'ಸಿದ್ದರಾಮೋತ್ಸವ' ಖಾಸಗಿ ಕಾರ್ಯಕ್ರಮ: ಉಲ್ಟಾ ಹೊಡೆದ ಶಿವಕುಮಾರ್; ಜಮೀರ್ ನಡೆಯಿಂದ ಬೇಸತ್ತರಾ ಡಿಕೆಶಿ?
ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕ್ರವನ್ನಾಗಿ ಮಾಡುತ್ತೇವೆ ಎನ್ನುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಈಗ ಬದಲಾದ ಪರಿಸ್ಥಿತಿಯಲ್ಲಿ ಅದೊಂದು ಖಾಸಗಿ ಕಾರ್ಯಕ್ರಮ ಎಂದು ಹೇಳುವುದರ ಮೂಲಕ ಸಿದ್ದರಾಮಯ್ಯ ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ.
Published: 28th July 2022 09:51 AM | Last Updated: 28th July 2022 12:52 PM | A+A A-

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕ್ರವನ್ನಾಗಿ ಮಾಡುತ್ತೇವೆ ಎನ್ನುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಈಗ ಬದಲಾದ ಪರಿಸ್ಥಿತಿಯಲ್ಲಿ ಅದೊಂದು ಖಾಸಗಿ ಕಾರ್ಯಕ್ರಮ ಎಂದು ಹೇಳುವುದರ ಮೂಲಕ ಸಿದ್ದರಾಮಯ್ಯ ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಸಿದ್ದರಾಮೋತ್ಸವವನ್ನು ಪಕ್ಷದ ಕಾರ್ಯಕ್ರಮವಾಗಿ ಆಚರಿಸುತ್ತೇವೆ ಎನ್ನುತ್ತಿದ್ದ ಡಿಕೆಶಿ, ಸಿದ್ದರಾಮಯ್ಯ ಬೆಂಬಲಿಗರು, ಜಮೀರ್ ನಡೆಯಿಂದ ಬೇಸತ್ತು ಸಿದ್ದರಾಮೋತ್ಸವವನ್ನ ಖಾಸಗಿ ಕಾರ್ಯಕ್ರಮ ಎಂದು ಹೇಳಿದ್ದಾರೆ ತಿಳಿದು ಬಂದಿದೆ.
ಇವತ್ತಿಗೆ ಮೌನ ಪ್ರತಿಭಟನೆ ನಿಲ್ಲಿಸುತ್ತಿದ್ದೀವಿ. ಆಗಸ್ಟ್ 15 ರಂದು ದೊಡ್ಡ ಜವಾಬ್ದಾರಿ ಇದೆ. ಸಂಘ ಸಂಸ್ಥೆ, ವಿದ್ಯಾರ್ಥಿ, ಕಾರ್ಯಕರ್ತರ ರಿಜಿಸ್ಟರ್ ಮಾಡಿಸಬೇಕು. 3ನೇ ತಾರೀಖು ಖಾಸಗಿ ಕಾರ್ಯಕ್ರಮ. ಅದು ಅಭಿಮಾನಿಗಳ ಕಾರ್ಯಕ್ರಮ. 15ನೇ ತಾರೀಖು ನಡೆಯೋದು ರಾಷ್ಟ್ರ ಕಾರ್ಯಕ್ರಮ ಎಂದು ಹೇಳಿದರು.
ಇದನ್ನೂ ಓದಿ: ಡಿಕೆಶಿ ಸಿಎಂ ಆಗುವ ಮಹತ್ವಾಕಾಂಕ್ಷೆಯಲ್ಲಿ ತಪ್ಪೇನಿಲ್ಲ; ಶಾಸಕರು, ಹೈಕಮಾಂಡ್ ನಿರ್ಧರಿಸುತ್ತದೆ: ಸಿದ್ದರಾಮಯ್ಯ
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಇವತ್ತಿನ ಇ.ಡಿ ತನಿಖೆ ಮಕ್ತಾಯವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಹೋರಾಟವನ್ನು ಕೈಬಿಟ್ಟರು. ಒಂದೂವರೆ ದಿನಕ್ಕೆ ಮೌನ ಪ್ರತಿಭಟನೆ ಮುಕ್ತಾಯಗೊಳಿಸಿದರು.