ವಿಧಾನಸಭೆ ಚುನಾವಣೆ: ಹಿಂದುಳಿದ ವರ್ಗಗಳ ಓಲೈಕೆಗೆ ಬಿಜೆಪಿ ಮುಂದು; ಸುನೀಲ್ ಕುಮಾರ್ ಗೆ ಮಹತ್ವದ ಜವಾಬ್ದಾರಿ!

ಕೇಂದ್ರ ಬಿಜೆಪಿ ನಾಯಕರು ಹಿಂದುಳಿದ ವರ್ಗದ ನಾಯಕರೊಬ್ಬರಿಗೆ ಪಟ್ಟ ಕಟ್ಟಲು ನಿರ್ಧರಿಸಲು ಮಹತ್ತರ ಕಾರಣವಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಶೇ. 50 ರಷ್ಟು ಹಿಂದುಳಿದ ವರ್ಗಗಳು ಬಿಜೆಪಿ ಪರವಾಗಿ ಮತ ಚಲಾಯಿಸಿವೆ ಎಂದು ಆಂತರಿಕ ಸಮೀಕ್ಷೆ ತಿಳಿಸಿದೆ
ಸುನೀಲ್ ಕುಮಾರ್
ಸುನೀಲ್ ಕುಮಾರ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಬಿಜೆಪಿ ನಾಯಕತ್ವ ಹಿಂದುಳಿದ ವರ್ಗಗಳನ್ನು ಸೆಳೆಯಲು ಹವಣಿಸುತ್ತಿದೆ, ವೀರಶೈವ ಲಿಂಗಾಯತ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಜೆಪಿಯ ನಿರ್ವಿವಾದ ನಾಯಕ.

ಜೆಡಿಎಸ್‌ನ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಂತಹ ಪ್ರಾದೇಶಿಕ ನಾಯಕರಿಗೆ, ಪಕ್ಷವು ಪರ್ಯಾಯ ನಾಯಕರನ್ನು ಬೆಳೆಸಲು ನೋಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಜಾತಿ ಅಂಶವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೈಕಮಾಂಡ್ ಅರಿತುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಮುಖಂಡರು ವೀರಶೈವ ಲಿಂಗಾಯತರನ್ನು ಪ್ರತಿನಿಧಿಸುತ್ತಿದ್ದು ಈ ಸಮುದಾಯ, ಸದಾ ಬಿಜೆಪಿಗೆ ಪರವಾಗಿದೆ. ಸಿ.ಟಿ.ರವಿ ಮತ್ತು ಡಾ. ಸಿ.ಎನ್.ಅಶ್ವತ್ಥನಾರಾಯಣ್ ಒಕ್ಕಲಿಗ ಸಮುದಾಯದ ಮುಖವಾಗಿದ್ದಾರೆ, ಬಿ.ಶ್ರೀರಾಮುಲು ಎಸ್‌ಟಿ ನಾಯಕ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಎಸ್‌ಸಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೂ, ಪಕ್ಷಕ್ಕೆ ಭರವಸೆಯ ಯುವ ಹಿಂದುಳಿದ ವರ್ಗಗಳ ನಾಯಕನ ಕೊರತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವ ಕೆಎಸ್ ಈಶ್ವರಪ್ಪ ರಾಜಿನಾಮೆ ನಂತರ ತಮ್ಮ ವರ್ಚಸ್ಸು ಕಳೆದುಕೊಂಡ ನಂತರ, ಹಿಂದುಳಿದ ವರ್ಗಗಳ ನಾಯಕನನ್ನು ಮುನ್ನೆಲೆಗೆ ತರಲು ಪಕ್ಷ ಮತ್ತು ಆರ್‌ಎಸ್‌ಎಸ್ ಉತ್ಸುಕವಾಗಿದೆ. ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರನ್ನು ಹೊಸ ಮುಖವಾಗಿ ಬಿಂಬಿಸಲು ಮುಂದಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಪಕ್ಷದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಕಾರ್ಯಾಗಾರ ನಡೆದಿದ್ದು, ಸುನೀಲ್ ಕುಮಾರ್ ಅವರು ಸಮರ್ಥರು ಎಂದು ಬಿಜೆಪಿ ಮುಖಂರೊಬ್ಬರು ತಿಳಿಸಿದ್ದಾರೆ.

ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ, ಜುಲೈ 27 ಕ್ಕೆ ಸಿಎಂ ಬೊಮ್ಮಾಯಿ ಅವರ ಅಧಿಕಾರಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೂರು ವರ್ಷಗಳ ಅವಧಿ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ ಸರ್ಕಾರ ಮತ್ತು ಪಕ್ಷದಲ್ಲಿ ಕೆಲವು ಬದಲಾವಣೆಗಳನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಮೊದಲಿಗೆ, ಪಕ್ಷದ ನಿಷ್ಠಾವಂತರನ್ನು ಮಂಡಳಿಗಳು ಮತ್ತು ನಿಗಮಗಳಿಗೆ ನೇಮಿಸಬಹುದು.

ಕೇಂದ್ರ ಬಿಜೆಪಿ ನಾಯಕರು ಹಿಂದುಳಿದ ವರ್ಗದ ನಾಯಕರೊಬ್ಬರಿಗೆ ಪಟ್ಟ ಕಟ್ಟಲು ನಿರ್ಧರಿಸಲು ಮಹತ್ತರ ಕಾರಣವಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಶೇ. 50 ರಷ್ಟು ಹಿಂದುಳಿದ ವರ್ಗಗಳು ಬಿಜೆಪಿ ಪರವಾಗಿ ಮತ ಚಲಾಯಿಸಿವೆ  ಎಂದು ಆಂತರಿಕ ಸಮೀಕ್ಷೆ ತಿಳಿಸಿದೆ. ಹೀಗಾಗಿ ಸುನೀಲ್ ಕುಮಾರ್ ಅವರನ್ನು ಹಿಂದುಳಿದ ವರ್ಗಗಳ ಮುಖಂಡರನ್ನಾಗಿ ಬಿಂಬಿಸಲು ಮುಂದಾಗಿದೆ. ಆದರೆ ಬೊಮ್ಮಾಯಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳು ವಿಮುಖವಾಗುತ್ತಿವೆ, ಹೀಗಾಗಿ ಸುನೀಲ್ ಕುಮಾರ್ ಅವರಿಗೆ ಯಾವ ಹುದ್ದೆ ನೀಡಲಿದ್ದಾರೆ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ವಾಸ್ತವವಾಗಿ, ಹಿಂದುಳಿದ ವರ್ಗಗಳು ಬಿಜೆಪಿಯೊಂದಿಗೆ ಅಷ್ಟೊಂದು ಸಂತೋಷವಾಗಿಲ್ಲ ಎಂದು ಗ್ರಹಿಸಿದ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಅಹಿಂದ ಮತದಾರರನ್ನು ಸೆಳೆಯಲು ದೊಡ್ಡ ಹುಟ್ಟುಹಬ್ಬದ ಆಚರಣೆಯನ್ನು ಯೋಜಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com