ಟಿಪ್ಪು ಪ್ರತಿಮೆಯನ್ನು ಏಕೆ ಕಟ್ಟಬಾರದು, ಕಟ್ಟಿಕೊಳ್ಳಲಿ ಬಿಡಿ, ಟಿಪ್ಪುವಿಗೆ ಅರ್ಹತೆಯಿಲ್ಲವೆ?: ಸಿದ್ದರಾಮಯ್ಯ

ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಿವಾದವೆದ್ದಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಿವಾದವೆದ್ದಿದೆ.

ತನ್ವೀರ್ ಸೇಠ್ ಹೇಳಿಕೆಯನ್ನು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದು, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ವಿರೋಧಿಸುತ್ತಿದ್ದಾರೆ. ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಅವರನ್ನು ಮನೆಗೆ ಕಳುಹಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರೆ, ಯಾವ ಕಾರಣಕ್ಕೂ ಟಿಪ್ಪು ಪ್ರತಿಮೆ ನಿರ್ಮಿಸಲು ಬಿಡುವುದಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಗುಡುಗಿದ್ದಾರೆ.

ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಅವರನ್ನು ಮನೆಗೆ ಕಳುಹಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರೆ, ಯಾವ ಕಾರಣಕ್ಕೂ ಟಿಪ್ಪು ಪ್ರತಿಮೆ ನಿರ್ಮಿಸಲು ಬಿಡುವುದಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಗುಡುಗಿದ್ದಾರೆ.

ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ,  ಟಿಪ್ಪು ಪ್ರತಿಮೆ ಯಾಕೆ ನಿರ್ಮಾಣ ಮಾಡಬಾರದು, ಟಿಪ್ಪು ಪ್ರತಿಮೆಯನ್ನ ನಿರ್ಮಾಣ ಮಾಡಲಿ ಬಿಡಿ ಪಾಪ ತನ್ವೀರ್​ ಸೇಠ್​ ಮಾಡ್ತಿವಿ ಅಂದಿದ್ದಾರೆ ಮಾಡಲಿ ಬಿಡಿ, ಟಿಪ್ಪು ಪ್ರತಿಮೆಯನ್ನು ಏಕೆ ಕಟ್ಟಬಾರದು, ಟಿಪ್ಪುವಿಗೆ ಯೋಗ್ಯತೆ ಇಲ್ಲವೇ ಎಂದು ಕೇಳಿದರು. 

ಇತಿಹಾಸವನ್ನು ತಿರುಚುವವರು ಬಿಜೆಪಿಯವರು. ನಾರಾಯಣ ಗುರು, ಅಂಬೇಡ್ಕರ್ ಮತ್ತು ಇತರರ ಬಗ್ಗೆ ಅವರು ಏನು ಹೇಳಿದರು, ಅವರು ಸುಳ್ಳು ಹೇಳುತ್ತಾರೆ. ಪಠ್ಯಪುಸ್ತಕಗಳಲ್ಲಿ ಅಂಬೇಡ್ಕರ್ ಬಗ್ಗೆ, ಟಿಪ್ಪು ಸುಲ್ತಾನ್ ಬಗ್ಗೆ ಏನು ಹೇಳಿದರು. ಬಸವಣ್ಣ, ನಾರಾಯಣ ಗುರು ಬಗ್ಗೆ ಏನು ಹೇಳಿದರು. ಎಲ್ಲಾ ತಿರುಚಿ ಬರೆದರು, ನೀವು ಬಿಜೆಪಿಯವರಲ್ಲಿ ಈ ಪ್ರಶ್ನೆ ಕೇಳಬೇಕು ಎಂದರು. ಸತ್ಯ-ಸುಳ್ಳನ್ನು ಮತ್ತು ನನ್ನ ಮಾತುಗಳನ್ನು ಕೂಡ ವಿಮರ್ಶೆ ಮಾಡಿ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com