ಪೂರ್ವಜ್ ವಿಶ್ವನಾಥ್ ಗೆ ಕಾಂಗ್ರೆಸ್ ಸಖ್ಯ: ಹದಗೆಟ್ಟ ಇಬ್ಬರು ಕುರುಬ ನಾಯಕರ ಸಂಬಂಧಕ್ಕೆ ತೇಪೆ?

ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಅವರ ಪುತ್ರ ‘ಸಿದ್ದರಾಮಯ್ಯ ಅಭಿಮಾನಿ’ ಪೂರ್ವಜ್ ವಿಶ್ವನಾಥ್ ಅವರು ಕಾಂಗ್ರೆಸ್ ಸೇರುವುದು ಇಬ್ಬರು ಕುರುಬ ನಾಯಕರಾದ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ನಡುವಿನ ಹದಗೆಟ್ಟ ಸಂಬಂಧವನ್ನು ಮತ್ತೆ ಸರಿ ಮಾಡಲಿದೆಯಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಶ್ವನಾಥ್ ಮತ್ತು ಸಿದ್ದರಾಮಯ್ಯ
ವಿಶ್ವನಾಥ್ ಮತ್ತು ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಅವರ ಪುತ್ರ ‘ಸಿದ್ದರಾಮಯ್ಯ ಅಭಿಮಾನಿ’ ಪೂರ್ವಜ್ ವಿಶ್ವನಾಥ್ ಅವರು ಕಾಂಗ್ರೆಸ್ ಸೇರುವುದು ಇಬ್ಬರು ಕುರುಬ ನಾಯಕರಾದ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ನಡುವಿನ ಹದಗೆಟ್ಟ ಸಂಬಂಧವನ್ನು ಮತ್ತೆ ಸರಿ ಮಾಡಲಿದೆಯಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಹಿಂದೆ ಉತ್ತಮ ಬಾಂಧವ್ಯ ಹೊಂದಿದ್ದ ಉಭಯ ನಾಯಕರ ನಡುವೆ ಕೆಲ ಭಿನ್ನಾಭಿಪ್ರಾಯಗಳಿಂದ ಮನಸ್ತಾಪ ಉಂಟಾಗಿತ್ತು. ಕಾಂಗ್ರೆಸ್ ನಲ್ಲಿದ್ದ ವಿಶ್ವನಾಥ್ ಜೆಡಿಎಸ್ ಸೇರಿ ನಂತರ ಬಿಜೆಪಿಗೆ ತೆರಳಿದ್ದರು. ಇಬ್ಬರೂ ಒಂದೇ ವಯಸ್ಸಿನವರಾಗಿದ್ದರೂ, ವಿಶ್ವನಾಥ್ ಅವರು 1978 ರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ್ ಅರಸ್ ಅವರಿಂದ ಆಯ್ಕೆಯಾದ ನಂತರ ಶಾಸಕರಾದರು.

ಇದಾದ ಕೇವಲ ಐದು ವರ್ಷಗಳ ನಂತರ ಸಿದ್ದರಾಮಯ್ಯ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. 1983 ರಲ್ಲಿ ಸ್ವತಂತ್ರವಾಗಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರು. ನಂತರ ಅವರು ಜನತಾ ಪರಿವಾರಕ್ಕೆ ಸೇರಿದರು. ಜನತಾ ಪಕ್ಷದ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಆತ್ಮೀಯರಾದರು.

ವಿಶ್ವನಾಥ್ ಎಂಬತ್ತರ ದಶಕದಲ್ಲಿ ಮತ್ತು 1999 ಮತ್ತು 2004 ರ ನಡುವೆ ಎಸ್‌ಎಂ ಕೃಷ್ಣ ಸರ್ಕಾರದ ಅವಧಿಯಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು. 1996 ರಲ್ಲಿ  ದೇವೇಗೌಡರು ಪ್ರಧಾನಿಯಾಗಲು ತೆರಳಿದಾಗ ಗೌಡರ ಬದಲಿಗೆ ಜೆಎಚ್ ಪಟೇಲ್ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯನವರಿಗೆ ಸಚಿವ ಸ್ಥಾನದ ಅವಕಾಶ ಬಂದಿತು. ವಿಶ್ವನಾಥ್ ಮತ್ತು ಸಿದ್ದರಾಮಯ್ಯ ರಾಜಕೀಯವಾಗಿ ಭಿನ್ನ ಧ್ರುವಗಳಾಗಿದ್ದರೂ, ಅವರು ತಮ್ಮ ಸ್ನೇಹವನ್ನು ಉಳಿಸಿಕೊಂಡರು.

