“ಯಾಕ್ರೈಯ್ಯಾ ಮೋದಿ ಮೋದಿ ಅಂತಿರಾ? ಮೋದಿ ನಿಮ್ಮ ಮನೆ ಹಾಳು ಮಾಡಿದ್ದಾರೆ”: ಸಿದ್ದರಾಮಯ್ಯ

ನರೇಂದ್ರ ಮೋದಿ ಅವರು ಪ್ರಧಾನಿ ಆದ್ಮೇಲೆ ಯುವಕರಿಗೆ ಕೆಲಸ ಇಲ್ಲ. ನಿರುದ್ಯೋಗ ತಾಂಡವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಿ ಆದ್ಮೇಲೆ ಯುವಕರಿಗೆ ಕೆಲಸ ಇಲ್ಲ. ನಿರುದ್ಯೋಗ ತಾಂಡವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಮನೆ ಮೈದಾನದಲ್ಲಿ ಯುವ ಜನೋತ್ಸವ ವಿಸ್ತೃತ ಕಾರ್ಯಕಾರಿ ಸಭೆಯಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಯುವ ಗರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದೇಶದ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ದೇಶದ ಯುವಕರು ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರುವ ಶಕ್ತಿ ಇವರಲ್ಲಿದೆ ಎಂದರು.

ಶದ ಜನಸಂಖ್ಯೆಯಲ್ಲಿ 30 ವರ್ಷದ ಒಳಗಿನ ಯುವಕ ಯುವತಿಯರು ಶೇ. 60 ರಷ್ಟು ಇದ್ದಾರೆ. ಭಾರತದಲ್ಲಿ 107 ಕೋಟಿ ಜನರಿಗೆ ಕೆಲಸ ಮಾಡುವ ಶಕ್ತಿ ಇದೆ. ಆದ್ರೆ 107 ಕೋಟಿಯಲ್ಲಿ ಶೇ. 40ಕ್ಕಿಂತ ಕಡಿಮೆ ಜನರಿಗೆ ಮಾತ್ರ ಕೆಲಸ ಇದೆ. ಜಗತ್ತಿನಲ್ಲಿ ಯಾವುದೇ ದೇಶದಲ್ಲಿ ಇಷ್ಟೊಂದು ಯುವ ಶಕ್ತಿ ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಇಷ್ಟೊಂದು ಯುವ ಶಕ್ತಿ ಇದೆ. ಆದ್ರೆ ದುರದೃಷ್ಟ ಯುವ ಶಕ್ತಿ ಬಳಸಿಕೊಳುವುದಕ್ಕೆ ಆಗ್ತಿಲ್ಲ. ಅದ್ರಲ್ಲಿ ಮೋದಿ ಅವ್ರು ಪ್ರಧಾನಿ ಆದ್ಮೇಲೆ ಯುವಕರಿಗೆ ಕೆಲಸ ಇಲ್ಲ. ಯುವ ಶಕ್ತಿ ಇರುವ ನಮ್ಮ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ನಗರ ಪ್ರದೇಶದಲ್ಲಿ ಶೇ. 9 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ. 6 ರಷ್ಟು ನಿರುದ್ಯೋಗ ಸಮಸ್ಯೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಬ್ರಹ್ಮಣ್ಯ ಸ್ವಾಮಿ ಯಾರು…? ಅವ್ರು ಬಿಜೆಪಿ ನಾಯಕ. ಖುದ್ದಾಗಿ ಅವ್ರೇ ಟ್ವೀಟ್ ಮಾಡಿದ್ದಾರೆ. 2011 ರಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು. ಇವಾಗ ಮೋದಿ ಪ್ರಧಾನಿ ಆದ್ಮೆಲೆ ವಿಶ್ವದ ಆರ್ಥಿಕತೆಯಲ್ಲಿ ಭಾರತ 164 ಸ್ಥಾನ ಪಡೆದಿದೆ. ಯುವಕರಿಗೆ ದೊಡ್ಡ ಅವಮಾನ ಯಾರಾದ್ರು ಮಾಡಿದ್ರೆ ಅದು ಪ್ರಧಾನಿ ಮೋದಿ ಎಂದು ಹೇಳಿದ್ದಾರೆ ಎಂದರು.

