ಡಿಕೆ ಶಿವಕುಮಾರ್, ರಾಹುಲ್ , ಸಿದ್ದರಾಮಯ್ಯ
ಡಿಕೆ ಶಿವಕುಮಾರ್, ರಾಹುಲ್ , ಸಿದ್ದರಾಮಯ್ಯ

ಸಿದ್ದರಾಮಯ್ಯ ಹುಟ್ಟುಹಬ್ಬದ ಸಂಭ್ರಮ: ಅಹಿಂದ ಮತಗಳನ್ನು ಮತ್ತೆ ಸೆಳೆಯುವ ಪ್ರಯತ್ನ

ದಾವಣಗೆರೆಯಲ್ಲಿ ತಮ್ಮ ನಾಯಕನ 75ನೇ ಜನ್ಮದಿನಾಚರಣೆ 'ಸಿದ್ದರಾಮೋತ್ಸವ'ವನ್ನು ಅದ್ಧೂರಿಯಾಗಿ ನೆರವೇರಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಲ್ಲಿ ನಿಷ್ಟೆ ಹೊಂದಿರುವವರು ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ.

ಮೈಸೂರು: ದಾವಣಗೆರೆಯಲ್ಲಿ ತಮ್ಮ ನಾಯಕನ 75ನೇ ಜನ್ಮದಿನಾಚರಣೆ 'ಸಿದ್ದರಾಮೋತ್ಸವ'ವನ್ನು ಅದ್ಧೂರಿಯಾಗಿ ನೆರವೇರಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಲ್ಲಿ ನಿಷ್ಟೆ ಹೊಂದಿರುವವರು ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಜನರು ಈಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಕೇಂದ್ರಬಿಂದುವಾಗಿಸಲಾಗುತ್ತಿದೆ ಮತ್ತು ಸಾಂಪ್ರದಾಯಿಕ ಕಾಂಗ್ರೆಸ್ ಬೆಂಬಲಿಗರ ವಿಶ್ವಾಸವನ್ನು ಮರಳಿ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ.

ಸಿದ್ದರಾಮಯ್ಯ, ತಮ್ಮ ಜನ್ಮದಿನದ ಬಗ್ಗೆ ಖಚಿತವಿಲ್ಲ ಎಂದು ಅನೇಕ ಸಂದರ್ಭಗಳಲ್ಲಿ ಹೇಳಿಕೆ ನೀಡಿದ್ದು, ನೇರವಾಗಿ ಸಿದ್ದರಾಮನಹುಂಡಿಯಲ್ಲಿ ಐದನೇ ತರಗತಿಗೆ ಪ್ರವೇಶ ಪಡೆದಾಗ ಅವರ ಶಿಕ್ಷಕ ರಾಜಪ್ಪ ಅವರೇ ದಿನಾಂಕ ನಮೂದಿಸಿದ್ದಾರೆ. ಸಮಾಜವಾದಿಯಾಗಿದ್ದ ಅವರು ತಮ್ಮ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವುದರಿಂದ ದೂರ ಸರಿದಿದ್ದರು. ಆದರೆ 75 ವರ್ಷಗಳು ಒಂದು ಮೈಲಿಗಲ್ಲು, ಒಂದಕ್ಕಿಂತ ಹೆಚ್ಚಿನ ಕಾರಣಗಳಿಗಾಗಿ ಜನ್ಮದಿನ ಆಚರಿಸಲು ಅವರ ಬೆಂಬಲಿಗರು ಬಯಸಿದ್ದಾರೆ. 

ಸಿದ್ದರಾಮೋತ್ಸವ ಜಾತಿ ಆಧಾರಿತ ಸಮಾವೇಶಗಳು ಸೇರಿದಂತೆ ಹೆಚ್ಚಿದಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ನಡೆಯುವುದು ಉತ್ತಮ ಎಂದು ಬಿಂಬಿಸುವುದು ಸೇರಿದಂತೆ ಇಂತಹ ರಾಜಕೀಯ  ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡುತ್ತದೆ.

