ಕರ್ನಾಟಕ ವಿಧಾನಸಭೆ ಚುನಾವಣೆ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ?

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೆಗಾ ಹುಟ್ಟುಹಬ್ಬ ಆಚರಣೆ ನಂತರ ಅವರ ಆಪ್ತರು ಈಗ 2023 ರ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.
ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕಟೌಟ್
ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕಟೌಟ್

ಮೈಸೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೆಗಾ ಹುಟ್ಟುಹಬ್ಬ ಆಚರಣೆ ನಂತರ ಅವರ ಆಪ್ತರು ಈಗ 2023 ರ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.

ಹೌದು.. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ಪರ್ಧಾಕ್ಷೇತ್ರದ ಕುರಿತು ಎದ್ದಿರುವ ಗೊಂದಲ ಮುಂದುವರೆದಿದ್ದು, ಸ್ವಕ್ಷೇತ್ರ ಚಾಮುಂಡೇಶ್ವರಿ ತೊರೆದರುವ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಬಾದಾಮಿ ಅಲ್ಲದೇ ಮತ್ತೊಂದು ಸುರಕ್ಷಿತ ಕ್ಷೇತ್ರಕ್ಕಾಗಿ ಸಿದ್ದು ಅಂಡ್ ಟೀಂ ಶೋಧದಲ್ಲಿ ತೊಡಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಸ್ವತಂತ್ರ ಭಾರತದ ಜಿನ್ಹಾ! ಬಿಜೆಪಿ ತೀವ್ರ ಟೀಕೆ
ಚುನಾವಣೆಯಲ್ಲಿ ಸ್ಪರ್ಧಿಸಲು ವಿಧಾನಸಭಾ ಸ್ಥಾನವನ್ನು ಶೀಘ್ರದಲ್ಲೇ ಅಂತಿಮಗೊಳಿಸಬೇಕೆಂದು ಅವರ ಆಪ್ತರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದ ಮೇಲೆ ಗುರಿಯಿಟ್ಟು ಸುರಕ್ಷಿತ ಸ್ಥಾನವನ್ನು ಆರಿಸಿಕೊಳ್ಳಬೇಕೆಂದು ಅವರ ಹಿಂಬಾಲಕರು ಬಯಸುತ್ತಿದ್ದಾರೆ. 

2018ರಲ್ಲಿ ಚಾಮುಂಡೇಶ್ವರಿಯಿಂದ ಸೋತಿರುವ ಹಿನ್ನೆಲೆಯಲ್ಲಿ ಅವರು ಆಂತರಿಕ ಸಮೀಕ್ಷೆ ನಡೆಸುತ್ತಿದ್ದು, ಹಲವು ಕ್ಷೇತ್ರಗಳ ನಾಯಕರಿಂದ ಪ್ರತಿಕ್ರಿಯೆ ಪಡೆದು ಸಿದ್ದರಾಮಯ್ಯನವರು ಸುಲಭ ಮತ್ತು ಭರ್ಜರಿ ಅಂತರದಲ್ಲಿ ಗೆಲ್ಲಬಹುದಾದ ಕ್ಷೇತ್ರಕ್ಕೆ ಹುಡುಕಾಟ ನಡೆಸಿದ್ದಾರೆ. ಅಂತಹ ಸ್ಥಾನವು ರಾಜ್ಯಾದ್ಯಂತ ಪ್ರಚಾರ ಮಾಡಲು ಅವರನ್ನು ಮುಕ್ತಗೊಳಿಸುತ್ತದೆ ಎಂಬುದು ಬೆಂಬಲಿಗರ ಅಭಿಪ್ರಾಯವಾಗಿದೆ.

