'ಕಾಶ್ಮೀರ್ ಫೈಲ್ಸ್' ಸಿನಿಮಾ ಫ್ರೀಯಾಗಿ ತೋರಿಸುವ ಸರ್ಕಾರಕ್ಕೆ ರಾಷ್ಟ್ರಧ್ವಜ ಉಚಿತವಾಗಿ ನೀಡಲು ಏಕೆ ಸಾಧ್ಯವಿಲ್ಲ: ಕಾಂಗ್ರೆಸ್ ತಪರಾಕಿ

ಪ್ರತಿ ಧ್ವಜವನ್ನು 20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದು ಹೆಮ್ಮೆಯ ಸಂದರ್ಭ ಎಂದು ಧಾರವಾಡ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದು, ರಾಷ್ಟ್ರದ ಪ್ರತಿ ಪ್ರಜೆಯೂ ದೇಶ ಪ್ರೇಮ ಪ್ರದರ್ಶಿಸಲು ಇದು ಸಕಾಲವಾಗಿದೆ. ಆದರೆ ರಾಷ್ಟ್ರಧ್ವದ ಖರೀದೀಸಿ ಮತ್ತೆ ಮಾರಾಟ ಮಾಡುವ ಕ್ರಮಕ್ಕೆ ವಿರೋಧ ಪಕ್ಷದ ಶಾಸಕರು ತೀವ್ರ  ತಕರಾರು ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕದಲ್ಲಿ, ಶಾಸಕರನ್ನು ಜಿಲ್ಲಾಡಳಿತ ಅಧಿಕಾರಿಗಳು ಸಂಪರ್ಕಿಸಿದ್ದಾರೆ, ಪ್ರತಿ ಧ್ವಜವನ್ನು 20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದು ಹೆಮ್ಮೆಯ ಸಂದರ್ಭ ಎಂದು ಧಾರವಾಡ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಅಂಚೆ ಕಚೇರಿಗಳು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿತರಣಾ ಶುಲ್ಕವಿಲ್ಲದೆ 25 ರೂ. ಗೆ ರಾಷ್ಟ್ರಧ್ವಜವನ್ನು ಮಾರಾಟ ಮಾಡುವ ಮೂಲಕ ಸ್ವಾತಂತ್ರ್ಯದ ಉತ್ಸಾಹವನ್ನು ಆಚರಿಸುತ್ತಿವೆ. ಆದ್ದರಿಂದ ಇ ಪೋಸ್ಟ್ ಆಫೀಸ್ ಪೋರ್ಟಲ್ ಮೂಲಕ ನಮ್ಮ ಹೆಮ್ಮೆ, ನಮ್ಮ ತಿರಂಗವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ. ಕರ್ನಾಟಕದ ವಿಶ್ವ ಪರಂಪರೆಯ ತಾಣವಾದ ಹಂಪಿ, ತುಂಗಭದ್ರೆಯ ದಡದಲ್ಲಿರುವ ವಿರೂಪಾಕ್ಷ ದೇವಾಲಯ ಮತ್ತು ಕಲ್ಲಿನ ರಥಗಳನ್ನು ತ್ರಿವರ್ಣ ಧ್ವಜದ ಬಣ್ಣಗಳಿಂದ ಅಲಂಕರಿಸಲಾಗಿದೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಧ್ವಜವನ್ನು ಬಿಜೆಪಿಯವರು ಮಾರಾಟಕ್ಕೆ ಇಟ್ಟಿದ್ದಾರೆ. ರಾಷ್ಟ್ರಧ್ವಜವನ್ನು ದೇಶದ ಜನತೆಗೆ ಏಕೆ ಉಚಿತವಾಗಿ ಹಂಚಲು ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ. ತ್ರಿವರ್ಣ ದ್ವಜವನ್ನು 25 ರುಪಾಯಿಗೆ ಮಾರಾಟ ಮಾಡುತ್ತಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ಸಾರ್ವಜನಿಕರಿಗೆ ಏಕೆ ಉಚಿತವಾಗಿ ಪ್ರದರ್ಶಿಸಲಾಯಿತು, ಅನೇಕ ಸ್ಥಳಗಳಲ್ಲಿ ಜನರಿಗೆ ಟಿಕೆಟ್‌ಗಳನ್ನು ಏಕೆ ನೀಡಲಾಯಿತು ಎಂಬುದನ್ನು ತಿಳಿದುಕೊಳ್ಳಲು ನಾನು ಬಯಸುತ್ತೇನೆ ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್  ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಲು ಸರ್ಕಾರವು ಧ್ವಜಗಳನ್ನು ಏಕೆ ಉಚಿತವಾಗಿ ನೀಡಲು ಸಾಧ್ಯವಿಲ್ಲ. ಇದರ ಬೆಲೆ 20 ರೂ., ಕೆಲವು ಬಡವರಿಗೆ ಅದನ್ನು ಭರಿಸಲು ಸಾಧ್ಯವಾಗದೇ ಇರಬಹುದು ಎಂದು ಅವರು ಹೇಳಿದ್ದಾರೆ.

