ಭಾರತ್ ಜೋಡೋ ಯಾತ್ರೆ: ಕಡಲೆಕಾಯಿ, ಬುದ್ಧನ ಪ್ರತಿಮೆ ಸೇರಿದಂತೆ ರಾಹುಲ್ ಗಾಂಧಿಗೆ ಉಡುಗೊರೆಗಳ ಸುರಿಮಳೆ!

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆ 35 ದಿನಗಳಲ್ಲಿ ಮೂರು ರಾಜ್ಯಗಳನ್ನು ಪೂರ್ಣಗೊಳಿಸಿದೆ.
ರಾಹುಲ್ ಗಾಂಧಿಗೆ ಕಾರ್ಯಕರ್ತರ ಉಡುಗೊರೆ
ರಾಹುಲ್ ಗಾಂಧಿಗೆ ಕಾರ್ಯಕರ್ತರ ಉಡುಗೊರೆ
Updated on

ಬಳ್ಳಾರಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆ 35 ದಿನಗಳಲ್ಲಿ ಮೂರು ರಾಜ್ಯಗಳನ್ನು ಪೂರ್ಣಗೊಳಿಸಿದೆ.

ರಾಹುಲ್ ತಮ್ಮ ಪಾದಯಾತ್ರೆ ವೇಳೆ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಉಡುಗೊರೆ ಸ್ವೀಕರಿಸುತ್ತಿದ್ದಾರೆ. ಇದರ ಪರಿಣಾಮ ಒಂದು ಕಂಟೇನರ್ ಪೂರ್ತಿ ಉಡುಗೊರೆಗಳು ತುಂಬಿವೆ.

ಒಂದು ತಿಂಗಳಿನಿಂದ ಯಾತ್ರೆ ಮಾಡುತ್ತಿರುವ ಕಂಟೈನರ್‌ನಲ್ಲಿ  ರಾಹುಲ್ ಗಾಂಧಿಗೆ ಉಡುಗೊರೆಯಾಗಿ ನೀಡಿದ ಕಲಾಕೃತಿಗಳು, ರಾಹುಲ್ ಗಾಂಧಿ ಅವರ ಭಾವಚಿತ್ರಗಳು ಮತ್ತು ಕಡಲೆಕಾಯಿ ಸೇರಿದಂತೆ ಧಾನ್ಯಗಳನ್ನು ಸುರಕ್ಷಿತವಾಗಿಡಲಾಗಿದೆ.

ಭಾರತ್ ಜೋಡೋ ಯಾತ್ರೆಯ ಮೊದಲ ದಿನದಿಂದ ಇಲ್ಲಿಯವರೆಗೆ ರಾಹುಲ್ ಅವರೊಂದಿಗೆ ಪಾದಯಾತ್ರೆ ಮಾಡುತ್ತಿರುವ ಜನರ ಸಮರ್ಪಿತ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ವಸತಿ ಮತ್ತು ವಿವಿಧ ಸೌಲಭ್ಯಗಳನ್ನು ಒದಗಿಸಲು 50 ಕಂಟೈನರ್‌ಗಳಿವೆ.

ರಾಜ್ಯದಲ್ಲಿ ರಾಹುಲ್  330 ಕಿ.ಮೀ ಕ್ರಮಿಸಿದ್ದು, ಅವರಿಗೆ ಅಭಿಮಾನಿಗಳು ಮತ್ತು ಹಿತೈಷಿಗಳು ಉಡುಗೊರೆ ಮತ್ತು ಸ್ಮರಣಿಕೆಗಳನ್ನು ನೀಡಿದ್ದಾರೆ. ಬುದ್ಧನ ಪ್ರತಿಮೆಗಳು, ಡಾ ಬಿಆರ್ ಅಂಬೇಡ್ಕರ್ ಫೋಟೋಗಳು ಉಡುಗೊರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

ಅವರು ಬಳ್ಳಾರಿಗೆ ಆಗಮಿಸಿ 1,000 ಕಿಮೀ ಪ್ರಯಾಣವನ್ನು ಪೂರ್ಣಗೊಳಿಸಿದಾಗ ಮತ್ತೊಂದು ದೊಡ್ಡ ಸ್ಮರಣಿಕೆ ಸ್ವೀಕರಿಸುವ ಸಾಧ್ಯತೆಯಿದೆ.

ರಾಹುಲ್ ಅವರನ್ನು ಸನ್ಮಾನಿಸಲು ಜಿಲ್ಲೆಯ ಹಲವಾರು ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಅನುಮತಿ ಕೋರಿವೆ. “ನಮ್ಮ ನೆಚ್ಚಿನ ನಾಯಕನಿಗೆ ಹೆಚ್ಚಿನ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ನೀಡಲು ಕಾಯುತ್ತಿವೆ.

ಜನರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಂವಹನ ನಡೆಸುವುದು ಅವರ ಒಂದು ದೊಡ್ಡ ಉಡುಗೊರೆಯಾಗಿದೆ. ಎಲ್ಲರನ್ನೂ ನಗುಮುಖದಿಂದ ಸ್ವಾಗತಿಸುವ ಅವರು, ಪಕ್ಷದ ಬೆನ್ನೆಲುಬಾಗಿರುವ ನೆಲಮಟ್ಟದ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ ಎಂದು ಬಳ್ಳಾರಿ ಗ್ರಾಮಾಂತ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.

ಬಳ್ಳಾರಿ ಹಲವು ವರ್ಷಗಳಿಂದ ಗಾಂಧಿ ಕುಟುಂಬದ  ಅಚ್ಚುಮೆಚ್ಚಿನ ಸ್ಥಳವಾಗಿದೆ. ಜನರ ನಡುವೆ ಸೌಹಾರ್ದತೆ ಮೂಡಿಸುವುದೇ ಯಾತ್ರೆಯ ಧ್ಯೇಯವಾಗಿದ್ದು, ಕರ್ನಾಟಕದ ಪ್ರಮುಖ ಯಾತ್ರೆಯನ್ನು ಬಳ್ಳಾರಿಯಲ್ಲಿ ಆಯೋಜಿಸುತ್ತಿರುವುದು ನಮಗೆ ಸಂತಸ ತಂದಿದೆ. ಶುಕ್ರವಾರ ನಡೆಯುವ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ರಫೀಕ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com