ಸಿದ್ದರಾಮಯ್ಯನವರು ಜೆಡಿಎಸ್‌ನಿಂದ ಉಚ್ಛಾಟನೆಯಾದಾಗ ಕಾಂಗ್ರೆಸ್‌ಗೆ ಸೇರ್ಪಡೆಯಾದರು ಮತ್ತು ಇದ್ದಕ್ಕಿದ್ದಂತೆ ಇಬ್ಬರು ಕುರುಬರು ಒಂದೇ ಕಡೆ ಸೇರಿದರು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದು, ವಿಶ್ವನಾಥ್ ಸಂಸದರಾಗಿದ್ದರು.

ನಂತರ ವಿಶ್ವನಾಥ್ ಅವರು ಲೋಕಸಭೆ ಚುನಾವಣೆಯಲ್ಲಿ ಸೋತರು ಮತ್ತು ಜೆಡಿಎಸ್‌ಗೆ ತೆರಳಿದರು, ನಂತರ ಹುಣಸೂರಿನಿಂದ ಶಾಸಕರಾಗಿ ಆಯ್ಕೆಯಾದರು, ಜೆಡಿಎಸ್ ಮತ್ತು ಕಾಂಗ್ರೆಸ್‌ನ ಶಾಸಕರೊಂದಿಗೆ 2019 ರಲ್ಲಿ ಬಿಜೆಪಿ ಸೇರಿದರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದರು. ಹುಣಸೂರು ಉಪಚುನಾವಣೆ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ಪ್ರಚಾರ ಮಾಡಿ ಸೋತಿದ್ದು ಅವರ ಕುರುಬ ಅಭಿಮಾನಕ್ಕೆ ಘಾಸಿಯಾಗಿತ್ತು.

ಸಿದ್ದರಾಮಯ್ಯನ ನನಗೆ ಅಚ್ಚುಮೆಚ್ಚು, ಅವರ 75ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಲು ದಾವಣಗೆರೆಗೆ ತೆರಳಿದ್ದೆ. ಸಮುದಾಯದ ಕೆಲವು ಹಿರಿಯರು ಇಬ್ಬರು ನಾಯಕರ ನಡುವಿನ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ನಾನು ಬಯಸುತ್ತೇನೆ ಎಂದು ಪೂರ್ವಜ್ ವಿಶ್ವನಾಥ್ ಹೇಳಿದ್ದಾರೆ.

ತಮ್ಮ ತಂದೆಯ ಕ್ಷೇತ್ರವಾದ ಹುಣಸೂರಿಗೆ ನೀವು ಟಿಕೆಟ್‌ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೂರ್ವಜ್‌, ನಾನು ಯಾವುದೇ ಟಿಕೆಟ್‌ ಆಕಾಂಕ್ಷಿಯಾಗಿಲ್ಲ, ಬೇಷರತ್ತಾಗಿ ಕಾಂಗ್ರೆಸ್‌ ಸೇರುತ್ತಿದ್ದೇನೆ. “ಚಿಕ್ಕ ಮಗುವಾಗಿದ್ದಾಗ, ಕಾಂಗ್ರೆಸ್ ಬ್ಯಾನರ್ ಕಟ್ಟಿದಾಗ ನಾನು ಅವರ ಜೊತೆ ಓಡಿ ಹೋಗಿದ್ದು ನನಗೆ ನೆನಪಿದೆ. ನನ್ನ ಹೃದಯ ಕಾಂಗ್ರೆಸ್ ಜೊತೆಗಿದೆ ಎಂದು ಪೂರ್ವಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com