ಪಕ್ಷವು ಸಿದ್ದರಾಮಯ್ಯ ಅವರಿಗೆ ಅಹಿಂದ ಸಮಾವೇಶಗಳನ್ನು ನಡೆಸಲು ಅವಕಾಶ ನೀಡದಿದ್ದರೂ, ಈ ಕಾರ್ಯಕ್ರಮ ದೊಡ್ಡ ವರ್ಗದ ಮತದಾರರನ್ನು ಕ್ರೋಢೀಕರಿಸುತ್ತದೆ, ಇವುಗಳ ಮೇಲೆ ಅವರ ಸಾಕಷ್ಟು ಪ್ರಭಾವವಿದೆ. ಇತ್ತೀಚೆಗಷ್ಟೇ ಸಿದ್ದರಾಮಯ್ಯನವರ ಸ್ನೇಹಿತ ಹಾಗೂ ಅತ್ಯುತ್ತಮ ವಾಗ್ಮಿ ಸಿ.ಎಂ.ಇಬ್ರಾಹಿಂ ಅವರು ಪಕ್ಷದಿಂದ ನಿರ್ಗಮಿಸಿದ್ದರಿಂದ ಕಂಗೆಟ್ಟಿರುವ ಅಲ್ಪಸಂಖ್ಯಾತ ಮತದಾರರನ್ನು ಈ ರ್ಯಾಲಿ ಮತ್ತೆ ಒಲಿಸಿಕೊಳ್ಳಬಹುದು. ಅಲ್ಪಸಂಖ್ಯಾತರ ಮತದಾರರು 65 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಬಲರಾಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನ್ನು ಮತ್ತೆ ಅಧಿಕಾರಕ್ಕೆ ತರಲು ಈ ಆಚರಣೆ ನಕ್ಷೆಯನ್ನು ರೂಪಿಸಲಿದೆ ಎಂದು ಮಾಜಿ ಸಚಿವ, ಸಿದ್ದರಾಮಯ್ಯ ಅವರ ಆಪ್ತ ಹೆಚ್.ಸಿ.ಮಹದೇವಪ್ಪ ಹೇಳಿದರು. ಸಿದ್ದರಾಮಯ್ಯ ಅವರು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಮತ್ತು ಇತರ ಪ್ರಮುಖ ನಾಯಕರನ್ನು ಆಹ್ವಾನಿಸಿರುವುದರಿಂದ ನಾಯಕರಲ್ಲಿ ಯಾವುದೇ ಗೊಂದಲ ಅಥವಾ ಅಹಂ ಘರ್ಷಣೆ ಇಲ್ಲ ಎಂದು ಅವರು ಸಮರ್ಥಿಸಿಕೊಂಡರು. ಮೈಸೂರು ಮತ್ತು ನೆರೆಯ ಜಿಲ್ಲೆಗಳ 50,000 ಕ್ಕೂ ಹೆಚ್ಚು ಕಾಂಗ್ರೆಸ್ಸಿಗರು ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಬಿಎಸ್ ಯಡಿಯೂರಪ್ಪ ಅವರನ್ನು ಹಠಾತ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಅಸಮಾಧಾನಗೊಂಡಿರುವ ಲಿಂಗಾಯತರು ಮತ್ತು ವೀರಶೈವರ ದೊಡ್ಡ ಗುಂಪನ್ನು ಕಾರ್ಯಕ್ರಮಕ್ಕೆ ಕರೆತರಲು ಸಂಘಟಕರು ಯೋಜಿಸಿದ್ದಾರೆ. ಈ ಹಿಂದೆ ಲಿಂಗಾಯತ-ವೀರಶೈವ ವಿಚಾರದಲ್ಲಿ ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಿದ್ದರಾಮಯ್ಯನವರಿಗೆ ತಿದ್ದಿಕೊಳ್ಳಲು ಇದೊಂದು ಅವಕಾಶ. ಸಂಘಟನಾ ಸಮಿತಿಯಲ್ಲಿ ಲಿಂಗಾಯತರಾದ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರಿದ್ದಾರೆ.

ರ್ಯಾಲಿಯ ನಂತರ ಪಕ್ಷದೊಳಗಿನ ಆಂತರಿಕ ಚಲನಶೀಲತೆ ಏನಾಗಬಹುದು ಎಂಬುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು. ಇದು ನಡುಕ ಸೃಷ್ಟಿಸುತ್ತದೆಯೇ, ಇತರ ನಾಯಕರನ್ನು ಕೆಳಗೆ ತಳ್ಳಲಿದೆಯೇ ಅಥವಾ ಪ್ರತಿತಂತ್ರದೊಂದಿಗೆ ಹೊರಬರುತ್ತದೆಯೇ ಎಂಬುದನ್ನು ನೋಡಬೇಕು. ಸಿದ್ದರಾಮಯ್ಯ ಅವರ ಬೆಂಬಲಿಗರು ಕಾರ್ಯಕ್ರಮದ ಯಶಸ್ಸನ್ನು ತಮ್ಮ ತಲೆಗೆ ತೆಗೆದುಕೊಳ್ಳದೆ ಏಕತಾ ಮಂತ್ರವನ್ನು ಪಠಿಸಿದರೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com