ಕುಮಾರಸ್ವಾಮಿ ಗುಡುಗಿಗೆ ನಡುಗಿದ ನಾಯಕರು: ಜೆಡಿಎಸ್ ಕಾರ್ಯಾಗಾರಕ್ಕೆ ಹಾಜರು; ಸಾ.ರಾ. ಮಹೇಶ್ ಮಧ್ಯಸ್ಥಿಕೆ!

ಜೆಡಿಎಸ್ ನಾಲ್ಕು ದಿನಗಳ ಕಾರ್ಯಾಗಾರದ ಮೊದಲ ಸಭೆಗೆ ಗೈರಾದವರಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದರು.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್ ನಾಲ್ಕು ದಿನಗಳ ಕಾರ್ಯಾಗಾರದ ಮೊದಲ ಸಭೆಗೆ ಗೈರಾದವರಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದರು.

ಕುಮಾರಸ್ವಾಮಿ ಎಚ್ಚರಿಕೆ ನಂತರ ಕೆಲವು ಜೆಡಿಎಸ್ ನಾಯಕರು ಮಂಗಳವಾರ ಹಾಜರಾಗಿದ್ದರು. ಮಾಜಿ ಸಚಿವ ಹಾಗೂ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಜೆಡಿಎಸ್ ತೊರೆಯಲಿದ್ದಾರೆ ಎಂದು ವರದಿಯಾಗಿತ್ತು, ಆದರೆ ಮಂಗಳವಾರ ಜೆಡಿಎಸ್ ಕಾರ್ಯಾಗಾ ರಕ್ಕೆ ಹಾಜರಾದ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು, ಕೆಆರ್ ನಗರ ಶಾಸಕ ಸಾ.ರಾ ಮಹೇಶ್ ಅವರಿಗೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ನೀಡಲಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ ನಂತರ, ಮೊದಲ ದಿನ ಗೈರಾಗಿದ್ದ ಹಲವು ನಾಯಕರು ಎರಡನೇ ದಿನದ ಕಾರ್ಯಾಗಾರಕ್ಕೆ ಹಾಜರಾಗಿದ್ದರು. 

2018 ರಲ್ಲಿ ತುಮಕೂರು ನಗರ ಕ್ಷೇತ್ರದಿಂದ ಸೋತಿದ್ದ ಜೆಡಿಎಸ್ ಅಭ್ಯರ್ಥಿ ಎನ್. ಗೋವಿಂದರಾಜು ಕೂಡ ಉತ್ಸುಕತೆಯಿಂದ ಭಾಗವಹಿಸಿದ್ದರು. ತುಮಕೂರು ನಗರ, ಗುಬ್ಬಿ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ತುಮಕೂರು ಜಿಲ್ಲೆಯ  ಹಲವು ಕ್ಷೇತ್ರಗಳಿಗೆ 2023 ರ ವಿಧಾನಸಭೆ ಚುನಾವಣೆಗೆ ಕುಮಾರಸ್ವಾಮಿ ಈಗಾಗಲೇ ಕೆಲವು ಸಂಭಾವ್ಯರನ್ನು ಗುರುತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಜನವರಿ 2022 ರಲ್ಲಿ ಸಂಕ್ರಾಂತಿ ಹಬ್ಬದ ವೇಳೆಗೆ ನಾವು ನಮ್ಮ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಮಂಗಳವಾರ ಘೋಷಿಸಿದರು.

ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜು ಕೂಡ ಪಕ್ಷ ತೊರೆಯಲು ಯೋಜಿಸುತ್ತಿದ್ದು, ಕೆಆರ್ ಪೇಟೆ ಶಾಸಕ ಸಾ.ರಾ ಮಹೇಶ್ ಅವರ ಮನವೊಲಿಸಿ ಜೆಡಿಎಸ್ ನಲ್ಲೇ ಇರುವಂತೆ ಪಟ್ಟು ಹಿಡಿದಿದ್ದಾರೆ. ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ತಮ್ಮ ಪುತ್ರ ಹರೀಶ್ ಗೌಡ ಜೊತೆ ಕಾಂಗ್ರೆಸ್ ಸೇರಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ, ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಸಾರಾ ಮಹೇಶ್ ಶಿಫ್ಟ್ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕೆಆರ್ ನಗರದಲ್ಲಿ ಸಾರಾ ಮಹೇಶ್ ವಿರುದ್ಧ ಕಾಂಗ್ರೆಸ್ ಹರೀಶ್ ಗೌಡ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com