ಸಚಿವ ಸೋಮಣ್ಣನಿಗೆ ಸೋಲಿನ ರುಚಿ ತೋರಿಸುತ್ತೇವೆ: ಸಿದ್ದರಾಮಯ್ಯ
ಮುಂದಿನ ದಿನಗಳಲ್ಲಿ ಗೋವಿಂದರಾಜನಗರ, ವಿಜಯನಗರ ಕ್ಷೇತ್ರಗಳು ಗೆಲ್ಲುವ ಮೂಲಕ ಸೋಮಣ್ಣನಿಗೆ ಮತ್ತೆ ಸೋಲಿನ ರುಚಿಯನ್ನು ತೋರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
Published: 28th August 2022 09:43 PM | Last Updated: 29th August 2022 01:06 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಮುಂದಿನ ದಿನಗಳಲ್ಲಿ ಗೋವಿಂದರಾಜನಗರ, ವಿಜಯನಗರ ಕ್ಷೇತ್ರಗಳು ಗೆಲ್ಲುವ ಮೂಲಕ ಸೋಮಣ್ಣನಿಗೆ ಮತ್ತೆ ಸೋಲಿನ ರುಚಿಯನ್ನು ತೋರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಗೋವಿಂದರಾಜನಗರದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿಕೊಂಡ ಮಾಜಿ ಪಾಲಿಕೆ ಸದಸ್ಯ ಡಿ ಉಮಾಶಂಕರ್ ನೇತೃತ್ವ ತಂಡವನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಕ್ಷೇತ್ರದಲ್ಲಿ ಅನುಮೋದನೆ ದೊರೆತಿರುವ ಕಾಮಗಾರಿಗಳಿಗೆ ನಡೆಯದಂತೆ ಅಡ್ಡಗಾಲು ಹಾಕಿ ಸಣ್ಣತನದ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದ ಜನರ ಭವಿಷ್ಯವನ್ನು ಹುಲಿಗಳೇ ನಿರ್ಧರಿಸಬೇಕಿದೆ: ಸಚಿವರ ದ್ವಂದ್ವ ಹೇಳಿಕೆಯಿಂದ ಗೊಂದಲ ಸೃಷ್ಟಿ
ಇಲ್ಲಿ ಸೇರಿರುವ ಜನಸ್ತೋಮವೇ ಮುಂದಿನ ಚುನಾವಣೆಯ ಗೆಲುವಿನ ಫಲಿತಾಂಶವನ್ನು ಬರೆದಿಟ್ಟಿದ್ದಾರೆ ನಿತ್ಯ ಬರಿ ಸುಳ್ಳು ಹೇಳಿಕೊಂಡು ಜನರನ್ನು ವಂಚಿಸುತ್ತಿರುವ ಸೋಮಣ್ಣ ನವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಶಾಸಕ ಎಂ ಕೃಷ್ಣಪ್ಪ ಶಾಸಕ ಪ್ರಿಯಕೃಷ್ಣ ದಿ ಉಪಮೇಯರ್ ಪುಟ್ಟರಾಜು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ, ಡಿ ಉಮಾಶಂಕರ್ ನೇತೃತ್ವದಲ್ಲಿ ಎಚ್ ಕುಮಾರ್, ಅಂಜಲಿ, ಮಹದೇವ ಮಡಿವಾಳ, ರಾಜಕುಮಾರ್.ಡಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.