ಹುಣಸೂರು, ಚಾಮುಂಡೇಶ್ವರಿ, ಮದ್ದೂರಿನಲ್ಲಿ ಹರಿಯುತ್ತಿದೆ ಹಣದ ಮಹಾಪೂರ: 'ಉಚಿತ'ಗಳ ಆಫರ್ ಭರಪೂರ; ಟಿಕೆಟ್ ಆಕಾಂಕ್ಷಿಗಳಿಂದ ತೀರ್ಥಯಾತ್ರೆ!

ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಹಲವು ಕ್ಷೇತ್ರಗಳಲ್ಲಿ ಉಚಿತ ಕೊಡುಗೆಗಳ ಮಹಾಪೂರವೇ ತೆರೆದುಕೊಂಡಿದೆ. ಕನ್ನಡ ರಾಜ್ಯೋತ್ಸವ ಆಚರಿಸಲು ಆಟೋರಿಕ್ಷಾ ಚಾಲಕರು 30 ರಿಂದ 50 ಸಾವಿರ ರೂ. ನಗದು ದೇಣಿಗೆ ಪಡೆಯುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಹಲವು ಕ್ಷೇತ್ರಗಳಲ್ಲಿ ಉಚಿತ ಕೊಡುಗೆಗಳ ಮಹಾಪೂರವೇ ತೆರೆದುಕೊಂಡಿದೆ. ಕನ್ನಡ ರಾಜ್ಯೋತ್ಸವ ಆಚರಿಸಲು ಆಟೋರಿಕ್ಷಾ ಚಾಲಕರು 30 ರಿಂದ 50 ಸಾವಿರ ರೂ. ನಗದು ದೇಣಿಗೆ ಪಡೆಯುತ್ತಿದ್ದಾರೆ.

ನವೆಂಬರ್ 1 ರಂದು ರಾಜ್ಯಾದ್ಯಂತ ರಾಜ್ಯೋತ್ಸವ ಆಚರಿಸಿದ್ದರೂ ಯುವ ಕ್ಲಬ್‌ಗಳು ತಮ್ಮದೇ ಆದ ರೀತಿಯಲ್ಲಿ ಪಂದ್ಯಾವಳಿಗಳನ್ನು ಯೋಜಿಸುತ್ತಿದ್ದಾರೆ, ಇದರ ಜೊತೆಗೆ ಮತದಾರರನ್ನು ಪ್ರವಾಸಿ ತಾಣಗಳು ಮತ್ತು ಶಬರಿಮಲೆ ತೀರ್ಥಯಾತ್ರೆಗೆ ಉಚಿತವಾಗಿ ಕಳುಹಿಸಲಾಗುತ್ತಿದೆ.

ಎಲ್ಲಾ ಪಕ್ಷಗಳ ಆಕಾಂಕ್ಷಿಗಳು ತಮ್ಮ ಪಕ್ಷದ ಮುಖಂಡರು ಹಾಗೂ ಮತದಾರರನ್ನು ಮೆಚ್ಚಿಸಲು ಮುಂದಾಗಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲಾ ಪ್ರಮುಖ ಅವಕಾಶವನ್ನು ತೆಗೆದುಕೊಳ್ಳುತ್ತಿದ್ದಾರೆ.  ಹುಣಸೂರು, ಚಾಮುಂಡೇಶ್ವರಿ, ಮದ್ದೂರು ಕ್ಷೇತ್ರಗಳಲ್ಲಿ ಹಣದ ಹೊಳೆಯೇ ಹರಿಯುತ್ತಿದೆ.

