿದ್ದಾರೆ, ವರ್ಗ 'ಬಿ' ಸಾಂಪ್ರದಾಯಿಕ ಮತದಾರರಲ್ದವರು, ಇವರಿಗೆ ಪ್ರತಿ ಮತಕ್ಕೆ 2,500 ರೂ., ಸಾಂಪ್ರದಾಯಿಕ ಮತದಾರರಿಗೆ 1,500-2,000 ರೂ. ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹದಿನೈದು ದಿನಗಳ ಶ್ರಮಕ್ಕಾಗಿ  ಕೇವಲ ಮತದಾರರಿಗೆ ಮಾತ್ರವಲ್ಲದೇ, ಪಕ್ಷದ ಕಾರ್ಯಕರ್ತರಿಗೂ ದೊಡ್ಡ ಪ್ರಮಾಣದಲ್ಲಿ ಹಣ ನೀಡಲಾಗುತ್ತದೆ. ಕೆಲವು ಕಾರ್ಯಕರ್ತರಿಗೆ ತಮ್ಮ ಕೆಲಸಕ್ಕೆ 1 ಲಕ್ಷ ರೂ. ಪಡೆದಿದ್ದಾರೆ.

ಮಾಜಿಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದ  ಮನೋಜ್ ಕುಮಾರ್ ಮೀನಾ ಅವರು ಕಟ್ಟುನಿಟ್ಟಾದ  ಕಣ್ಗಾವಲು ಕಾಯ್ದುಕೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು. ಅವರು ಗುರುವಾರದಿಂದ ಜಾಗರೂಕತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಹಣ ಹಂಚಿಕೆ ಪ್ರಾರಂಭವಾಗಿದೆ, ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 30-50 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಕೆಲವು ಹಿರಿಯ ಸಚಿವರು ಹತ್ತಿರದ ರೆಸಾರ್ಟ್‌ಗಳಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ ಮತ್ತು ಅವರು "ವಿತರಣಾ ರಾಕೆಟ್" ನ ಭಾಗವಾಗಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ  ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com