ಕಾಂಗ್ರೆಸ್ ಗೆ ರಾಜಕೀಯ ವೇದಿಕೆಯಾಗಲಿದ್ಯಾ ಸಿದ್ದರಾಮೋತ್ಸವ? ಒಂದೇ ಫ್ಲೈಟ್ ನಲ್ಲಿ ರಾಹುಲ್ -ಡಿಕೆಶಿ ಆಗಮನ; ಚುನಾವಣೆ ಸಂಬಂಧ ಚರ್ಚೆ?

ಕಾಂಗ್ರೆಸ್‌ ಪುನಃಶ್ಚೇತನ ಯಾತ್ರೆ ರಾಜ್ಯದಿಂದ ಪುನಾರಂಭವಾಗಲಿದೆ ಎಂಬ ಭರವಸೆಗೆ ಅಡ್ಡಿಯಾಗುತ್ತಿರುವ ಪಕ್ಷ ದೊಳಗಿನ ಭಿನ್ನಾಭಿಪ್ರಾಯ ವಿಸ್ತರಣೆ ತಡೆಗೆ ಹೈಕಮಾಂಡ್‌ ಮುಂದಾಗಿದೆ.
ಸಿದ್ದರಾಮಯ್ಯ, ರಾಹುಲ್ ಮತ್ತು ಡಿಕೆ ಶಿವಕುಮಾರ್
ಸಿದ್ದರಾಮಯ್ಯ, ರಾಹುಲ್ ಮತ್ತು ಡಿಕೆ ಶಿವಕುಮಾರ್
Updated on

ಬೆಂಗಳೂರು: ಕಾಂಗ್ರೆಸ್‌ ಪುನಃಶ್ಚೇತನ ಯಾತ್ರೆ ರಾಜ್ಯದಿಂದ ಪುನಾರಂಭವಾಗಲಿದೆ ಎಂಬ ಭರವಸೆಗೆ ಅಡ್ಡಿಯಾಗುತ್ತಿರುವ ಪಕ್ಷ ದೊಳಗಿನ ಭಿನ್ನಾಭಿಪ್ರಾಯ ವಿಸ್ತರಣೆ ತಡೆಗೆ ಹೈಕಮಾಂಡ್‌ ಮುಂದಾಗಿದೆ. ದಾವಣಗೆರೆಯಲ್ಲಿ ಬುಧವಾರ ನಡೆಯಲಿರುವ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದಲ್ಲಿ ರಾಹುಲ್ ಗಾಂಧಿ ಭಾಗವಹಿಸುತ್ತಿದ್ದು, ಪಕ್ಷದ ಬೃಹತ್ ಕಾರ್ಯಕ್ರಮವಾಗಲಿದೆ.

2023 ರ ವಿಧಾನಸಭಾ ಚುನಾವಣೆಗೆ ಈ ಕಾರ್ಯಕ್ರಮ ಪೂರ್ವಭಾವಿಯಾಗಲಿದೆ.  ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಪಕ್ಷದ ಮುಖಂಡರು, ಶಾಸಕರು ಮತ್ತು ನಿರೀಕ್ಷಿತ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಲು ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಸಜ್ಜುಗೊಳಿಸುತ್ತಿದ್ದಾರೆ.

ಸಮಾರಂಭದಲ್ಲಿ ಸಿದ್ದರಾಮಯ್ಯ ಮತ್ತು ರಾಹುಲ್ ಇಬ್ಬರೂ ಇರುವುದರಿಂದ ಅವರು ಯಾವುದೇ ಚಾನ್ಸ್  ತೆಗೆದುಕೊಳ್ಳಲು ಬಯಸುತ್ತಿಲ್ಲ, ನೂರಾರು ವಿಐಪಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವೇದಿಕೆಯನ್ನು ನಿರ್ಮಿಸಲಾಗಿದೆ,ಎಲ್ಲಾ ನಾಯಕರಿಗೆ ಅವರ ಹಿರಿತನಕ್ಕೆ ಅನುಗುಣವಾಗಿ ಪ್ರಾಮುಖ್ಯತೆ ನೀಡಲಾಗುವುದು.

