ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಬಿಜೆಪಿ, ಜೆಡಿಎಸ್ ತಪ್ಪುಗಳಿಂದ ಕಾಂಗ್ರೆಸ್ ಗೆ ಲಾಭ

ಮೊನ್ನೆ ಗುರುವಾರ ಪ್ರಕಟವಾದ ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಎರಡು ಸ್ಥಾನಗಳನ್ನು ಗೆದ್ದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೊನ್ನೆ ಗುರುವಾರ ಪ್ರಕಟವಾದ ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಪ್ರತಿಪಕ್ಷ ಕಾಂಗ್ರೆಸ್ ಕೂಡ ಎರಡು ಸ್ಥಾನಗಳನ್ನು ಗೆದ್ದಿದೆ. ಪಶ್ಚಿಮ ಶಿಕ್ಷಕರ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹಾಗೂ ವಾಯವ್ಯ ಪದವೀಧರರ ಸ್ಥಾನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಸಹೋದರ ಹನುಮಂತ ನಿರಾಣಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಬಿಜೆಪಿಯಿಂದ ವಾಯವ್ಯ ಪದವೀಧರರ ಸ್ಥಾನವನ್ನು ಮತ್ತು ಈ ಹಿಂದೆ ಜೆಡಿಎಸ್ ವಶದಲ್ಲಿದ್ದ ದಕ್ಷಿಣ ಪದವೀಧರರ ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರು ಗೆದ್ದುಕೊಂಡರು, ಮೂವರು ಅಭ್ಯರ್ಥಿಗಳ ತೀವ್ರ ಬಹುಕೋನ ಹೋರಾಟದ ನಂತರ. ಒಕ್ಕಲಿಗ ಭದ್ರಕೋಟೆಯಲ್ಲಿ ಪ್ರಮುಖ ಪಕ್ಷಗಳು ಮತ್ತು ಮೂವರು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 

ಸಾಂಪ್ರದಾಯಿಕ ಬಿಜೆಪಿ ಮತ್ತು ಜೆಡಿಎಸ್ ಮತಗಳನ್ನು ಪಕ್ಷೇತರರು ಈ ಬಾರಿ ಗಳಿಸಿದ್ದು, ಮತಗಳ ವಿಭಜನೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಹಕಾರಿಯಾಗಿದೆ.

ಬೊಮ್ಮಾಯಿ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ 75 ಸದಸ್ಯರ ವಿಧಾನ ಪರಿಷತ್ ನಲ್ಲಿ ಈಗಾಗಲೇ ಶೇಕಡಾ 50ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಹೊಂದಿರುವ ಕಾರಣ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ಮೇಲ್ಮನೆಯಲ್ಲಿ ಬಹುಮತವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಜ್ಯಪಾಲರ ಒಪ್ಪಿಗೆಯೊಂದಿಗೆ ಸುಗ್ರೀವಾಜ್ಞೆಯ ಮೂಲಕ ಕಾನೂನಾಗಿ ಮಾಡಿದ ಮತಾಂತರ ವಿರೋಧಿ ಮಸೂದೆಯಂತಹ ಮಹತ್ವದ ಮಸೂದೆಗಳನ್ನು ಅಂಗೀಕರಿಸಲು ಇದು ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸಹಕಾರಿಯಾಗಲಿದೆ.

ಕುಗ್ಗಿದ ಬಿಜೆಪಿ ಸಾಧನೆ: ಬಿಜೆಪಿ ಈಗ ವಿಧಾನ ಪರಿಷತ್ತಿನಲ್ಲಿ 39 ಸದಸ್ಯರನ್ನು ಹೊಂದಿದೆ, ಕಾಂಗ್ರೆಸ್ 26, ಜೆಡಿಎಸ್ 8 ಮತ್ತು ಸ್ವತಂತ್ರ ಶಾಸಕರಾದ ಲಖನ್ ಜಾರಕಿಹೊಳಿಯವರನ್ನು ಹೊಂದಿದೆ. ಜೆಡಿಎಸ್‌ನ ಮಾಜಿ ಎಂಎಲ್‌ಸಿ ಸಿ ಎಂ ಇಬ್ರಾಹಿಂ ರಾಜೀನಾಮೆಯಿಂದ ಒಂದು ಸ್ಥಾನ ತೆರವಾಗಿದ್ದು, ಅದನ್ನು ಬಿಜೆಪಿ ಗೆಲ್ಲಬಹುದು ಎಂದು ಮೂಲಗಳು ತಿಳಿಸಿವೆ.2023ರ  ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಸಾಧನೆಯು ಪಕ್ಷವು ಸ್ವಲ್ಪ ನೆಲೆಯನ್ನು ಕಳೆದುಕೊಂಡಿದೆ ಎಂದು ಸೂಚಿಸುತ್ತದೆ.

ಕಳೆದ ವರ್ಷಾಂತ್ಯದ ಕೌನ್ಸಿಲ್ ಎಲೆಕ್ಷನ್ ನ ಚುನಾವಣಾ ಫಲಿತಾಂಶದಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ ಹನ್ನೊಂದು ಸ್ಥಾನಗಳನ್ನು ಗೆದ್ದಿದ್ದವು. ಇದೇ ಪರಿಸ್ಥಿತಿ ಈ ಬಾರಿ ಕೂಡ ಮುಂದುವರಿದಿತ್ತು. ದಕ್ಷಿಣ ಪದವೀಧರರ ಎಂಎಲ್ಸಿ ಸ್ಥಾನದ ಬಿಜೆಪಿ ಅಭ್ಯರ್ಥಿ ಎಂವಿ ರವಿಶಂಕರ್ ತಮ್ಮ ಸೋಲಿಗೆ ಜೆಡಿಎಸ್ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬದಲಾಗಿದ್ದು ಪ್ರಮುಖ ಕಾರಣ ಎನ್ನುತ್ತಾರೆ.

