ಚಾಂಡಿ ಓಮನ್
ಚಾಂಡಿ ಓಮನ್

ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲು ನನಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿತು: ಒಮನ್ ಚಾಂಡಿ ಪುತ್ರ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ಕರ್ನಾಟಕಕ್ಕೆ ಪ್ರವೇಶಿಸಿದಾಗಿನಿಂದ ವೇಗ ಪಡೆದುಕೊಂಡಿದೆ.

ಸಾಣಿಕೆರೆ (ಚಿತ್ರದುರ್ಗ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ಕರ್ನಾಟಕಕ್ಕೆ ಪ್ರವೇಶಿಸಿದಾಗಿನಿಂದ ವೇಗ ಪಡೆದುಕೊಂಡಿದೆ.

ರಾಹುಲ್ ಸಭೆಗಳು ಮತ್ತು ಸಂವಾದ ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಹುಲ್ ನೇತೃತ್ವದಲ್ಲಿ, ಕರ್ನಾಟಕ ಮತ್ತು ಇತರ ರಾಜ್ಯಗಳ ಕಾಂಗ್ರೆಸ್ ನಾಯಕರು ಗ್ರಾಮೀಣ ಪ್ರದೇಶದ ಜನರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಅರ್ಥಮಾಡಿಕೊಂಡು ಪರಿಹರಿಸಲು ಮುಂದಾಗಿದ್ದಾರೆ.

ಕೇರಳದ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿ ಅವರ ಮಗ ಚಾಂಡಿ ಓಮನ್ ರಾಹುಲ್ ಗಾಂಧಿ ಅವರ ಪಾದಯಾತ್ರೆಯಲ್ಲಿ ಬರಿಗಾಲಲ್ಲಿ ನಡೆಯುತ್ತಿದ್ದಾರೆ.

ರಾಷ್ಟ್ರೀಯ ಯುವ ಕಾಂಗ್ರೆಸ್ ಮುಖಂಡರೂ ಆಗಿರುವ ಚಾಂಡಿ ಓಮನ್, ಕೇರಳದಲ್ಲಿ ನಡೆದ ಪಾದಯಾತ್ರೆಯಲ್ಲೂ ಅತ್ಯಂತ ಕ್ರಿಯಾಶೀಲವಾಗಿ ಪಾಲ್ಗೊಂಡಿದ್ದರು. ಅವರು ಈಗ ಕರ್ನಾಟಕದಲ್ಲಿ ಬರಿಗಾಲಲ್ಲಿ ನಡೆಯುತ್ತಿದ್ದಾರೆ.

37 ವರ್ಷದ ಚಾಂಡಿ ಉಮನ್ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದರು. ಅದಾದ ನಂತರ ಕೊಲ್ಲಂ ನಿಂದ ಬರಿಗಾಲಲ್ಲಿ ನಡೆಯುತ್ತಿದ್ದಾರೆ.  ಯಾತ್ರೆಗೂ ರಾಜಕೀಯಕ್ಕೂ ಸಂಬಂಧವಿಲ್ಲ. "ಇದು ಭಾರತವನ್ನು ಒಂದುಗೂಡಿಸುವ ಯಾತ್ರೆಯಾಗಿದೆ, ನಾನು ನನ್ನ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಶೂ ಧರಿಸಿ ಆರಂಭಿಸಿದೆ. ಆದರೆ, ನಾನು ಕೊಲ್ಲಂನಲ್ಲಿ ಶೂ ಇಲ್ಲದೆ ನಡೆದಿದ್ದೇನೆ. ಅಂದಿನಿಂದ, ಅದರ ಆರೋಗ್ಯ ಪ್ರಯೋಜನಗಳನ್ನು ಗಮನಿಸಿದ ನಂತರ ನಾನು ಬರಿಗಾಲಿನಲ್ಲಿ ನಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಪಾದಯಾತ್ರೆಯ ಮುಖ್ಯ ಗುರಿ ಜನರಲ್ಲಿ ಪ್ರೀತಿ ಮತ್ತು ವಾತ್ಸಲ್ಯವನ್ನು ಹರಡುವುದು. ವಿಭಜಕ ಶಕ್ತಿಗಳನ್ನು ಸೋಲಿಸುವುದು. ನನ್ನ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಡೆಯುವುದು ಅಪರೂಪದ ಅನುಭವ. ಗ್ರಾಮೀಣ ಪ್ರದೇಶದ ಜನರನ್ನು ಭೇಟಿ ಮಾಡುವುದು ಮತ್ತು ಅವರ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಉತ್ತಮ ಅನುಭವ ಎಂದು ಹೇಳಿದ್ದಾರೆ.

ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಸಾಂವಿಧಾನಿಕ ಕಾನೂನಿನಲ್ಲಿ ಎಲ್‌ಎಲ್‌ಎಂ ಪದವಿ ಪಡೆದಿರುವ ಉಮನ್  ಈಗ ಕನ್ನಡ ಕಲಿಯುತ್ತಿದ್ದಾರೆ. ಯಾತ್ರೆ ರಾಯಚೂರು ತಲುಪುವ ವೇಳೆಗೆ ನಾನು ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ಈ ಯಾತ್ರೆಯು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಮತ್ತು ರಾಜ್ಯವನ್ನು ಚೆನ್ನಾಗಿ ತಿಳಿದುಕೊಳ್ಳಲು ನನಗೆ ಸಹಾಯ ಮಾಡಿದೆ ಎಂದು ಒಮ್ಮನ್ ಹೇಳಿದರು.

ರಾಹುಲ್ ಕೈಗೊಂಡಿರುವ ಯಾತ್ರೆ ಮತಕ್ಕಾಗಿ ಅಲ್ಲ. ಚುನಾವಣಾ ರಾಜಕೀಯವು ಒಂದು ಅಂಶವಾಗಿದ್ದರೂ ಸಹ, ಭಾರತದ ಜನರನ್ನು ಒಗ್ಗೂಡಿಸುವುದು ಇಂದಿನ ಅಗತ್ಯವಾಗಿದೆ. ಯಾತ್ರೆ ಮುಗಿದ ನಂತರ ದೇಶ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com