ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಂಗ್ರೆಸ್ ಧಮ್ ಎಂದರೆ ಭ್ರಷ್ಟಾಚಾರ, ಕಾಂಗ್ರೆಸ್ ತಾಕತ್ತು ಎಂದರೆ ನಕಲಿ ಗಾಂಧಿ ಕುಟುಂಬ!

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದ ಹಿತ ಕಾಯದೇ, ನಕಲಿ ಗಾಂಧಿ ಕುಟುಂಬದ ಹಿತ ಕಾಯುವುದರಲ್ಲಿ ಸಮಯ ಕಳೆಯುತ್ತಿತ್ತು.
Published on

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದ ಹಿತ ಕಾಯದೇ, ನಕಲಿ ಗಾಂಧಿ ಕುಟುಂಬದ ಹಿತ ಕಾಯುವುದರಲ್ಲಿ ಸಮಯ ಕಳೆಯುತ್ತಿತ್ತು. ಕಾಂಗ್ರೆಸ್ಸಿನ ಧಮ್ ತಾಕತ್ತನ್ನು ನೋಡಿದ ಮೇಲೆಯೆ ದೇಶದ ಜನರು ಮೂಲೆಗೆ ತಳ್ಳಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ಧಮ್ ಎಂದರೆ ಭ್ರಷ್ಟಾಚಾರ, ಕಾಂಗ್ರೆಸ್ ತಾಕತ್ತು ಎಂದರೆ ನಕಲಿ ಗಾಂಧಿ ಕುಟುಂಬ ಎಂದು ಟೀಕಿಸಿದೆ.

ತೋಟ, ಹೊಲ ಗದ್ದೆಗಳಲ್ಲಿ ಒಮ್ಮೊಮ್ಮೆ ಬೆಳೆಗಿಂತ ಕಳೆ ಹೆಚ್ಚಾಗುತ್ತದೆ, ಹಾಗಂತ ಕಳೆ ಬೆಳೆಸಲು ಸಾಧ್ಯವೇ?  ಟಿಕೆಟ್‌ಗೆ ಅರ್ಜಿ ಸಲ್ಲಿಸಿದಾಕ್ಷಣ ಅಧಿಕಾರಕ್ಕೆ ಬಂದೇ ಬಿಟ್ಟೆವು ಎನ್ನುವ ಹಗಲುಗನಸಿನಿಂದ ಕರ್ನಾಟಕ ಕಾಂಗ್ರೆಸ್  ಹೊರಬರಬೇಕು. ಕಾಂಗ್ರೆಸ್‌ ಎಂಬ ಕಳೆಯನ್ನು ರಾಜ್ಯದ ಜನತೆ ನಾಶ ಮಾಡಲಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಯಾವ ಸಮುದಾಯದ ಮತಗಳು ಎಷ್ಟಿವೆ ಎಂದು ಸರ್ವೇ ಮಾಡಿಸಿಯೇ ಸಿದ್ದರಾಮಯ್ಯ ನವ್ರು ಕೋಲಾರದಲ್ಲಿ ನಿಲ್ಲೋ ಪ್ಲಾನ್ ಮಾಡಿದ್ರು. ಆದರೆ ಈಗ ಅದೇ ಸಮುದಾಯದ ಪ್ರಮುಖರು ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡ್ತಾ ಇದ್ದಾರೆ.  ಈ ಹಿಂದೆ ಇಂಥ  ಅಸ್ತ್ರಗಳನ್ನು ಸ್ವಪಕ್ಷೀಯರ ಮೇಲೆ ಪ್ರಯೋಗಿಸಿಯೇ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯಗೆ ಈಗ ಕರ್ಮ ವಾಪಸಾಗಿದೆ ಎಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com