'ರಮೇಶ್ ಕುಮಾರ್ ಒಬ್ಬ ಶಕುನಿ; ಬೇರೆ ಪಕ್ಷದಿಂದ ಬಂದವರಿಗೆ ರೆಡ್ ಕಾರ್ಪೆಟ್ ಹಾಕಲಾಗುತ್ತಿದೆ': ಕೆ.ಎಚ್.ಮುನಿಯಪ್ಪ

ರಮೇಶ್ ಕುಮಾರ್ ಒಬ್ಬ ಶಕುನಿ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಮಾಜಿ ಸ್ಪೀಕರ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಬೇರೆ ಪಕ್ಷದಿಂದ ಬಂದವರಿಗೆ ರೆಡ್ ಕಾರ್ಪೆಟ್ ಹಾಕಲಾಗುತ್ತಿದೆ.
ಕೆ.ಎಚ್.ಮುನಿಯಪ್ಪ
ಕೆ.ಎಚ್.ಮುನಿಯಪ್ಪ

ಬೆಂಗಳೂರು: ರಮೇಶ್ ಕುಮಾರ್ ಒಬ್ಬ ಶಕುನಿ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಮಾಜಿ ಸ್ಪೀಕರ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಬೇರೆ ಪಕ್ಷದಿಂದ ಬಂದವರಿಗೆ ರೆಡ್ ಕಾರ್ಪೆಟ್ ಹಾಕಲಾಗುತ್ತಿದೆ. ಆದರೆ, ಪಕ್ಷದಲ್ಲಿನ ಹಿರಿಯ ನಾಯಕರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಕೆ.ಎಚ್.ಮುನಿಯಪ್ಪ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ನಾನು‌ ಕಾಂಗ್ರೆಸ್ ನಲ್ಲಿ‌ ೨೮ ವರ್ಷ ಸಂಸದನಾಗಿದ್ದೇನೆ. ಐವತ್ತು ವರ್ಷಗಳ ‌ಕಾಲ‌ ಕಾಂಗ್ರೆಸ್ ನಲ್ಲಿ‌ ಇದ್ದೇನೆ. ಬಹಳಷ್ಟು ಜನ ಮುಖಂಡರು‌ ನನ್ನ ಭೇಟಿ‌ ಮಾಡಿದ್ರು. ನಾನು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ. ಕೆಲವರು ಪಕ್ಷ ಬಿಟ್ಟು ಹೋಗಿ‌ ವಾಪಸ್ಸು ಬಂದಿದ್ದಾರೆ. ನಾರಾಯಣಸ್ವಾಮಿ, ನಂಜೇಗೌಡ, ರಮೇಶ್ ಕುಮಾರ ‌ಕೂಡ ಬೇರೆ ಕಡೆಯಿಂದ ಪಕ್ಷಕ್ಕೆ ಬಂದಿದ್ದಾರೆ. ನಾನು ಆಗ ಎಂಪಿ ಆಗಿದ್ದೆ. ಅವರನ್ನು ಸೇರಿಸಿಕೊಳ್ಳುವ ಸಂದರ್ಭದಲ್ಲಿ ‌ನನ್ನನ್ನು ಕೇಳಿ‌ ಸೇರಿಸಿಕೊಂಡ್ರು. ಆದರೆ, ಕೊತ್ತನೂರು ಮಂಜುನಾಥ ಸೇರಿಸಿಕೊಳ್ಳುವ ಸಂಬಂಧ ನನ್ನ ಕೇಳಿ ಅಂದಿದ್ದೆ. ನನಗೆ ಹೇಳದೆ ಕೇಳದೆ ಈಗ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಹೈಕಮಾಂಡ್ ವಿರುದ್ಧ ಆಕ್ರೋಶ ಹೊರ ಹಾಕಿದರು.

ಸೌಜನ್ಯಕ್ಕಾದರು ನನಗೆ ಕೆಳಬೇಕು ಎಂದ ಮುನಿಯಪ್ಪ, ಇವರೆಲ್ಲ ಪಕ್ಷ ಬಿಟ್ಟು ಹೋಗಿ ಮತ್ತೆ‌ ಬಂದಿದ್ದಾರೆ. ಇವರಿಂದ ಕಾಂಗ್ರೆಸ್ ಕೋಲಾರದಲ್ಲಿ ಬರುತ್ತಾ? ಬರುತ್ತೆ ಅನ್ನೋದಾದ್ರೆ ನನ್ನ ಅಭ್ಯಂತರ ಏನೂ ಇಲ್ಲ. ಹೈಕಮಾಂಡ್ ನಾಯಕರು ಕೂಡ ನನಗೆ ನೋವು ಮರೆಯುವಂತೆ ಹೇಳಿದ್ರು. ಕಾಂಗ್ರೆಸ್ ಗೆ ಮಂಜುನಾಥ ಮತ್ತು ಸುಧಾಕರ್ ಸೇರಿಸಿಕೊಂಡಿದ್ದಾರೆ. ನಾನು ಯಾವ ಪಕ್ಷಕ್ಕೆ ಹೋಗಲ್ಲ. ಕಾಂಗ್ರೆಸ್ ನಲ್ಲೆ ಉಳಿಯುತ್ತೇನೆ ಎಂದು ಘೋಷಿಸಿದರು.