ಪಟ್ಟಿಯಲ್ಲಿ ಕೋಲಾರಕ್ಕೆ ಮನ್ನಣೆ
ಇನ್ನು ಸಿದ್ದು ಸ್ಪರ್ಧಿಸಬಹುದಾದ ಕ್ಷೇತ್ರಗಳನ್ನು ಪಟ್ಟಿ ಮಾಡಲಾಗುತ್ತಿದ್ದು, ವರುಣಾ, ಕೊಪ್ಪಳ, ಬಾದಾಮಿ, ಕೋಲಾರ, ಚಾಮರಾಜಪೇಟೆ ಕ್ಷೇತ್ರಗಳಿಂದ ಕಣಕ್ಕಿಳಿಯುವಂತೆ ಮನವಿಗಳ ಮಹಾಪೂರವೇ ಹರಿದು ಬರುತ್ತಿದೆ. ಒಂದೆರೆಡು ತಿಂಗಳಲ್ಲಿ ಕಣಕ್ಕಿಳಿದು ಸ್ಪರ್ಧಾಕಣ ಸಿದ್ಧಗೊಳಿಸುವಂತೆ ಅವರ ಬೆಂಬಲಿಗರು ಬಯಸಿದ್ದಾರೆ. ಕೋಲಾರವು ಕೇವಲ ಸಿದ್ದರಾಮಯ್ಯನವರಿಗೆ ಮಾತ್ರವಲ್ಲದೆ ಪಕ್ಷದ ಒಂದು ವರ್ಗದ ನಾಯಕರ ನೆಚ್ಚಿನ ಕ್ಷೇತ್ರವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದ್ರುವನಾರಾಯಣ್ ಅವರನ್ನು ವರುಣಾದಲ್ಲಿ ಮರಳಿಸಬೇಕೆಂದು ಬಯಸಿದ್ದು, ಎಲ್ಲಾ ವರ್ಗದ ಜನರು ಸ್ಪರ್ಧಿಸಲು ಬಯಸುತ್ತಿರುವ ಮಾಜಿ ಸಿಎಂಗೆ ಅದೃಷ್ಟ ಎಂದು ಬಣ್ಣಿಸಿದ್ದಾರೆ.

ಕಾಂಗ್ರೆಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ಕೋಲಾರ ಸಿದ್ದರಾಮಯ್ಯ ಪ್ರಮುಖ ಆಯ್ಕೆಗಳಲ್ಲಿ ಒಂದಾಗಿದೆ. ಹೆಚ್ಚಿನ ಸಂಖ್ಯೆಯ ದಲಿತರು ಮತ್ತು ಮುಸ್ಲಿಮರ ಜೊತೆಗೆ, ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳು ಮತ್ತು ಒಕ್ಕಲಿಗರು ಉತ್ತಮ ಜನಸಂಖ್ಯೆಯನ್ನು ಹೊಂದಿದೆ. ಅಲ್ಲದೆ, ಶೇ.50ಕ್ಕೂ ಹೆಚ್ಚು ಮತದಾರರು ಕುರುಬರು. ಇಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿಲ್ಲ, ಈ ಹಿಂದೆ ಗೆದ್ದಿದ್ದ ಜೆಡಿಎಸ್, ಹಾಲಿ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಪಕ್ಷದಿಂದ ಉಚ್ಛಾಟನೆಗೊಂಡ ನಂತರೇ ಈ ಕ್ಷೇತ್ರದಲ್ಲಿ ಇತರೆ ಪಕ್ಷಗಳ ಸ್ಪರ್ಧೆ ಹಿನ್ನಡೆ ಅನುಭವಿಸುತ್ತಿದೆ.

ಅಂದುಕೊಂಡಷ್ಟು ಸುಲಭವಲ್ಲ ಕೋಲಾರ
ಕಾಂಗ್ರೆಸ್ 1957 ರಿಂದ ಕೇವಲ ನಾಲ್ಕು ಬಾರಿ ಮಾತ್ರ ಈ ಕ್ಷೇತ್ರದಿಂದ ಗೆದ್ದಿದೆ. 2004 ರಲ್ಲಿ ಅದರ ಗೆಲುವಿನ ನಂತರ, ಮಾಜಿ ಸಚಿವ ವರ್ತೂರು ಪ್ರಕಾಶ್ ಮತ್ತು ಶ್ರೀನಿವಾಸಗೌಡ 2008 ರಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾವುದರೊಂದಿಗೆ ಪಕ್ಷದ ನೆಲೆಯು ಕುಸಿಯಲಾರಂಭಿಸಿತು. ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸಲು ಆಯ್ಕೆ ಮಾಡಿದರೆ ಅದು ಕುತೂಹಲಕಾರಿಯಾಗಲಿದೆ. ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತಂದು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಬೇಕು. ಮಾಜಿ ಸಚಿವ ಎಸ್.ರಮೇಶ್ ಕುಮಾರ್ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಬಣಗಳ ನಡುವೆಯೂ ಅವರು ಸಮಬಲ ಮತ್ತು ಸಮನ್ವಯ ಸಾಧಿಸಬೇಕಿದೆ. ಜೆಡಿಎಸ್ ಸಂಭಾವ್ಯ ಅಪಾಯವಾಗಿರುವುದರಿಂದ, ಅವರು ಮತದಾರರಲ್ಲಿ ಶೇಕಡಾ 25 ರಷ್ಟಿರುವ ಒಕ್ಕಲಿಗರು ಮತ್ತು ಮುಸ್ಲಿಮರನ್ನು ಸಹ ಇಲ್ಲಿ ತಲುಪಿ ಓಲೈಸಬೇಕು.

