ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಶೇ.100 ರಷ್ಟು ಮತದಾನ: ಹೊರ ರಾಜ್ಯಗಳಲ್ಲಿಯೂ ಖರ್ಗೆ ಫೇವರ್; ಎಕ್ಸಿಟ್ ಪೋಲ್ ವರದಿ!

ಬೆಂಗಳೂರಿನಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿದ್ದು, ಕರ್ನಾಟಕದ  ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಲ್ಲರ ಮೆಚ್ಚಿನವರಾಗಿದ್ದಾರೆ.
ಖರ್ಗೆ ಮತ್ತು ತರೂರ್ ಮತದಾನ
ಖರ್ಗೆ ಮತ್ತು ತರೂರ್ ಮತದಾನ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ  ನಡೆದ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿದ್ದು, ಕರ್ನಾಟಕದ  ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಲ್ಲರ ಮೆಚ್ಚಿನವರಾಗಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಿರಿಯ ನಾಯಕರು ಬೆಂಗಳೂರಿನಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿರುವ ಮೂರು ಮತಗಟ್ಟೆಗಳ ಮತಯಂತ್ರಗಳನ್ನು ಸೀಲ್ ಮಾಡಿದ ಕಂಟೈನರ್‌ನಲ್ಲಿ ಸಂಗ್ರಹಿಸಿ, ಮಾಜಿ ಕೇಂದ್ರ ಸಚಿವ ಪ್ರದೇಶ ಚುನಾವಣಾಧಿಕಾರಿ ಸುದರ್ಶನ್ ನಾಚಿಯಪ್ಪನ್ ಅವರು ನವದೆಹಲಿಗೆ ಕೊಂಡೊಯ್ದರು.

ಸೋಮವಾರ ಸಂಜೆ ಖರ್ಗೆ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಸೀಲ್ ಮಾಡಿದ ನಂತರ ಕಂಟೈನರ್ ನೊಂದಿಗೆ ನಾಚಿಯಪ್ಪನ್ ದೆಹಲಿಗೆ ತೆರಳಿದರು. ದೇಶಾದ್ಯಂತ ಸಂಗ್ರಹಿಸಿದ ಬಾಕ್ಸ್‌ಗಳನ್ನು ಬುಧವಾರದವರೆಗೆ ಸ್ಟ್ರಾಂಗ್‌ರೂಮ್‌ನಲ್ಲಿ ಇರಿಸಲಾಗಿದ್ದು, ಎಐಸಿಸಿ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಎಣಿಕೆಗೆ ತೆರೆಯಲಿದ್ದಾರೆ.

ಸಂಜೆ 4 ಗಂಟೆಗೆ ಚುನಾವಣೆ ಮುಗಿದ ನಂತರ ಎಕ್ಸಿಟ್ ಪೋಲ್‌ನಂತೆ ಆಂತರಿಕ ಮೌಲ್ಯಮಾಪನವನ್ನು ನಡೆಸಲಾಯಿತು. ಕರ್ನಾಟಕದಿಂದ 99.9 ಪ್ರತಿಶತದಷ್ಟು ಬೆಂಬಲವು ಖರ್ಗೆ ಅವರಿಗೆ ಇದೆ ಎಂದು ಅದು ಬಹಿರಂಗಪಡಿಸಿತು.

ಸೋಮವಾರದಂದು 503 ಮತಗಳ ಪೈಕಿ 501 ಮತಗಳು ಚಲಾವಣೆಯಾಗಿದ್ದು, ಖರ್ಗೆ ಪರ ಮತಯಾಚನೆ ಮಾಡಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ಖರ್ಗೆ ಪರವಾಗಿ ಮತಚಲಾವಣೆಯಾಗಿದೆ ಎಂದು ಮಾಹಿತಿಯಿಂದ ತಿಳಿದುಬಂದಿದೆ.

ದೇಶದ ವಿವಿಧ ಭಾಗಗಳಿಂದ ಚಲಾವಣೆಯಾದ ಸುಮಾರು 9,000 ಮತಗಳಲ್ಲಿ ಖರ್ಗೆ 8,000 ಮತಗಳನ್ನು ಗಳಿಸಬಹುದು ಮತ್ತು ಇತರ ಸ್ಪರ್ಧಿ ಶಶಿ ತರೂರ್ ಅವರು 500 ಕ್ಕಿಂತ ಕಡಿಮೆ ಮತಗಳನ್ನು ಗಳಿಸಬಹುದು  ಎಂಬುದಾಗಿ ಹೇಳಲಾಗಿದೆ.

ಆರ್.ವಿ.ದೇಶಪಾಂಡೆಯವರ ಪುತ್ರ ಪ್ರಶಾಂತ್ ದೇಶಪಾಂಡೆ ಮತ್ತು ನಿವೇದಿತ್ ಆಳ್ವ  ಮತದಾನದಿಂದ ದೂರ ಉಳಿದಿದದಾರೆ.ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್ ಆಳ್ವ ಅವರ ಪುತ್ರ. ತಾವು ದೇಶದಿಂದ ಹೊರಗುಳಿಯುವುದಾಗಿ ಪಕ್ಷದ ಮುಖಂಡರಿಗೆ ಈಗಾಗಲೇ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com