ಸರ್ಕಾರದ ‘ಹರ್ ಘರ್ ತಿರಂಗ’ ಅಭಿಯಾನಕ್ಕಾಗಿ 4,40,000 ರೂಪಾಯಿ ಪಾವತಿಸಿ 20,000 ಧ್ವಜಗಳನ್ನು ಸಂಗ್ರಹಿಸಲು ಜಿಲ್ಲಾಡಳಿತ ಕಚೇರಿ ನನ್ನನ್ನು ಕೇಳಿದೆ.  ತಾಲೂಕು ಕಚೇರಿಗಳನ್ನು ಬಲವಂತವಾಗಿ ಖರೀದಿಸಲು ಒತ್ತಾಯಿಸಲಾಗುತ್ತಿದೆ ಮತ್ತು ಪ್ರತಿಯಾಗಿ, ದೋಷಯುಕ್ತ ಧ್ವಜಗಳನ್ನು ಜನರಿಗೆ ಮಾರಾಟ ಮಾಡಲಾಗುತ್ತಿದೆ ಕಾಂಗ್ರೆಸ್ ಮಾಧ್ಯಮ ಕೋಶದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ  ಆರೋಪಿಸಿದ್ದಾರೆ.

ಇದು ಹಿಜಾಬ್ ಮತ್ತಿತರ ಧಾರ್ಮಿಕ ವಿಷಯಗಳಂತೆ ಪ್ರತಿಪಕ್ಷಗಳಿಗೆ ಆಡಳಿತತ ಪಕ್ಷವೂ ಬೀಸಿದ ಬಲೆಯಾಗಿದೆ. ಕಾಂಗ್ರೆಸ್ ಪಕ್ಷವು ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂದು  ಕಾಂಗ್ರೆಸ್ ಮಾಜಿ ಎಂಎಲ್ ಸಿ ಯೊಬ್ಬರು ಹೇಳಿದ್ದಾರೆ.

ಜಿಲ್ಲಾಡಳಿತವು ಪ್ರತಿ ಧ್ವಜಕ್ಕೆ  20 ರು ದರದಲ್ಲಿ  ಮಾರಾಟ ಮಾಡುತ್ತಿದೆ.  ನಾನು 10,000 ಧ್ವಜಗಳನ್ನು ಖರೀದಿಸಿದೆ. ನಾನು 75 ನೇ ಸ್ವಾತಂತ್ರ್ಯ ದಿನಾಚರಣೆಗಾಗಿ 15 ದಿನಗಳ ಪಾದಯಾತ್ರೆಯನ್ನು ಪ್ರಾರಂಭಿಸಿದೆ ಮತ್ತು ನನ್ನ ಕ್ಷೇತ್ರದ 200 ಹಳ್ಳಿಗಳಲ್ಲಿ ನಾನು ಧ್ವಜಗಳನ್ನು ಉಚಿತವಾಗಿ ವಿತರಿಸಿದೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com