ಸಿದ್ದರಾಮಯ್ಯ ಸ್ಪರ್ಧೆಗೆ  ಕ್ಷೇತ್ರ ನಿರ್ಧರಿಸಲು ನಾನು ಕಾಂಗ್ರೆಸ್ ಅಧ್ಯಕ್ಷನಲ್ಲ: ರಮೇಶ್ ಕುಮಾರ್

ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರು, ಸಿದ್ದರಾಮಯ್ಯ ಕ್ಷೇತ್ರ ನಿರ್ಧರಿಸಲು ನಾನು ಕಾಂಗ್ರೆಸ್ ಅಧ್ಯಕ್ಷನಲ್ಲ ಎಂದು ಹೇಳಿದ್ದಾರೆ.
ರಮೇಶ್ ಕುಮಾರ್
ರಮೇಶ್ ಕುಮಾರ್

ಕೋಲಾರ: ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರು, ಸಿದ್ದರಾಮಯ್ಯ ಕ್ಷೇತ್ರ ನಿರ್ಧರಿಸಲು ನಾನು ಕಾಂಗ್ರೆಸ್ ಅಧ್ಯಕ್ಷನಲ್ಲ ಎಂದು ಹೇಳಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಕುಮಾರ್, ಸ್ಪರ್ಧೆ ನಿರ್ಧಾರ ಮಾಡೋಕೆ ನಾನು ಎಐಸಿಸಿ ಅಧ್ಯಕ್ಷನಲ್ಲ. ಶ್ರೀನಿವಾಸಪುರಕ್ಕೆ ಬಂದು ಸ್ಪರ್ಧೆ ಮಾಡಲಿ ಅನ್ನೋದು ನನ್ನ ಬಯಕೆ. ಸಿದ್ದರಾಮಯ್ಯ ಅವರ ಸ್ಪರ್ಧೆ ಹೈಕಮಾಂಡ್ ನಿರ್ಧರಿಸುತ್ತೆ. ಅದಕ್ಕಾಗಿ ನಾನೂ ಸೇರಿದಂತೆ ಎಲ್ಲರೂ ಅರ್ಜಿ ಹಾಕಲೇಬೇಕು ಎಂದು ಹೇಳಿದ್ದಾರೆ. 

ಇದೇ ನವೆಂಬರ್ 13ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಸಂಪ್ರದಾಯದ ಪ್ರಕಾರ ದೇಗುಲ, ದರ್ಗಾ, ಚರ್ಚ್‌ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 

ಇದೇ ವೇಳೆ ಕೋಲಾರದಿಂದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 25 ವರ್ಷ ದಾಟಿದವರು ಚುನಾವಣೆಯಲ್ಲಿ  ಸ್ಪರ್ಧಿಸಬಹುದು. ಮಾನಸಿಕ ಸ್ಥಿಮಿತ ಸರಿಯಿರಬೇಕು, ಕ್ರಿಮಿನಲ್ ಆರೋಪ ಸಾಬೀತು ಆಗಿರದವರು ಸ್ಪರ್ಧಿಸಬಹುದು ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com