ಪ್ರಧಾನಿ ಮೋದಿ ಬಂದರು, ಅಭಿವೃದ್ಧಿಗೆ ಒತ್ತು ನೀಡಿ ಮಾತಾಡಿದರು...; ಆದರೆ ವಾಸ್ತವ ಸವಾಲುಗಳ ಮಧ್ಯೆ ರಾಜ್ಯ ಕೇಸರಿ ಪಡೆ

ಕಳೆದ ಕೆಲವು ತಿಂಗಳುಗಳು ಕರ್ನಾಟಕ ಹಲವಾರು ಧಾರ್ಮಿಕ ಮತ್ತು ಕೋಮುವಾದಿ ವಾದ ವಿವಾದಗಳಿಂದ ಸುದ್ದಿಯಾಗಿತ್ತು. 2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮತ್ತಷ್ಟು ಉಲ್ಬಣಗೊಳ್ಳಬಹುದೇ ಎಂದು ಹಲವರು ಅಚ್ಚರಿಪಟ್ಟಿದ್ದರು.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಕಳೆದ ಕೆಲವು ತಿಂಗಳುಗಳು ಕರ್ನಾಟಕ ಹಲವಾರು ಧಾರ್ಮಿಕ ಮತ್ತು ಕೋಮುವಾದಿ ವಾದ ವಿವಾದಗಳಿಂದ ಸುದ್ದಿಯಾಗಿತ್ತು. 2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮತ್ತಷ್ಟು ಉಲ್ಬಣಗೊಳ್ಳಬಹುದೇ ಎಂದು ಹಲವರು ಅಚ್ಚರಿಪಟ್ಟಿದ್ದರು.

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯದಲ್ಲಿ ಇಂತಹ ಹಲವು ಸೂಕ್ಷ್ಮ ವಿಚಾರಗಳು ಯಾವ ರೀತಿ ತಿರುವು ಪಡೆದುಕೊಳ್ಳಬಹುದು ಎಂದು ಊಹಿಸುವ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿನ ರಾಜಕೀಯ ವಿಷಯದಲ್ಲಿ ಧನಾತ್ಮಕ ಮತ್ತು ಅಭಿವೃದ್ಧಿಯನ್ನು ಮರಳಿ ತರಲು ಪ್ರಯತ್ನಿಸಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿ, ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು ಪೂರ್ಣಗೊಳಿಸಲು 40 ತಿಂಗಳ ಗಡುವನ್ನು ನಿಗದಿಪಡಿಸಿದರು. ‘ಬ್ರಾಂಡ್ ಬೆಂಗಳೂರಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. 

ಈಗ ರಾಜ್ಯದಲ್ಲಿ ಚುನಾವಣೆಯ ಕಾವು ನಿಧಾನವಾಗಿ ವೇಗವನ್ನು ಪಡೆಯುತ್ತಿದೆ, ಸಾರ್ವಜನಿಕ ಸಭೆಯು ಉನ್ನತ ನಾಯಕರ ಇಂತಹ ಅನೇಕ ದೊಡ್ಡ ರ್ಯಾಲಿಗಳಲ್ಲಿ ಮೊದಲನೆಯದು ಎಂದು ತೋರುತ್ತಿದೆ. ಪ್ರಮುಖ ಯೋಜನೆಗಳ ವಿಳಂಬ ವಿಚಾರದಲ್ಲಿ ಹಿಂದಿನ ವಿರೋಧ ಪಕ್ಷಗಳ ಮೇಲೆ ವಾದ ನಡೆಸುವಾಗ ಅಭಿವೃದ್ಧಿ ಪಥದಲ್ಲಿ ಸುಗಮ ತಮ್ಮ ಡಬಲ್ ಎಂಜಿನ್ ಸರ್ಕಾರ ಮುಂದಿದೆ, ಜನಪರವಾಗಿದೆ ಎಂದು ಒತ್ತಿ ಹೇಳಿದ್ದರು.