ದೇಶದಲ್ಲಿ ಕಾಂಗ್ರೆಸ್‌ಗೆ ಮರು ಚೈತನ್ಯ ತರುವ ದೃಷ್ಟಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆಯಲಿರುವ ‘ಭಾರತ್‌ ಜೋಡೋ ಯಾತ್ರೆ’ಯು ಕರ್ನಾಟಕದಲ್ಲಿ ಬರೋಬ್ಬರಿ 27 ದಿನಗಳ ಕಾಲ ನಡೆಯಲಿದೆ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ 75 ಕಿಲೋಮೀಟರ್  ಪಾದಯಾತ್ರೆಯನ್ನು ಕೂಡ ಆಯೋಜಿಸಲಾಗಿದೆ.

ಮಂಗಳವಾರ ಸಂಜೆ ನವದೆಹಲಿಯಿಂದ ಹುಬ್ಬಳ್ಳಿಗೆ ಚಾರ್ಟರ್ಡ್ ಫ್ಲೈಟ್‌ನಲ್ಲಿಆಗಮಿಸಲಿರುವ ರಾಹುಲ್  ಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರಸ್ಪರ ಭೇಟಿಯಾಗುವ ಸಾಧ್ಯತೆಯಿದೆ.

ಇಡಿ ಸಲ್ಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ಕಾರಣ ಅವರ ಸಾಮಾನ್ಯ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆದೇಶ ಪ್ರಕಟವಾಗುವ ಸಾಧ್ಯತೆಯಿರುವ ಕಾರಣ , ಶಿವಕುಮಾರ್ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿರುವುದರಿಂದ  ಮಂಗಳವಾರ ದೆಹಲಿಯಲ್ಲಿರುತ್ತಾರೆ.

ಇಂತಹ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿರುವ ನಿದರ್ಶನಗಳು ಇರುವುದರಿಂದ ಶಿವಕುಮಾರ್ ಅವರ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ಅವರು ಅಧಿಕಾರದಲ್ಲಿಲ್ಲದ ಕಾರಣ, ಸಾಕ್ಷ್ಯವನ್ನು ತಿರುಚಲು ಯಾವುದೇ ಅವಕಾಶವಿಲ್ಲ ಎಂದು ಅವರ ವಕೀಲರು ವಾದಿಸುತ್ತಾರೆ.

ರಾತ್ರಿ 8 ಗಂಟೆಗೆ ನಡೆಯಲಿರುವ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಹುಬ್ಬಳ್ಳಿಗೆ ಆಗಮಿಸುತ್ತಿರುವ ಕಾರಣ, ಇಬ್ಬರೂ ಒಂದೇ ಚಾರ್ಟರ್ಡ್ ವಿಮಾನದಲ್ಲಿ ಆಗಮಿಸಲಿದ್ದಾರೆ, ಅದು ದೆಹಲಿಯಿಂದ ಸಂಜೆ 5.30 ರ ಸುಮಾರಿಗೆ ಟೇಕ್ ಆಫ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಒಂದು ಗಂಟೆಗೂ ಹೆಚ್ಚು ಕಾಲ ಫ್ಲೈಟ್‌ನಲ್ಲಿ ಇಬ್ಬರೂ ಇರುವ ಕಾರಣ ಏನು ಚರ್ಚಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಪಿಎಸಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಕರಾವಳಿ ಭಾಗದಲ್ಲಿ ನಡೆದ ಮೂರು ಕೊಲೆಗಳ ನಂತರ ರಾಜ್ಯ ಹೇಗೆ ಕೋಮು ಸೂಕ್ಷ್ಮವಾಗಿ ಪ್ರದೇಶವಾಗಿ ಮಾರ್ಪಟ್ಟಿದೆ ಮತ್ತು ಚುನಾವಣೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com