ಸಿದ್ದರಾಮಯ್ಯನವರ ಕೋಲಾರ ಪ್ರವೇಶವು ಜೆಡಿಎಸ್ ಶಕ್ತಿಯಾಗಿರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಎಫೆಕ್ಟ್ ಆಗಲಿದೆ ಎಂದು ರಾಜಕೀಯ ವೀಕ್ಷಕರು ಭಾವಿಸಿದ್ದಾರೆ. ಇದು ಹಾಲಿ ಕಾಂಗ್ರೆಸ್ ಶಾಸಕರಿಗೆ ಅಧಿಕಾರದ ವಿರೋಧಿಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕೋಲಾರವು ಬೆಂಗಳೂರಿನಿಂದ ಕೇವಲ 60 ಕಿಮೀ ದೂರದಲ್ಲಿರುವುದರಿಂದ ಕೋಲಾರವು ಅನುಕೂಲಕರವಾಗಿದೆ ಎಂದು ಅವರು ಹೇಳಿದರು. ಬರಪೀಡಿತ ಪ್ರದೇಶದಲ್ಲಿ ಕೆರೆಗಳನ್ನು ತುಂಬಿಸುವ ಕೆಸಿ ವ್ಯಾಲಿ ಯೋಜನೆಗೆ ಅವರ ಬೆಂಬಲಿಗರು ಹರಸಾಹಸ ಮಾಡುತ್ತಿದ್ದಾರೆ ಮತ್ತು ಇದು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಭಗೀರಥ ಯೋಜನೆಯ ಭಾಗವಾಗಿದೆ ಎಂದು ಗಮನಸೆಳೆದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇಲ್ಲಿಂದ ಸ್ಪರ್ಧಿಸುವಂತೆ ಶ್ರೀನಿವಾಸಗೌಡರಿಂದ ಆಹ್ವಾನ ಬಂದಿರುವುದು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ಅವರು ವರುಣಾಕ್ಕೆ ಮರಳುವ ಬಗ್ಗೆ ಯೋಚಿಸಿಲ್ಲ, ಆದರೆ ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ ನಗರ ಕಣದಿಂದ ಎಂದಿಗೂ ಹೋರಾಡದ ಕಾರಣ ಚಾಮರಾಜಪೇಟೆಯ ಬಗ್ಗೆ ಹೆಚ್ಚು ಒಲವು ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಕೋಲಾರ ಪ್ರಮುಖ ಅಂಶಗಳು

  • ಕಳೆದ ಬಾರಿ 2004ರಲ್ಲಿ ಕೋಲಾರದಿಂದ ಕಾಂಗ್ರೆಸ್‌ ಗೆದ್ದಿತ್ತು.
  • ದಲಿತರು, ಮುಸ್ಲಿಮರು, ಒಕ್ಕಲಿಗರು, ಕುರುಬರು, ಒಬಿಸಿಗಳು ಪ್ರಮುಖ ಮತದಾರರು
  • ಕೆಸಿ ವ್ಯಾಲಿ ಯೋಜನೆ ಮಾಜಿ ಸಿಎಂ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ.
  • ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ ಸಿದ್ದರಾಮಯ್ಯನವರ ಚಿಂತೆಯನ್ನು ಹೆಚ್ಚಿಸಬಹುದು
  • ಬೆಂಗಳೂರು ನಗರಕ್ಕೆ ಸಮೀಪ ಕೋಲಾರ, ವರುಣಾ, ಕೊಪ್ಪಳ, ಬಾದಾಮಿ, ಚಾಮರಾಜಪೇಟೆ ಅವರಿಗೆ 2023ರಲ್ಲಿ ಸ್ಪರ್ಧಿಸುವ ನೆಚ್ಚಿನ ಕ್ಷೇತ್ರಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com