ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

'ಮುನಿರತ್ನ ನನ್ನನ್ನು ಆಹ್ವಾನಿಸಿದ್ದಾರೆ ಎಂದರೆ ಬಿಜೆಪಿಯಲ್ಲಿ ಸಿಎಂ ಕ್ಯಾಂಡಿಡೇಟ್ ಇಲ್ಲಾಂತ ಆಯ್ತಲ್ಲ': ಡಿ ಕೆ ಶಿವಕುಮಾರ್

ಯಾವುದೋ ಪುಸ್ತಕದಲ್ಲಿದೆ, ವಿಕಿಪೀಡಿಯಾದಲ್ಲಿದೆ ಎಂದು ಹಿಂದೂ ಪದ ಅಶ್ಲೀಲ ಎಂದು ಹೇಳುವುದು ತಪ್ಪು, ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು: ಯಾವುದೋ ಪುಸ್ತಕದಲ್ಲಿದೆ, ವಿಕಿಪೀಡಿಯಾದಲ್ಲಿದೆ ಎಂದು ಹಿಂದೂ ಪದ ಅಶ್ಲೀಲ ಎಂದು ಹೇಳುವುದು ತಪ್ಪು, ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಪದ ಪರ್ಷಿಯನ್ ಪದ, ಅಶ್ಲೀಲ ಎಂಬುದು ಒಂದು ಪುಸ್ತಕದಲ್ಲಿದೆ ಎಂದು ಸತೀಶ್ ಜಾರಕಿಹೊಳಿಯವರು ಸಮರ್ಥನೆ ಮಾಡಿಕೊಂಡಿದ್ದಾರೆ. ಯಾವ ಪುಸ್ತಕದಲ್ಲಿದೆ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಎಲ್ಲಾ ಧರ್ಮವನ್ನು ಬೆಂಬಲಿಸುತ್ತದೆ, ಪ್ರೋತ್ಸಾಹಿಸುತ್ತದೆ, ಈ ವಿಚಾರವನ್ನು ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ, ಸಿದ್ದರಾಮಯ್ಯನವರು ಚರ್ಚಿಸಿ ತೀರ್ಮಾನಿಸಿದ್ದೇವೆ. ಜಾರಕಿಹೊಳಿಯವರ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದರು.

ಜಾರಕಿಹೊಳಿಯವರ ಹೇಳಿಕೆಯನ್ನು ಖಂಡಿಸುತ್ತೇವೆ, ಇದನ್ನು ಅವರಿಗೂ ಹೇಳಿದ್ದೇವೆ, ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಮಾತನಾಡಿರುವುದು ತಪ್ಪು ಎಂದರು. 

ಡಿ ಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿದ್ದರೆ ಮುಖ್ಯಮಂತ್ರಿ ಆಗುವುದಿಲ್ಲ, ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದ ಬಗ್ಗೆ ಕೇಳಿದಾಗ ಹಾಗಾದರೆ ಬಿಜೆಪಿಯಲ್ಲಿ ಸಿಎಂ ಕ್ಯಾಂಡಿಡೇಟ್ ಇಲ್ಲವೆಂದಾಯಿತಲ್ಲವೇ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಗೆ ಹೋಗಿದ್ದಂತೂ ನಿಜ, ನನ್ನ ಖಾಸಗಿ ವ್ಯವಹಾರಕ್ಕೆ ಹೋಗಿದ್ದೆ ಅಷ್ಟೆ ಎಂದರು.

ಕಾಂಗ್ರೆಸ್ ನಲ್ಲಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ, ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಕಾಂಗ್ರೆಸ್ ಸದಸ್ಯತ್ವಕ್ಕೆ ಅರ್ಜಿ ಹಾಕಿ, ನೀವೂ ಹಾಕಿ ಎಂದು ಡಿ ಕೆ ಶಿವಕುಮಾರ್ ಸುದ್ದಿಗಾರರಿಗೆ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com