ಪಂಚಾಯತ್ ಚುನಾವಣೆ ಮತ್ತಷ್ಟು ವಿಳಂಬ ಸಾಧ್ಯತೆ: ಮುಗಿಯದ ಮರು ವಿಂಗಡಣೆ ಪ್ರಕ್ರಿಯೆ

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಗಡಿ ಮರುವಿಂಗಡಣೆ ಪ್ರಕ್ರಿಯೆ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಪಂಚಾಯತ್ ರಾಜ್ ಗಡಿ ನಿರ್ಣಯ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಿಸಿದೆ. ಕರ್ನಾಟಕ ಹೈಕೋರ್ಟ್ ಆದೇಶದ ಹೊರತಾಗಿಯೂ ಪಂಚಾಯತ್ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಮರುವಿಂಗಡಣೆ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಪಂಚಾಯತ್ ರಾಜ್ ಮರುವಿಂಗಡಣೆ (Delimitation) ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಿಸಿದೆ. ಕರ್ನಾಟಕ ಹೈಕೋರ್ಟ್ ಆದೇಶದ ಹೊರತಾಗಿಯೂ ಪಂಚಾಯತ್ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಪಂಚಾಯತ್ ರಾಜ್ ಗಡಿ ಮರು ವಿಂಗಡಣೆ ಆಯೋಗಕ್ಕೆ ಆಯುಕ್ತರನ್ನಾಗಿ ಮಾಜಿ ಬಿಬಿಎಂಪಿ ಆಯುಕ್ತ ಎಂ ಲಕ್ಷ್ಮಿನಾರಾಯಣ ಅವರನ್ನು ರಾಜ್ಯ ಸರ್ಕಾರ ನೇಮಿಸಿತು. ಅವರ ಅವಧಿ ಏಪ್ರಿಲ್ 2022 ರಲ್ಲಿ ಕೊನೆಗೊಂಡಿತ್ತು. 

ಕಳೆದ ಜೂನ್ 18 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ (ಜಿಲ್ಲಾ ಪಂಚಾಯತ್)ಯ ಇತ್ತೀಚಿನ ಆದೇಶದಲ್ಲಿ ಆಯೋಗವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆರು ತಿಂಗಳವರೆಗೆ ರಚಿಸಲಾಗಿದೆ. ಆಯೋಗದ ಅವಧಿ ಮುಗಿದಿದ್ದರೂ ಮುಂದಿನ ಅಕ್ಟೋಬರ್ ವರೆಗೆ ವಿಸ್ತರಿಸಲಾಗಿದೆ. 

ಈ ವರ್ಷ ಮೇ ತಿಂಗಳಿನಿಂದ ಎಂಟು ವಾರಗಳಲ್ಲಿ ಚುನಾವಣೆ ನಡೆಸಬೇಕೆಂದು ನ್ಯಾಯಾಲಯದ ಆದೇಶವು ಷರತ್ತು ವಿಧಿಸಿದ್ದರೂ, ರಾಜ್ಯ ಸರ್ಕಾರವು ಮರು ವಿಂಗಡಣೆ ಆಧಾರದ ಮೇಲೆ ಚುನಾವಣೆಗಳನ್ನು ನಡೆಸುತ್ತಿದೆ ಎಂದು ಬಿಜೆಪಿ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಸರ್ಕಾರ ಮತ್ತು ಪಕ್ಷ ಈ ಚುನಾವಣೆಯತ್ತ ಗಮನ ಹರಿಸುವ ಸಾಧ್ಯತೆ ಇದೆ.

ಈ ಬಗ್ಗೆ ಬಿಬಿಎಂಪಿ ಮಾಜಿ ಆಯುಕ್ತ ಲಕ್ಷ್ಮೀನಾರಾಯಣ ಅವರನ್ನು ಸಂಪರ್ಕಿಸಿದಾಗ, ಬಹುತೇಕ ಶೇ.70 ರಷ್ಟು ಮರು ವಿಂಗಡಣೆ ಕಾಮಗಾರಿ ಪೂರ್ಣಗೊಂಡಿದ್ದು, ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು. ಈ ಮಧ್ಯೆ, ರಾಜ್ಯ ಚುನಾವಣಾ ಆಯೋಗ (ಕೆಎಸ್‌ಇಸಿ) ಕೂಡ ಪಂಚಾಯತ್ ಚುನಾವಣೆ ನಡೆಸಲು ಸಜ್ಜಾಗಿದೆ. ಯಾವಾಗ ಬೇಕಾದರೂ ಚುನಾವಣೆ ನಡೆಸಲು ಸಿದ್ಧ ಎಂದು ಕೆಎಸ್‌ಇಸಿ ಆಯುಕ್ತ ಬಿ.ಬಸವರಾಜು ತಿಳಿಸಿದ್ದಾರೆ.

ನಾವು ಈಗಾಗಲೇ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿದ್ದೇವೆ. ಬಿಬಿಎಂಪಿ ಮತ್ತು ಪಂಚಾಯತ್‌ಗಳಿಗೆ ಚುನಾವಣೆಯನ್ನು ನಡೆಸಲು ಸಮರ್ಥರಾಗಿದ್ದೇವೆ. ನ್ಯಾಯಾಲಯದ ಆದೇಶದಂತೆ ಆಗಸ್ಟ್‌ ವೇಳೆಗೆ ಕ್ಷೇತ್ರ ವಿಂಗಡಣೆ ಮತ್ತು ವಾರ್ಡ್‌ ಮೀಸಲು ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com