ಕೇಂದ್ರ ಸರ್ಕಾರ ಅಗ್ನಿ ಪಥ್ ಎಂಬ ಯೋಜನೆ ತಂದಿದೆ. ಡಿಫೆನ್ಸ್ ನಲ್ಲಿ ಯುವಕರಿಗೆ ನಾಲ್ಕು ವರ್ಷ ಕೆಲಸ ಕೊಡ್ತಾರಂತ್ತೆ. ನಾಲ್ಕು ವರ್ಷ ಮುಗಿದ ಮೇಲೆ ಯುವಕರು ಏನ ಮಾಡಬೇಕು..? 17ನೇ ವಯಸ್ಸಿಗೇ ಡಿಫೆನ್ಸ್ ಗೆ ಸೇರಿ ಯುವಕರು ನಾಲ್ಕು ವರ್ಷ ಆದ್ಮೇಲೆ ಅಲ್ಲಿಂದ ಹೊರಗಡೆ ಬಂದ ಮೇಲೆ ಆ ಯುವಕರು ಏನು ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮೊನ್ನೆ ಪ್ರಧಾನಿ ಮೋದಿ ಬೆಂಗಳೂರು ಮತ್ತು ಮೈಸೂರು ಗೆ ಬಂದಿದ್ರು. ಎಲ್ಲೂ ಕೂಡ ಮೋದಿ ಉದ್ಯೋಗ, ರೈತರ ಬಗ್ಗೆ ಮಾತಾಡಿಲ್ಲ. ಯುವಕರು ಉದ್ಯೋಗ ಬೇಡಿದ್ರೆ ಪಕೋಡಾ ಮಾರಿ ಎಂದು ಪ್ರಧಾನಿ ಹೇಳುತ್ತಾರೆ ಎಂದರು.

“ಬಾದಾಮಿಲ್ಲಿ ರಥೋತ್ಸವ ಕಾರ್ಯಕ್ರಮ ಇತ್ತು. ನಾನು ಅಲ್ಲಿ ರಥ ಎಳೆಯಲು ಹೋಗಿದ್ದೆ. ಅಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ನನ್ನ ಪರ ಘೋಷಣೆ ಕೂಗಿದ್ರು. ಇನ್ನು ಕೆಲವು ಯುವಕರು ಮೋದಿ..ಮೋದಿ…ಎಂದು ಘೋಷಣೆ ಕೂಗಿದ್ರು. ನಾನು ಆ ಯುವಕರಿಗೆ ಹೇಳ್ದೆ… ಮೋದಿ ನಿಮ್ಮ ಮನೆ ಹಾಳು ಮಾಡಿದ್ದಾರೆ.. ಯಾಕ್ರೈಯಾ ಮೋದಿ ಮೋದಿ ಅಂತಿರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಚಿವ ಬಿಸಿ ನಾಗೇಶ್ ಮನೆ ಮುಂದೆ ನಮ್ಮ ಹುಡುಗರು ಚಡ್ಡಿ ಸುಟ್ಟಿದ್ರು ಎಂದು ಹೇಳಿದ ಸಿದ್ದರಾಮಯ್ಯ, ಚಡ್ಡಿ ಸುಟ್ಟಿದಕ್ಕೆ ನಮ್ಮ ಹುಡುಗರಿಗೆ ಅರೆಸ್ಟ್ ಮಾಡಿದ್ರು. ಚಡ್ಡಿ ಸುಟ್ಟಿದ ಕಾರಣಕ್ಕೆ 10 ದಿನ ನಮ್ಮ ಹುಡುಗರನ್ನು ಜೈಲ್ ಗೆ ಹಾಕಿದ್ರು. ಚಡ್ಡಿ ಸುಟ್ಟಿದ ವಿಚಾರಕ್ಕಾಗಿ ದೊಡ್ಡ ಪ್ರತಿಭಟನೆಗಳೇ ಮಾಡಿದ್ರು ಬಿಜೆಪಿ ಅವ್ರು. ಅದ್ರಲ್ಲಿ ಆರ್.ಎಸ್.ಎಸ್.ಚಡ್ಡಿ ಹೊತ್ತುಕೊಂಡು ಛಲವಾದಿ ನಾರಾಯಣ್ ಸ್ವಾಮಿ ನಮ್ಮ ಮನೆಗೆ ಬಂದಿದ್ರು. ಈ ಛಲವಾದಿ ನಾರಾಯಣ್ ಸ್ವಾಮಿ ಯಾರು… ಒಬ್ಬ ದಲಿತ. ಆರ್.ಎಸ್.ಎಸ್. ಚಡ್ಡಿ ಹೊತ್ತುಕೊಳ್ಳಲು ಬಿಜೆಪಿಯವ್ರಿಗೆ ಮತ್ತೆ ದಲಿತರೆ ಬೇಕಾಯ್ತಾ ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com