ಸ್ವಂತ ಬಲದ ಮೇಲೆ 'ಗದ್ದುಗೆ' ಏರುವ ತವಕ: ಉತ್ತರ 'ದಂಡಯಾತ್ರೆ'ಗೆ ಜೆಡಿಎಸ್ ಸಜ್ಜು!

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ.

ವಿಧಾನಸಭಾ ಚುನಾವಣೆಗೆ ಎಂಟು ತಿಂಗಳು ಬಾಕಿ ಉಳಿದಿದ್ದು, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪಕ್ಷದ ಚುನಾವಣಾ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಲು ಜುಲೈ 29 ಮತ್ತು 30 ರಂದು ಬೀದರ್‌ನಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.

ಈ ಜಿಲ್ಲೆಗಳು ಒಟ್ಟಾರೆ 39  ವಿಧಾನಸಭೆ ಕ್ಷೇತ್ರಗಳನ್ನು  ಹೊಂದಿದ್ದು, ಇಲ್ಲಿ ಜೆಡಿಎಸ್ ಒಂದು ಕಾಲದಲ್ಲಿ ಗಣನೀಯ ಪ್ರಮಾಣದ ಹಿಡಿತವನ್ನು ಹೊಂದಿತ್ತು, ಆದರೆ ಹಿಂದಿನ ಚುನಾವಣೆಯಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ನಾಲ್ವರು ಶಾಸಕರಾದ ಬಂಡೆಪ್ಪ ಕಾಶೆಂಪೂರ್, ನಾಗಣ್ಣ ಗೌಡ ಕಂದಕೂರ್, ರಾಜಾ ವೆಂಕಟಪ್ಪ ನಾಯ್ಕ್ ಮತ್ತು ವೆಂಕಟರಾವ್ ನಾಡಗೌಡ  ಸಭೆ ನಡೆಸಲಿದ್ದಾರೆ. ಕಳೆದ ಚುನಾವಣೆಯಲ್ಲಿ, ನಮ್ಮ ಅಭ್ಯರ್ಥಿಗಳು ಕಡಿಮೆ ಅಂತರದಿಂದ ಸೋತಿದ್ದಾರೆ , ಹೀಗಾಗಿ ಈ ಬಾರಿ ಹೆಚ್ಚು ಶ್ರಮ ವಹಿಸಿದ್ದಾರೆ ಮತ್ತಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ಇಡೀ ಉತ್ತರ ಕರ್ನಾಟಕದಿಂದ 2018ರಲ್ಲಿ ಆರು ಮಂದಿ ಶಾಸಕರಿದ್ದರು. ಎಂಸಿ ಮನಗೂಳಿ ನಿಧನದ ನಂತರ ನಾವು ಐದಕ್ಕೆ ಇಳಿದಿದ್ದೇವೆ. ಆದರೆ ಉತ್ತಮ ಸಿದ್ಧತೆಗಳೊಂದಿಗೆ ಚುನಾವಣೆಗೆ ನಾವು ಹೋದರೆ ಹೆಚ್ಚಿನ ಸ್ಥಾನ ಗೆಲ್ಲಬಹುದು. ನಾವು ಪಂಚ ರತ್ನ ಎಂಬ ಐದು ಪ್ರಮುಖ ಯೋಜನೆಗಳನ್ನು ಹೊಂದಿದ್ದೇವೆ, ಈ ಯೋಜನೆಯನ್ನು ನಾವು ಮತದಾರರ ಬಳಿ ಕೊಂಡೊಯ್ಯುತ್ತೇವೆ.  ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ಪಕ್ಷದ ಎಂಟರಿಂದ ಒಂಬತ್ತು ಶಾಸಕರು  ಕಾಂಗ್ರೆಸ್ ಅಥವಾ ಬಿಜೆಪಿಗ ಸೇರುತ್ತಿರುವುದು ರಹಸ್ಯವಾಗಿ ಉಳಿದಿಲ್ಲ ಎಂದು ಜೆಡಿಎಸ್ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಹಲವು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಅಪಾರ ಬೆಂಬಲವಿದ್ದು, ಹಾಗಾಗಿ ಆ ಪ್ರದೇಶಗಳಲ್ಲಿ ಹೆಚ್ಚಿನ ಒತ್ತು ನೀಡಬೇಕು ಹಾಗೆಯೇ. ಯಾದಗಿರಿ, ನಾಗಠಾಣ, ದೇವರಹಿಪ್ಪರಗಿ ಮತ್ತಿತರ ಕ್ಷೇತ್ರಗಳಲ್ಲಿ ಪಕ್ಷವು ತಳಮಟ್ಟದಿಂದಲೇ ಪ್ರಾಬಲ್ಯ ಹೊಂದಿದೆ, ಅಲ್ಲೂ ಕೂಡ ಗಮನ ಹರಿಸಿದರೇ ಉತ್ತಮ ಫಲಿತಾಂಶ ಬರಲಿದೆ ಎಂದು ಶಾಸಕ ನಾಗಣ್ಣ ಗೌಡ ಕಂದಕೂರ್ ಹೇಳಿದ್ದಾರೆ.

ಎರಡು ದಿನಗಳ ಕಾಲ  ನಡೆಯುವ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಹಿರಿಯ ಮುಖಂಡ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ಮಾಜಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು ಹಾಗೂ ಸಂಭಾವ್ಯ ಚುನಾವಣಾ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com