ಕ್ಷೇತ್ರದ ಜನರನ್ನು ಕೇಳಿಕೊಂಡು ಇನ್ನೆರಡು ತಿಂಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಧಾರ: ಜಿ ಟಿ ದೇವೇಗೌಡ
ಜಾತ್ಯತೀತ ಜನತಾದಳದಲ್ಲಿ ಶಾಸಕನಾಗಿದ್ದೇನೆ, ಆದರೆ ಕಳೆದ ಮೂರು ವರ್ಷಗಳಿಂದ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ನನ್ನ ಕ್ಷೇತ್ರದ ಕೆಲಸ ಮಾತ್ರ ಶಾಸಕನಾಗಿ ಮಾಡುತ್ತಿದ್ದೇನೆ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರ ಆದೇಶದಂತೆ ಆತ್ಮಸಾಕ್ಷಿಯಂತೆ ಜೆಡಿಎಸ್ ಗೆ ಮತ ಕೊಟ್ಟಿದ್ದೇನೆ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದ್ದಾರೆ.
Published: 04th July 2022 02:16 PM | Last Updated: 04th July 2022 02:23 PM | A+A A-

ಜಿ ಟಿ ದೇವೇಗೌಡ
ಮೈಸೂರು: ಜಾತ್ಯತೀತ ಜನತಾದಳದಲ್ಲಿ ಶಾಸಕನಾಗಿದ್ದೇನೆ, ಆದರೆ ಕಳೆದ ಮೂರು ವರ್ಷಗಳಿಂದ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ನನ್ನ ಕ್ಷೇತ್ರದ ಕೆಲಸ ಮಾತ್ರ ಶಾಸಕನಾಗಿ ಮಾಡುತ್ತಿದ್ದೇನೆ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರ ಆದೇಶದಂತೆ ಆತ್ಮಸಾಕ್ಷಿಯಂತೆ ಜೆಡಿಎಸ್ ಗೆ ಮತ ಕೊಟ್ಟಿದ್ದೇನೆ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದ್ದಾರೆ.
ನನ್ನ ಮುಂದಿನ ರಾಜಕೀಯ ನಿರ್ಧಾರವನ್ನು ಕ್ಷೇತ್ರದ ಜನರನ್ನು ಕೇಳಿಕೊಂಡು ಕೈಗೊಳ್ಳುತ್ತೇನೆ, ಕ್ಷೇತ್ರದ ಜನರು ಹೇಳಿದಂತೆ ಕೇಳುತ್ತೇನೆ ಎಂದರು.
ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು,ಬಿಡುಗಡೆಯಾಗಬೇಕಾದ ಅನುದಾನಗಳ ಬಗ್ಗೆ ಅಧಿಕಾರಿಗಳು, ಕುಂಠಿತವಾಗಿರುವ ಕ್ಷೇತ್ರಗಳ ಬಗ್ಗೆ ಬಂದಿರುವ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸುತ್ತೇನೆ ಎಂದರು.
ಇದನ್ನೂ ಓದಿ: ಡ್ಯಾಮೇಜ್ ಕಂಟ್ರೋಲ್ ಗೆ ಎಚ್ ಡಿಕೆ ಸರ್ಕಸ್; ಬಿಜೆಪಿ ಕಡೆಗೆ ಜಿಟಿಡಿ ಫೋಕಸ್: 'ಕೈ' ಕೊಟ್ಟು ಕಮಲ ಹಿಡಿಯಲಿದ್ದಾರಾ 'ದಳಪತಿ'?
ಸಿದ್ದರಾಮಯ್ಯನವರಿಗೆ ಒಳ್ಳೆಯದಾಗಲಿ: ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮೊದಲೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ. ಯಾವುದೇ ಪಕ್ಷದ ನಾಯಕರಾದರೂ ಪಕ್ಷಾತೀತವಾಗಿ ಶುಭಾಶಯಗಳನ್ನು ಕೋರುತ್ತೇವೆ. ಅವರಿಗೆ ದೇವರು ಇನ್ನಷ್ಟು ಆಯುರಾರೋಗ್ಯ, ಐಶ್ವರ್ಯ ನೀಡಲಿ ಎಂದು ಕೋರುತ್ತೇನೆ ಎಂದರು.