'ನನಗೆ ಯಾವ ಉತ್ಸವನೂ ಬೇಡ, ಕಾಂಗ್ರೆಸ್ ಪಾರ್ಟಿಯನ್ನು ಅಧಿಕಾರಕ್ಕೆ ತಂದು ಪಕ್ಷೋತ್ಸವ ಮಾಡಬೇಕು': ಡಿ ಕೆ ಶಿವಕುಮಾರ್

ಕಾಂಗ್ರೆಸ್ ನಲ್ಲಿ ಬಣ ಬಡಿದಾಟ ಮತ್ತೆ ಸುದ್ದಿಯಲ್ಲಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಪ್ರಯುಕ್ತ ಅವರ ಬೆಂಬಲಿಗರು ಮಾಡುತ್ತಿರುವ ಸಿದ್ದರಾಮೋತ್ಸವಕ್ಕೆ ಡಿ ಕೆ ಶಿವಕುಮಾರ್ ಬೆಂಬಲಿಗರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಸಿದ್ದರಾಮೋತ್ಸವ ಮಾಡುತ್ತಿರುವ ಅಮೃತ ಮಹೋತ್ಸವ ಸಮಿತಿಗೆ ಪತ್ರ ಬರೆದಿರುವ ಡಿಕೆಶಿ ಅಭಿಮಾನಿ ಜಿ ಸಿ ರ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೊಂದಿಗೆ ಚಾಮರಾಜನಗರದ ಚಾಮರಾಜೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೊಂದಿಗೆ ಚಾಮರಾಜನಗರದ ಚಾಮರಾಜೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)

ಬೆಂಗಳೂರು: ಕಾಂಗ್ರೆಸ್ ನಲ್ಲಿ ಬಣ ಬಡಿದಾಟ ಮತ್ತೆ ಸುದ್ದಿಯಲ್ಲಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಪ್ರಯುಕ್ತ ಅವರ ಬೆಂಬಲಿಗರು ಮಾಡುತ್ತಿರುವ ಸಿದ್ದರಾಮೋತ್ಸವಕ್ಕೆ ಡಿ ಕೆ ಶಿವಕುಮಾರ್ ಬೆಂಬಲಿಗರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಸಿದ್ದರಾಮೋತ್ಸವ ಮಾಡುತ್ತಿರುವ ಅಮೃತ ಮಹೋತ್ಸವ ಸಮಿತಿಗೆ ಪತ್ರ ಬರೆದಿರುವ ಡಿಕೆಶಿ ಅಭಿಮಾನಿ ಜಿ ಸಿ ರಾಜು ಶಿವಕುಮಾರೋತ್ಸವವನ್ನೂ ಮಾಡಿ ಎಂದು ಪತ್ರ ಬರೆದಿದ್ದಾರೆ.

ಇನ್ನು ಸಿದ್ದರಾಮೋತ್ಸವದಿಂದ ಡಿ ಕೆ ಶಿವಕುಮಾರ್ ದೂರವುಳಿಯುತ್ತಾರೆಯೇ ಎಂಬ ಗುಮಾನಿ ಉಂಟಾಗಿದೆ, ಸಿದ್ದರಾಮೋತ್ಸವ ನಡೆಸುವ ಸಲುವಾಗಿ ಇಂದು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ಡಿ ಕೆ ಶಿವಕುಮಾರ್  ಗೈರಾಗಿದ್ದಾರೆ. 

ಇನ್ನು ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಡಿ ಕೆ ಶಿವಕುಮಾರೋತ್ಸವ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದಾಗ, ನನಗೆ ಯಾವ ಉತ್ಸವವೂ ಬೇಡ, ವ್ಯಕ್ತಿಗಿಂತಲೂ ನನಗೆ ಪಕ್ಷ ಮುಖ್ಯ, ಮುಂದಿನ ಬಾರಿ ವಿಧಾನಸೌಧದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಪಕ್ಷೋತ್ಸವ ಮಾಡಬೇಕೆಂಬುದೇ ನನ್ನ ಗುರಿ ಎಂದರು.

ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಜಾಹೀರಾತು ಕೊಡ್ತೇವೆ ಅಂದ್ರು, ಬೇರೆಯವ್ರಿಗೆ ತೊಂದರೆ ಆಗಬಾರದು, ಅಂತಾ ಕೇದಾರನಾಥಕ್ಕೆ ಹೋಗಿದ್ದೆ. ರಾಜು ಬರೆದ ಪತ್ರ ಅವರ ವೈಯಕ್ತಿಕ ವಿಚಾರವಾಗಿದೆ. ವ್ಯಕ್ತಿ ಪೂಜೆ ಬೇಡ,‌ ಪಕ್ಷ‌ಪೂಜೆ‌ ಮಾಡಿ ಎಂದು ಮೊದಲೇ ಹೇಳಿದ್ದೇನೆ. ಇವತ್ತೂ ಅದನ್ನೇ‌‌ ಹೇಳ್ತೇನೆ, ನನಗೆ ಪಾರ್ಟಿ‌ ಉತ್ಸವ ಬೇಕು. ವಿಧಾನಸೌಧದಲ್ಲಿ‌ ಕಾಂಗ್ರೆಸ್​ ಪಾರ್ಟಿಯನ್ನು ಅಧಿಕಾರದಲ್ಲಿ ಕೂರಿಸಬೇಕು ಎಂದರು.

ಭರ್ಜರಿ ಭೂರೀ ಭೋಜನ: ಹೇಳಿಕೇಳಿ ಬೆಂಗಳೂರಿನಲ್ಲಿಯೂ ಮಳೆ ಸುರಿಯುತ್ತಿದೆ, ಚಳಿಯ ವಾತಾವರಣ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿದ್ದರಾಮೋತ್ಸವಕ್ಕೆ ಪೂರ್ವಭಾವಿ ಸಿದ್ಧತಾ ಸಭೆ ಇಂದು ನಡೆಯುತ್ತಿದ್ದು ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ನಾಯಕರಿಗೆ ಭೂರೀ ಭೋಜನ ಸಿದ್ದತೆಯಾಗಿದೆ. ಸಸ್ಯಾಹಾರಿ ಭೋಜನ ಮತ್ತು ಮಾಂಸ ಪ್ರಿಯರಿಗೆ ಪ್ರತ್ಯೇಕ ಭೋಜನ, ಮೆನುಗಳು ಸಿದ್ಧವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com