ಸಂಧಾನ ಸಭೆ ವಿಫಲ: 'ಕಾಂಗ್ರೆಸ್' ತೊರೆದ ಮುದ್ದ ಹನುಮೇಗೌಡ! ವಿಧಾನಸಭೆ ಚುನಾವಣೆಗೆ ಕುಣಿಗಲ್ ನಿಂದ ಬಿಜೆಪಿ ಟಿಕೆಟ್?

2023 ರ ವಿಧಾನಸಭಾ ಚುನಾವಣೆಗೆ ಹಳೆಯ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ಮತ್ತು ತುಮಕೂರು ಮಾಜಿ ಲೋಕಸಭಾ ಸದಸ್ಯ ಎಸ್‌ಪಿ ಮುದ್ದಹನುಮೇಗೌಡ ಪಕ್ಷ ತೊರೆದಿದ್ದಾರೆ.
ಮುದ್ದ ಹನುಮೇಗೌಡ
ಮುದ್ದ ಹನುಮೇಗೌಡ

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಹಳೆಯ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ಮತ್ತು ತುಮಕೂರು ಮಾಜಿ ಲೋಕಸಭಾ ಸದಸ್ಯ ಎಸ್‌ಪಿ ಮುದ್ದಹನುಮೇಗೌಡ ಪಕ್ಷ ತೊರೆದಿದ್ದಾರೆ.

ರಾಜಿನಾಮೆ ನೀಡುವುದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ನಿರ್ಧಾರ ಪ್ರಕಟಿಸಿದರು.

ಬಿಜೆಪಿಗೆ ಸೇರ್ಪಡೆಗೊಂಡು ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ, ಈ ಪ್ರದೇಶದಲ್ಲಿ ಬಿಜೆಪಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಅಂತಿಮವಾಗಿ ಜೆಡಿಎಸ್‌ಗೆ ಲಾಭವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ಕುಣಿಗಲ್ ನಿಂದ ಮುದ್ದ ಹನುಮೇಗೌಡ ಸ್ಪರ್ಧಿಸಿದರೇ  ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರ ಮೇಲೆ ನೇರ ಪರಿಣಾ ಬೀರಲಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಜೊತೆ ಕುಣಿಗಲ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಂಬಂಧ ಚರ್ಚೆ ನಡೆಸಿದರು, ಆದರೆ ಮಾತುಕತೆ ವಿಫಲಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಡಾ.ರಂಗನಾಥ್ ಅವರಿಗೆ ಟಿಕೆಟ್ ನಿರಾಕರಿಸುವಂತಿಲ್ಲ ಎಂದು  ಇಬ್ಬರು ನಾಯಕರು ಮುದ್ದ ಹನುಮೇಗೌಡರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ನನ್ನನ್ನು ಪಕ್ಷದಿಂದ ಮುಕ್ತಗೊಳಿಸುವಂತೆ ಮುಖಂಡರಿಗೆ ಮನವಿ ಮಾಡಿದ್ದು, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರಿಗೆ ದೂರವಾಣಿ ಮೂಲಕ ನನ್ನ ನಿರ್ಧಾರವನ್ನು ತಿಳಿಸಿದ್ದೇನೆ, ಹಾಲಿ ಸಂಸದನಾಗಿದ್ದರೂ 2019ರ ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ನಿರಾಕರಿಸಲಾಗಿತ್ತು. ನಂತರ, ಯಾವುದೇ ನಾಯಕರಾಗಲೀ ಅಥವಾ ಪಕ್ಷವಾಗಲೀ ನನಗೆ ರಾಜ್ಯಸಭಾ ನಾಮನಿರ್ದೇಶನ ಅಥವಾ ಎಂಎಲ್‌ಸಿ ಹುದ್ದೆಯನ್ನು ನೀಡಿ ಸರಿದೂಗಿಸಲು ಪ್ರಯತ್ನಿಸಲಿಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹೆ ಮುದ್ದ ಹನುಮೇಗೌಡ ತಿಳಿಸಿದ್ದಾರೆ.

ಎರಡು ಬಾರಿ ಶಾಸಕರಾಗಿ, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ದಶಕದಿಂದಲೂ ಕೆಲಸ ಮಾಡಿದ್ದೇನೆ, ತಮ್ಮ ರಾಜಿನಾಮೆ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯ ಜಿಎಸ್ ಬಸವರಾಜು ವಿರುದ್ಧ ಸೋತಿದ್ದರಿಂದ ಅವರು ತಮ್ಮ ಟಿಕೆಟ್ ತ್ಯಾಗ ಮಾಡಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com