ತುಮಕೂರು, ಕೋಲಾರ, ಮಂಡ್ಯ, ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರದಿಂದ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ತನ್ನ ಎಂಎಲ್‌ಸಿಗಳನ್ನು ಹೊಂದಿರುವುದರಿಂದ ಹಾಸನ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಉತ್ತರದಲ್ಲಿ, ವೀರಶೈವ ಲಿಂಗಾಯತ ಭದ್ರಕೋಟೆಯಲ್ಲಿ ಪ್ರಕಾಶ್ ಹುಕ್ಕೇರಿಯಂತಹ ಅನುಭವಿ ಗೆದ್ದಿದ್ದಾರೆ.

ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಗೆಲುವನ್ನು ಕಾಂಗ್ರೆಸ್ ಪಕ್ಷದ ಟ್ರೆಂಡ್ ಸೆಟ್ಟರ್ ಎಂದು ಬಣ್ಣಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಭದ್ರಕೋಟೆಯನ್ನು ಹೊಂದಿದ್ದು, ಹಳೆ ಮೈಸೂರು ಭಾಗದಲ್ಲಿ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ತನ್ನ ಕಾರ್ಯತಂತ್ರವನ್ನು ಮರುಚಿಂತನೆ ಮಾಡಿಕೊಳ್ಳಬೇಕಿದೆ. ಪ್ರಮುಖರಾದ ಬಸವರಾಜ ಹೊರಟ್ಟಿ ಅವರನ್ನು ಕಳೆದುಕೊಂಡಿರುವ ಜೆಡಿಎಸ್‌ಗೆ ಅವರ ಸ್ಥಾನಕ್ಕೆ ನಾಯಕರನ್ನು ಹುಡುಕುವ ಕೆಲಸ ದೊಡ್ಡದಾಗಿದೆ. 

ಮೂರು ದಶಕಗಳ ನಂತರ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಮೋಘ ಗೆಲುವು, ಹಳೇ ಮೈಸೂರಿನಲ್ಲಿ ಹಿಡಿತ ಸಾಧಿಸಲು ಬಯಸುತ್ತಿರುವ ಪಕ್ಷಕ್ಕೆ ಭಾರಿ ಆತ್ಮವಿಶ್ವಾಸವನ್ನು ನೀಡಿದೆ. ಬಿಜೆಪಿಯ ದೋಷಪೂರಿತ ರಾಜಕಾರಣ ಮತ್ತು ಜೆಡಿಎಸ್‌ನಲ್ಲಿನ ದೋಷಗಳನ್ನು ಬಯಲಿಗೆಳೆದ ಕಾಂಗ್ರೆಸ್ ಗೆ ಈ ಬಾರಿಯ ಗೆಲುವು ತೀವ್ರ ಆತ್ಮವಿಶ್ವಾಸ ಮೂಡಿಸಿದೆ.

ಬಿಜೆಪಿ ಹಿನ್ನಡೆಗೆ ಕಾರಣ: ಆಡಳಿತಾರೂಢ ಬಿಜೆಪಿಯು ಪಠ್ಯಪುಸ್ತಕ ಪರಿಷ್ಕರಣೆ, ಅತಿಯಾದ ಆತ್ಮವಿಶ್ವಾಸ, ತನ್ನ ಕಾರ್ಯತಂತ್ರವನ್ನು ಕಾರ್ಯಗತಗೊಳಿಸಲು ವಿಫಲವಾದ ತನ್ನ ಸಂವೇದನಾಶೀಲ ವಿಧಾನಕ್ಕೆ ಬೆಲೆ ತೆರುವಂತೆ ತೋರುತ್ತದೆ. ಒಕ್ಕಲಿಗ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಜೆಡಿಎಸ್ ಈಗ ಒಡೆದ ಮನೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಹಲವಾರು ವಿವಾದಾತ್ಮಕ ವಿಷಯಗಳು ಬಿಜೆಪಿ ಪರವಾಗಿ ಇಲ್ಲ. ವಿಶೇಷವಾಗಿ ಪಠ್ಯಪುಸ್ತಕ ಪರಿಷ್ಕರಣೆ, ಅದರ ಬಗ್ಗೆ ಅನೇಕ ಪದವೀಧರರು ಮತ್ತು ಶಿಕ್ಷಕರು ಅಸಮಾಧಾನಗೊಂಡಿದ್ದಾರೆ. ಸಮಾಜ ಸುಧಾರಕ ಬಸವೇಶ್ವರರ ಮೇಲೆ ಪಠ್ಯದಲ್ಲಿ ದೋಷಗಳಿಂದಾಗಿ ಸಮಿತಿಯ ವಿರುದ್ಧ ಲಿಂಗಾಯತ ಧರ್ಮೀಯರು ಹರಿಹಾಯ್ದರು. ಡಾ ಬಿ ಆರ್ ಅಂಬೇಡ್ಕರ್ ಅವರ ಅಧ್ಯಾಯದಲ್ಲಿ “ಸಂವಿಧಾನ ಶಿಲ್ಪಿ” ಎಂಬ ಪದಗಳನ್ನು ಅಳಿಸಿದ್ದಾರೆ. ‘ರಾಷ್ಟ್ರಕವಿ’ ಕುವೆಂಪು ಅವರ ಬಗ್ಗೆ ಕೆಟ್ಟ ಅಭಿರುಚಿಯ ಹೇಳಿಕೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು, ಇದು ಬಿಜೆಪಿಗೆ ಪರಿಷತ್ ಚುನಾವಣೆಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡಿತು, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com