ಸರ್ಕಾರದ ಸಾಧನೆ ಹೇಳಿಕೊಳ್ಳಲು ಏನಿದೆ, ಇದು ರಾಜಕೀಯ ಪ್ರೇರಿತ ಸಮಾವೇಶ: ಸಿದ್ದರಾಮಯ್ಯ ಟೀಕೆ

ಜನ ಸೇರಿಸಿಕೊಂಡು, ಹಣ ಖರ್ಚು ಮಾಡಿ ರಾಜಕೀಯ ಮಾಡಲು ಬಿಜೆಪಿಯವರು ಹೊರಟಿದ್ದಾರೆ ಎಂದು ದೊಡ್ಡಬಳ್ಳಾಪುರದ ಇಂದಿನ ಜನಸ್ಪಂದನ ಸಮಾವೇಶವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರ
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಪ್ರವಾಹದಲ್ಲಿ ಕಷ್ಟಕ್ಕೊಳಗಾಗಿರುವವರಿಗೆ ಸರ್ಕಾರ ಸ್ಪಂದಿಸಬೇಕು, ಬೆಂಗಳೂರಿನಲ್ಲಿ ಸೆಪ್ಟೆಂಬರ್ ಮಳೆಗೆ ಜನತೆ ಎಷ್ಟು ಕಷ್ಟಪಟ್ಟಿದ್ದಾರೆ ಎಂದು ನಾವೆಲ್ಲಾ ನೋಡಿದ್ದೇವೆ. ಅದನ್ನು ಬಿಟ್ಟು ಜನ ಸೇರಿಸಿಕೊಂಡು, ಹಣ ಖರ್ಚು ಮಾಡಿ ರಾಜಕೀಯ ಮಾಡಲು ಬಿಜೆಪಿಯವರು ಹೊರಟಿದ್ದಾರೆ ಎಂದು ದೊಡ್ಡಬಳ್ಳಾಪುರದ ಇಂದಿನ ಜನಸ್ಪಂದನ ಸಮಾವೇಶವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸುದ್ದಿಗಾರರು ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ಇದು ರಾಜಕೀಯ ಪ್ರೇರಿತವಾದದ್ದು, ಜನರು ಕಷ್ಟದಲ್ಲಿದ್ದಾರೆ, ಬೆಂಗಳೂರಿನಲ್ಲಿ ಬೋಟ್ ನಲ್ಲಿ ಜನರು ಓಡಾಡಬೇಕಾದ ಪರಿಸ್ಥಿತಿ ಉಂಟಾಯಿತು. ಅವರ ಕಷ್ಟ-ಸುಖ ಕೇಳದೆ ಜನಸ್ಪಂದನೆ ಮಾಡಿ ಏನು ಪ್ರಯೋಜನ ಎಂದು ಕೇಳಿದರು.

ಯಾವ ಸಚಿವರೂ ಕ್ಷೇತ್ರಗಳಿಗೆ ಹೋಗುತ್ತಿಲ್ಲ, ಸರ್ಕಾರದ ಸಾಧನೆ ಹೇಳಲು ಮಾಡಿದ್ದು ಏನಿದೆ, ಭ್ರಷ್ಟಾಚಾರ ಬಗ್ಗೆ ಹೇಳಬೇಕಷ್ಟೆ ಎಂದು ಟೀಕಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com