ಮತಾಂಧ ಟಿಪ್ಪು ಜಯಂತಿ ಆಚರಣೆ ತಂದು, ನಾಡಿನ ಅಸ್ಮಿತೆಗೆ ಕೊಳ್ಳಿಯಿಟ್ಟವರು ಸಿದ್ರಾಮುಲ್ಲಾ ಖಾನ್ ಅಲ್ಲದೆ ಇನ್ಯಾರು?

ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತಾಂಧ ಟಿಪ್ಪುವನ್ನು ನುಗ್ಗಿಸಿ, ನಮ್ಮ ನಾಡಿನ ಅಸ್ಮಿತೆಗೆ ಕೊಳ್ಳಿಯಿಟ್ಟ ಪೆಡಂಭೂತದ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ತಂದವರು ಅವರು. ಇಂಥವರು ಸಿದ್ರಾಮುಲ್ಲಾ ಖಾನ್ ಅಲ್ಲದೇ ಇನ್ಯಾರು? ಎಂದು ರಾಜ್ಯ ಬಿಜೆಪಿ ಕಟುವಾಗಿ ಟೀಕಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಕನ್ನಡಿಗರು ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್‌ ಎಂದು ವಿನಾಕಾರಣ ಕರೆಯುತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತಾಂಧ ಟಿಪ್ಪುವನ್ನು ನುಗ್ಗಿಸಿ, ನಮ್ಮ ನಾಡಿನ ಅಸ್ಮಿತೆಗೆ ಕೊಳ್ಳಿಯಿಟ್ಟ ಪೆಡಂಭೂತದ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ತಂದವರು ಅವರು. ಇಂಥವರು ಸಿದ್ರಾಮುಲ್ಲಾ ಖಾನ್ ಅಲ್ಲದೇ ಇನ್ಯಾರು? ಎಂದು ರಾಜ್ಯ ಬಿಜೆಪಿ ಕಟುವಾಗಿ ಟೀಕಿಸಿದೆ.

ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಹಿಜಾಬ್‌‌ ಸಮರ್ಥನೆಗೆ ಸ್ವಾಮೀಜಿಗಳು ಹಿಜಾಬ್ ಹಾಕಲ್ವಾ, ಹಿಂದೂ ಮಹಿಳೆಯರು ದುಪಟ್ಟಾ ಹಾಕಲ್ವಾ ಎಂದು ಎಲ್ಲದರಲ್ಲೂ ಹಿಜಾಬನ್ನೇ ಕಂಡ ಮೌಲ್ವಿ ನಮ್ಮ ಸಿದ್ರಾಮುಲ್ಲಾ ಖಾನ್. ಗೋ ಹತ್ಯೆಯಾದರೂ ಬೀಫ್ ಮಾರ್ಕೆಟ್ ನಿಲ್ಲಬಾರದೆಂದ ಹರಿಕಾರ‌. ಇಂಥವರು ಖಾನ್ ಆಗದೇ ಕೇಶವ ಆಗಲು ಸಾಧ್ಯವೇ? ಎಂದು ಕೇಳಿದೆ.

'ತಮ್ಮವರನ್ನೇ ತುಳಿಯುವ ಸಿದ್ದರಾಮಯ್ಯ ಅವರ ಮನಸ್ಥಿತಿ ಕಂಡು ದೇವೇಗೌಡರು ಅಂದೇ ಅವರನ್ನು ಹೊರಹಾಕಿದರು. ಆಗ ಕಾಂಗ್ರೆಸ್ ಸೇರಲು ಬಲಪ್ರದರ್ಶನದ ಅಗತ್ಯ ಬಂತು. ಹಾಗಾಗಿ ಅಹಿಂದ ಎಂಬ ಏಣಿ ಕಟ್ಟಿ ನಂತರ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುಳಿದವರು ಮತ್ತು ದಲಿತರನ್ನು ಹತ್ತಿದ ಏಣಿ ತುಳಿಯುವಂತೆ ಎಡಗಾಲಲ್ಲಿ ತುಳಿದದ್ದನ್ನು ಜನ ಮರೆತಿಲ್ಲ ಎಂದಿದೆ.

ಮುಂದುವರಿದು, ಕ್ಷಣವೂ ವಿವೇಚಿಸದೆ ತಲಾಖ್‌ ಎಂದು ಮಹಿಳೆಯರ ಬದುಕು ಬರ್ಬಾದ್‌ ಮಾಡುವ ಮನಸ್ಥಿತಿಯವರಿಗೆ ಬೆನ್ನುತಟ್ಟುವ ಶಾದಿ ಭಾಗ್ಯ ಕಲ್ಪಿಸಿದ್ದು ಸಿದ್ದರಾಮಯ್ಯ. ಕೇವಲ ಒಂದು ಸಮುದಾಯದ ಓಲೈಕೆ ಮಾಡಲು ಸೆಕ್ಯುಲರಿಸಂ ಹೆಸರಿನಲ್ಲೇ ತುಷ್ಟೀಕರಣಕ್ಕಿಳಿದಿರಿ. ಇಂಥವರನ್ನು ಸಿದ್ರಾಮುಲ್ಲಾ ಖಾನ್‌ ಎನ್ನದೆ ಮತ್ತೇನೆಂದು ಕರೆದಾರು? ಎಂದು ಬಿಜೆಪಿ ಪ್ರಶ್ನಿಸಿದೆ.