ಹೈಕಮಾಂಡ್ ಏನ್ ಹೇಳುತ್ತೆ ಅಂತ ಕೇಳುತ್ತೇನೆ. ಐದು ‌ಲಕ್ಷ ಮತದಾದರ ಬಳಿಗೆ ನಾನು‌ ಹೋಗುತ್ತೇನೆ. ಇವತ್ತಿನ ಪರಿಸ್ಥಿತಿ ಬಗ್ಗೆ ಹೇಳುತ್ತೇನೆ. ಸಮಯಕ್ಕಾಗಿ‌ ನಾನು ಕಾಯುತ್ತೇನೆ. ತಾಲೂಕು ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹ ಮಾಡ್ತೇನೆ. ನನ್ನ ಕಡಗಣನೆ ಬಗ್ಗೆ ಹೈಕಮಾಂಡ್ ನಾಯಕರು ಹೇಳಬೇಕು. ಅಲ್ಲಿವರೆಗೆ ಅಭಿಪ್ರಾಯ ಸಂಗ್ರಹ ಮಾಡ್ತೇನೆ. ಕಾರ್ಯಕರ್ತರು ಹೇಳಿದ‌ ಹಾಗೆ ಮುಂದೆ ಕೇಳುತ್ತೇನೆ ಎಂದು ಹೇಳಿದ ಮುನಿಯಪ್ಪ, ಸದ್ಯ ಕಾಂಗ್ರೆಸ್ ನಲ್ಲೇ ಉಳಿಯಲು‌ ನಿರ್ಧಾರ ಕೈಗೊಂಡರು.

ರಮೇಶ್ ಕುಮಾರ್ ಒಬ್ಬ ಶಕುನಿ
ಬಳಿಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಮುನಿಯಪ್ಪ, ಜನರು ಇದಾರೆ ಧರ್ಮವೂ ಇದೆ. ಇದೆಲ್ಲದಕ್ಕೂ ಕಾಲ ಬರಲಿದೆ. ಅವರು ಏಕಪಾತ್ರ ಅಭಿನಯ ಮಾಡುತ್ತಾರೆ. ಎಲ್ಲಾ ಪಾತ್ರಗಳನ್ನೂ ಅವರೇ ಮಾಡುತ್ತಾರೆ. ಸಿದ್ದರಾಮಯ್ಯಗೆ ಅವರ ಮೇಲೆ ಯಾಕೆ ವಿಶ್ವಾಸ ಇದೆಯೋ ಗೊತ್ತಿಲ್ಲ. ಇದನ್ನು ಅವರನ್ನೇ ಕೇಳಬೇಕು. ಬಿಜೆಪಿಗೆ ಹೋಗಿ ಕಾಂಗ್ರೆಸ್ ಗೆ ಬರುತ್ತಾರೆ. ಇವರಿಗೆ ಮಾನ ಮರ್ಯಾದೆ ಇಲ್ಲ. ಯಾಕೆ ಕಾಂಗ್ರೆಸ್ ಗೆ ಬಂದಿದ್ದಾರೆ? ರಾಹುಲ್ ಗಾಂಧಿಯವರಿಗೆ ಸತ್ಯವನ್ನ ಮುಚ್ಚಿಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ದೇವೇಗೌಡರ ಮೇಲೆ ಪೂಜ್ಯ ಭಾವನೆ ಇದೆ. ಆದ್ರೆ ನಾನು ಯಾವುದೇ ಪಕ್ಷಕ್ಕೆ ಸೇರಲ್ಲ. ಕಾಂಗ್ರೆಸ್ ‌ಪಕ್ಷದಲ್ಲಿ ಉಳಿಯುತ್ತೇನೆ ಎಂದರು.

ಮುನಿಸ್ವಾಮಿ ಸಂಸದರಾಗಿ ಆಯ್ಕೆಯಾದ ಬಳಿಕ ಗಡ್ಕರಿ ಭೇಟಿಯಾಗಿದ್ರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದಕ್ಕೆ ಮುನಿಸ್ವಾಮಿ ಜೊತೆ ಸೇರಿ ರಮೇಶ್ ಕುಮಾರ್, ನಿತೀನ್ ಗಡ್ಕರಿ ಅವರನ್ನು ಭೇಟಿಯಾಗಿದ್ರು. ಆಗ ಬಿಜೆಪಿ ಗೆಲ್ಲಿಸಿ ಈಗ ಕಾಂಗ್ರೆಸ್ ಗೆಲ್ಲಿಸಬೇಕು ಅಂತಿದ್ದಾರೆ. ಇದರ ಬಗ್ಗೆ ಹೈಕಮಾಂಡ್ ನಾಯಕರು ಮಾತನಾಡಬೇಕು ಎಂದು ರಮೇಶ್ ಕುಮಾರ್ ಪೋಟೋ ಸಮೇತ ಮುನಿಯಪ್ಪ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com