ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ: ಜನರ ನಾಡಿಮಿಡಿತ ಅರಿಯಲು ಕೋಲಾರಕ್ಕೆ ನವೆಂಬರ್ 13ರಂದು ಸಿದ್ದರಾಮಯ್ಯ ಭೇಟಿ!

ಕೋಲಾರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ವಿವಿಧ ಸಮುದಾಯಗಳ ಮುಖಂಡರು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಅಹಿಂದ ಮುಖಂಡ ಸಿದ್ದರಾಮಯ್ಯ ನ.13ರಂದು ಕೋಲಾರಕ್ಕೆ ಭೇಟಿ ನೀಡಲಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಕೋಲಾರ: ಕೋಲಾರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ವಿವಿಧ ಸಮುದಾಯಗಳ ಮುಖಂಡರು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಅಹಿಂದ ಮುಖಂಡ ಸಿದ್ದರಾಮಯ್ಯ ನ.13ರಂದು ಕೋಲಾರಕ್ಕೆ ಭೇಟಿ ನೀಡಲಿದ್ದಾರೆ.

ಕೋಲಾರದಿಂದ ಸ್ಪರ್ಧಿಸಲು ಒತ್ತಡ ಹೆಚ್ಚುತ್ತಿದೆ, ಹೀಗಾಗಿ ಯಾವುದೇ ಘೋಷಣೆ ಮಾಡುವ ಮೊದಲು ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಜನರ ನಾಡಿ ಮಿಡಿತವನ್ನು ಅರಿತುಕೊಳ್ಳಲು ವಿವಿಧ ಸಮುದಾಯಗಳ ಸದಸ್ಯರು ಹಾಗೂ ದಲಿತ ಸಂಘಟನೆಗಳು ಹಾಗೂ ನಾಗಿಕ ಸಮಾಜದವರೊಂದಿಗೆ ಚರ್ಚಿಸಲಿದ್ದಾರೆ.

ಒಂದು ಕಾಲದಲ್ಲಿ ಬರಪೀಡಿತವಾಗಿದ್ದ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಯಥೇಚ್ಛ ಮಳೆಯಾಗಿದೆ. ಕ್ಷೇತ್ರಕ್ಕೆ ಪ್ರವಾಸ ಆರಂಭಿಸುವ ಮುನ್ನ ಕುರುಡಮಲೈ ಗಣಪತಿ ದೇವಸ್ಥಾನ ಮತ್ತು ಪ್ರೀತಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

ಹೈದರಾಬಾದ್ ಮೂಲದ ಏಜೆನ್ಸಿಯೊಂದು ಕ್ಷೇತ್ರದಲ್ಲಿ ಎರಡು ಸಮೀಕ್ಷೆ ನಡೆಸಿ ಸಮಗ್ರ ವರದಿಯನ್ನು ಮಂಡಿಸಿದ್ದು, ಸಿದ್ದರಾಮಯ್ಯ ಶೇ.65ರಷ್ಟು ಮತಗಳಿಂದ ಗೆಲ್ಲಬಹುದು ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯನವರ ಜನಪ್ರಿಯತೆ, ಅವರ ಕಾರ್ಯಕ್ರಮಗಳು, ಕೆಸಿ ವ್ಯಾಲಿ ಯೋಜನೆಯ ಲಾಭ ಇತ್ಯಾದಿಗಳ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದೆ. ಸಿದ್ದರಾಮಯ್ಯ ಕ್ಷೇತ್ರವನ್ನು ಪ್ರತಿನಿಧಿಸಿದರೆ ಗಡಿಭಾಗದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಮತ್ತಷ್ಟು ಅಭಿವೃದ್ಧಿ ಹೊಂದಲಿದ್ದು, ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂಬುದು ಕ್ಷೇತ್ರದ ಜನರ ಅಭಿಪ್ರಾಯ.

ಮುಸ್ಲಿಂ, ದಲಿತ, ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದ ಜನಸಂಖ್ಯೆ, ನಂತರದ ಕುರುಬ, ಬಲಿಜ ಹಾಗೂ ಇತರೆ ಹಿಂದುಳಿದ ಜಾತಿಗಳು ಸಿದ್ದರಾಮಯ್ಯ ಅವರಿಗೆ ಬಲ ನೀಡಬಹುದಾದರೂ, ಔಪಚಾರಿಕ ಘೋಷಣೆ ಮಾಡುವ ಮುನ್ನ ಕ್ಷೇತ್ರದಲ್ಲಿ ಪ್ರವಾಸ ಮಾಡುವ ಯೋಜನೆ ಹೊಂದಿದ್ದಾರೆ.

ಕೋಲಾರದ ಬೋವಿ ಸಮಾಜದ ಮುಖಂಡರನ್ನು ಭೇಟಿ ಮಾಡಿ. ಕೋಲಾರದ ಜನರನ್ನು ನಾನು ನಿರಾಶೆಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ ಮತ್ತು ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

ಮೈಸೂರಿನ ಕಾಂಗ್ರೆಸ್ ನಾಯಕರು ಕೂಡ ಸಿದ್ದರಾಮಯ್ಯ ಅವರಿಗೆ ಸುರಕ್ಷಿತವೆನಿಸಿದ ವರುಣಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಬಯಸಿದ್ದಾರೆ. ಅಲ್ಲಿಂದ ಸ್ಪರ್ಧಿಸಿದರೆ ಸಿದ್ದರಾಮಯ್ಯನವರು ರಾಜ್ಯದ ಬೇರೆ ಬೇರೆ ಕಡೆ ಪ್ರಚಾರ ಮಾಡಲು ಮುಕ್ತರಾಗುತ್ತಾರೆ ಎಂಬುದು ಅವರ ಅಭಿಪ್ರಾಯ.

ಶಾಸಕ ಯತೀಂದ್ರ ಕೂಡ ತಮ್ಮ ತಂದೆ ಸ್ಪರ್ಧಿಸಲು ಬಯಸಿದರೆ ಕ್ಷೇತ್ರವನ್ನು ಖಾಲಿ ಮಾಡುವುದಾಗಿ ಹೇಳಿದ್ದಾರೆ. ಮಾಜಿ ಸಚಿವರಾದ ರಮೇಶ್ ಕುಮಾರ್, ಕೃಷ್ಣ ಬೈರೇಗೌಡ, ಶಾಸಕರಾದ ನಾರಾಯಣಸ್ವಾಮಿ, ಶ್ರೀನಿವಾಸಗೌಡ ಮತ್ತಿತರರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೋಲಾರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com