ದೇಶದಾದ್ಯಂತ ಮತಾಂಧತೆಯನ್ನು ಪಸರಿಸುತ್ತಾ ಅಲ್ಲಲ್ಲಿ ಭಯೋತ್ಪಾದಕ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ಪಿಎಫ್‌ಐನ 175 ಗೂಂಡಾಗಳ ಮೇಲಿದ್ದ ಪ್ರಕರಣಗಳನ್ನು ವಿಚಾರಣೆಯಿಲ್ಲದೆ ಹಿಂಪಡೆದದ್ದಕ್ಕಾಗಿ ವಿಚಾರವಾದಿ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್‌ ಎಂಬ ಬಿರುದನ್ನು ನಾವಲ್ಲ, ಜನರೇ ನೀಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ಟಿಪ್ಪು ಎಕ್ಸ್‌ಪ್ರೆಸ್‌ ಎಂಬ ಹೆಸರನ್ನು ಬದಲಾಯಿಸಿ ಜನ ಇಂದಿಗೂ ಸ್ಮರಿಸುವ-ಆರಾಧಿಸುವ ‘ಒಡೆಯರ್’‌ ಎಕ್ಸ್‌ಪ್ರೆಸ್‌ ಎಂದು ಕರೆದಾಗ ನಿಮಗೆ ಆದ ಅಸಹನೆಯನ್ನು ನಾಡಿನ ಜನ ಕಂಡಿದ್ದಾರೆ. ಟಿಪ್ಪುವಿನ ಆಸ್ಥಾನ ವಿದೂಷಕರಂತಾಗಿರುವ ತಮ್ಮನ್ನು ಸಿದ್ರಾಮುಲ್ಲಾ ಖಾನ್ ಎನ್ನದೇ ಮೋಸ ಮಾಡುವ ಮೀರ್ ಸಾಧಿಕ್ ಎನ್ನಬಹುದೇ? ಎಂದು ಕೇಳಿದೆ.

ನಳಂದಾ ವಿಶ್ವವಿದ್ಯಾಲಯವನ್ನು ಸುಟ್ಟು ಸರ್ವನಾಶ ಮಾಡಿದ್ದು ಇಸ್ಲಾಮಿಕ್‌ ಭಯೋತ್ಪಾದನೆ ಎಂಬುದನ್ನು ಒಪ್ಪದ ಸಿದ್ದರಾಮಯ್ಯ ಅವರು ಈ ಇತಿಹಾಸವನ್ನು ಮರೆಮಾಚಲು ಯತ್ನಿಸಿದರು. ಇಂದಿಗೂ ಇಸ್ಲಾಮಿಕ್ ಭಯೋತ್ಪಾದನೆಯ ಕ್ರೌರ್ಯವನ್ನು ಒಪ್ಪದೇ ಮೊಘಲ್ ಆಕ್ರಮಣಕಾರರ ಮಾನಸಿಕತೆಯಲ್ಲಿರುವ ಕಾರಣಕ್ಕೆ ಜನರೇ ಸಿದ್ರಾಮುಲ್ಲಾ ಖಾನ್‌ ಬ್ರಾಂಡ್ ಮಾಡಿರುವುದು ಎಂದಿದೆ.

26/11 ಮುಂಬೈ ದಾಳಿಯಲ್ಲಿ ಸಾರ್ವಜನಿಕರ ಪ್ರಾಣ ಉಳಿಸಲು ಪ್ರಾಣಾರ್ಪಣೆ ಮಾಡಿದ ಮೇಜರ್ ಸಂದೀಪ್‌ ಉನ್ನಿಕೃಷ್ಣನ್‌‌ರವರ ವೀರಗಾಥೆಯುಳ್ಳ 'ಕರಾಳ ರಾತ್ರಿ' ಪಾಠವನ್ನು ಕೈಬಿಟ್ಟವರು ತಾವು. ರಾಷ್ಟ್ರೀಯತೆಯ ಪರಮ ವಿರೋಧಿಯಾಗಿರುವ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್‌ ಎಂದು ಕರೆಯದೆ ಬೇರೆ ಬಿರುದು ಕೊಟ್ಟಾರೆಯೇ? ಎಂದು ಬಿಜೆಪಿ ಕಿಡಿಕಾರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com