ಸದನದಿಂದ ಹೊರ ನಡೆದ ಮಾಧುಸ್ವಾಮಿ, ಸ್ಪೀಕರ್ ತೀವ್ರ ಅಸಮಾಧಾನ
ಸದನದಲ್ಲಿ ಸಚಿವರ ನಡೆ ಬಗ್ಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು, ವಿಶೇಷವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧು ಸ್ವಾಮಿ ಸದನವನ್ನು ನೀವೆ ನಡೆಸುವಂತೆ ಹೇಳಿ ವಿಧಾನಸಭೆಯಿಂದ ನಿರ್ಗಮಿಸಿದರು.
Published: 23rd December 2022 07:52 AM | Last Updated: 23rd December 2022 02:26 PM | A+A A-

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಳಗಾವಿ: ಸದನದಲ್ಲಿ ಸಚಿವರ ನಡೆ ಬಗ್ಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು, ವಿಶೇಷವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧು ಸ್ವಾಮಿ ಸದನವನ್ನು ನೀವೆ ನಡೆಸುವಂತೆ ಹೇಳಿ ವಿಧಾನಸಭೆಯಿಂದ ನಿರ್ಗಮಿಸಿದರು.
ಸಂಜೆ 6.30 ರ ಸುಮಾರಿಗೆ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸದಸ್ಯರನ್ನು ಕರೆಯಲು ಸ್ಪೀಕರ್ ಪ್ರಾರಂಭಿಸಿದಾಗ, ಸದನವನ್ನು ನೀವೆ ನಡೆಸಿ ಎಂದು ಹೇಳಿ, ಸಚಿವ ಮಧು ಸ್ವಾಮಿ ಸದನದಿಂದ ಹೊರ ನಡೆದರು. ಸದನವನ್ನು ಇಂದಿಗೆ ಮುಂದೂಡುವ ಮುನ್ನ ಸಭಾಧ್ಯಕ್ಷರು ತೀವ್ರ ವೇದನೆ ವ್ಯಕ್ತಪಡಿಸಿ, ಸಚಿವರ ವರ್ತನೆಯಿಂದ ನೋವಾಗಿದೆ ಎಂದರು.
ಇದಕ್ಕೂ ಮುನ್ನ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಸಂಬಂಧಪಟ್ಟ ಸಚಿವರನ್ನು ಸದನಕ್ಕೆ ಕರೆತರಲು ಸ್ಪೀಕರ್ ಬಿಜೆಪಿ ಮುಖ್ಯ ಸಚೇತಕ ಸತೀಶ್ ರೆಡ್ಡಿ ಅವರನ್ನು ಕರೆಸಿದರು. ಸಚಿವರು ಬೇರೆ ಕೆಲಸದ ಮೇಲೆ ಹೋಗಿದ್ದಾರೆ ಎಂದು ತಿಳಿಸಿದಾಗ ಸಚಿವರು ಅಧಿವೇಶನದಲ್ಲಿ ಇರುವುದು ಮುಖ್ಯವೇ ಅಥವಾ ಬೇರೆ ಕೆಲಸಕ್ಕೆ ಹಾಜರಾಗುವುದು ಮುಖ್ಯವೇ ಎಂದು ಕಾಗೇರಿ ಪ್ರಶ್ನಿಸಿದರು.
ಇದನ್ನೂ ಓದಿ: ಮಗಳ ಹುಟ್ಟುಹಬ್ಬ ಆಚರಿಸಲು ಸುವರ್ಣಸೌಧ ಬಾಡಿಗೆಗೆ ಕೊಡಿ: ಸಭಾಪತಿಗೆ ಪತ್ರ ಬರೆದ ಬೆಳಗಾವಿ ವಕೀಲ
ಈ ಸಂದರ್ಭವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ ಪ್ರತಿಪಕ್ಷ ಸದಸ್ಯರು, ಸಚಿವರು ತಮ್ಮ ಜವಾಬ್ದಾರಿಯ ಬಗ್ಗೆ ಗಂಭೀರವಾಗಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರ ಮತ್ತು ಸಚಿವರು ಗಂಭೀರವಾಗಿ ಪರಿಗಣಿಸದಿದ್ದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸಿ ಏನು ಪ್ರಯೋಜನ ಎಂದು ವಿರೋಧ ಪಕ್ಷದ ಉಪ ನಾಯಕ ಯುಟಿ ಖಾದರ್ ಹೇಳಿದರು. ನಂತರ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುವಂತೆ ಸಭಾಪತಿಯವರು ಸಭೆಯಲ್ಲಿದ್ದ ಸಚಿವರಿಗೆ ತಿಳಿಸಿದರು.