ಇದು ಕೇವಲ ಆರಂಭವಷ್ಟೇ, ಚುನಾವಣೆ ಸಮೀಪಿಸುತ್ತಿದ್ದಂತೆ ಇನ್ನೂ ಹೆಚ್ಚಿನ ಹಣ ವ್ಯಯವಾಗಲಿದೆ ಎನ್ನುತ್ತಾರೆ ಆಕಾಂಕ್ಷಿಗಳು. ಹುಣಸೂರಿನಲ್ಲಿ ಆಕಾಂಕ್ಷಿಗಳು ಯುವ ಕ್ಲಬ್‌ಗಳಿಗೆ ಇಡೀ ವರ್ಷ ತಮ್ಮ ಕ್ರೀಡಾಕೂಟಗಳನ್ನು ಪ್ರಾಯೋಜಿಸಲಾಗುವುದು ಎಂದು ಭರವಸೆ ನೀಡಿದರು, ಆದರೆ ಅಂತಹ ಕಾರ್ಯಕ್ರಮಗಳಿಗೆ ಹಣ ನೀಡುವ ಮುಖಂಡರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.

ಇದನ್ನು ಟಿಕೆಟ್ ಪಡೆಯಲು ಬಳಸುತ್ತಿರುವ ತಂತ್ರ ಎಂಬುದನ್ನು ಜೆಡಿಎಸ್ ಮುಖಂಡರೊಬ್ಬರು ನಿರಾಕರಿಸಿದ್ದಾರೆ, ವರ್ಷವಿಡೀ ಜನರ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದರು. ಮದ್ದೂರಿನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಧರ್ಮಸ್ಥಳ ಪ್ರವಾಸ ಆಯೋಜಿಸಲು ಪೈಪೋಟಿ ನಡೆಸಿದ್ದಾರೆ.

ದೇವಸ್ಥಾನಕ್ಕೆ ಗ್ರಾಮಸ್ಥರನ್ನು ಕರೆದೊಯ್ಯಲು ಬಿಜೆಪಿಯವರು ಐದು ಬಸ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಅಂತಹ ಪ್ರವಾಸಗಳಿಗೆ ಜನರು ನೋಂದಾಯಿಸಲು ಅವರು ಕಚೇರಿಗಳನ್ನು ತೆರೆದಿದ್ದಾರೆ, ಆದರೆ ನಾಯಕರು ಸಾಮಾಜಿಕ ಕಾರ್ಯಕ್ರಮಳಲ್ಲಿ ಭಾಗಿಯಾಗುವುದರ ಜೊತೆಗೆ ಹಣಕಾಸಿನ ಬೆಂಬಲ ನೀಡುವುದರಲ್ಲಿ ನಿರತರಾಗಿದ್ದಾರೆ.

ಸ್ವತಂತ್ರವಾಗಿ ಚುನಾವಣೆ ಎದುರಿಸಲು ನಿರ್ಧರಿಸಿರುವ ಮತ್ತೊಬ್ಬ ಆಕಾಂಕ್ಷಿ, ದಕ್ಷಿಣ ಕನ್ನಡ ಮತ್ತು ಎಂಎಂ ಹಿಲ್ಸ್‌ನ ದೇವಸ್ಥಾನಗಳಿಗೆ ಪ್ರವಾಸವನ್ನು ಆಯೋಜಿಸಿದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಮತ್ತು ಉಚಿತ ನೀರಿನ ವ್ಯವಸ್ಥೆ ಮಾಡಿದ್ದ ಕಾಂಗ್ರೆಸ್ ಶಾಸಕರೊಬ್ಬರು ಮತದಾರರಿಗೆ ಚಳಿಗಾಲಕ್ಕಾಗಿ  ಸ್ವೆಟರ್‌ಗಳನ್ನು ವಿತರಿಸಿದ್ದಾರೆ.

ಪ್ರಮುಖ ಕಾಂಗ್ರೆಸ್ ನಾಯಕರೊಬ್ಬರು ತಮ್ಮ ಕ್ಷೇತ್ರದ ನಿವಾಸಿಗಳಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಮೆಡಿಕೇರ್ ಮತ್ತು ವಿದ್ಯಾರ್ಥಿಗಳ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ ಅನೇಕರು ಹಣಕಾಸಿನ ನೆರವು ನೀಡಿದ್ದಾರೆ. ಇವೆಲ್ಲಾ ಮುಂಬರುವ ವಿಧಾನಸಭೆ ಚುನಾವಣೆಗಾಗಿ ಅನುಸರಿಸುತ್ತಿರುವ ತಂತ್ರ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com