ಪ್ರಧಾನಿಯವರ ಈ ರೀತಿಯ ಅಭಿವೃದ್ಧಿಶೀಲ ಕಾರ್ಯಕ್ರಮಗಳು, ಅವುಗಳ ಬಗ್ಗೆ ಮಾತನಾಡುವುದು ಮುಖ್ಯವಾಗಿದೆ. ಹಿಜಾಬ್, ಹಲಾಲ್, ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ, ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಯಲ್ಲಿನ ಅವ್ಯವಹಾರ, ಗುತ್ತಿಗೆದಾರರಿಂದ ಶೇಕಡಾ 40ರಷ್ಟು ಕಮಿಷನ್‌ನ ಆರೋಪ ಇವುಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನಗಳನ್ನು ಬಹುತೇಕ ಮಬ್ಬಾಗಿಸಿರುವ ಸಮಯದಲ್ಲಿ ಅಭಿವೃದ್ಧಿಯನ್ನು ತಮ್ಮ ಸರ್ಕಾರದ ಪ್ರಮುಖ ಅಜೆಂಡಾ ಎಂದು ಬಿಂಬಿಸಲು ಪ್ರಧಾನಿ ಮೋದಿಯವರು ಹೊರಟಂತಿದೆ.

ಸರ್ಕಾರದ ಸಾಧನೆಯೊಂದಿಗೆ ಚುನಾವಣೆಯಲ್ಲಿ ಜನರ ಮುಂದೆ ಹೋಗುತ್ತೇವೆ ಎಂದು ಸಿಎಂ ಬೊಮ್ಮಾಯಿ ಆಗಾಗ ಹೇಳುತ್ತಿರುತ್ತಾರೆ. ಆದರೆ ಸರ್ಕಾರದ ಅಜೆಂಡಾ ಮಧ್ಯೆ ವಿರೋಧ ಪಕ್ಷಗಳ ಆಕ್ರಮಣಕಾರಿ ನೀತಿಯಡಿ ತಮ್ಮ ಸರ್ಕಾರವನ್ನು ಹಳಿಯಲ್ಲಿ ನಿಲ್ಲಿಸಿ ಜನರ ಪ್ರೀತಿ, ವಿಶ್ವಾಸ ಗಳಿಸುವುದು ಬಿಜೆಪಿ ಸರ್ಕಾರಕ್ಕೆ ಸವಾಲಾಗಿದೆ. 

ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ಕಟ್ಟಿಹಾಕಲು ಯತ್ನಿಸುತ್ತಿದ್ದರೆ, ಇತ್ತ ಅಧಿಕಾರದ ಕೊನೆಯ ಕೆಲವು ತಿಂಗಳುಗಳು ಸರ್ಕಾರಕ್ಕೆ ಎಲ್ಲಾ ಬಜೆಟ್ ಪ್ರಸ್ತಾವನೆಗಳನ್ನು ಜಾರಿಗೊಳಿಸಲು, ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸಲು ಮತ್ತು ವಿವಾದಗಳಿಂದ ದೂರವಿಡಲು ಹೆಚ್ಚು ನಿರ್ಣಾಯಕವಾಗಿರುತ್ತದೆ.

ಬೆಂಗಳೂರಿನ ಮೂಲಸೌಕರ್ಯವು ಸರ್ಕಾರಕ್ಕೆ ತಲೆನೋವಾಗಿದೆ. ಗುಂಡಿಗಳಿಂದ ಕೂಡಿದ ರಸ್ತೆಗಳು, ತಗ್ಗು ಪ್ರದೇಶಗಳಲ್ಲಿ ಮತ್ತು ರಸ್ತೆಗಳಲ್ಲಿ ನೀರು ನಿಲ್ಲುವುದು, ಸಂಚಾರ ದಟ್ಟಣೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು. ಭಾರತದ ಆರ್ಥಿಕ ಬೆಳವಣಿಗೆಯ ಎಂಜಿನ್ ಎಂದು ಪರಿಗಣಿಸಲಾದ ಬೆಂಗಳೂರಿನ ಬಗ್ಗೆ ಸರ್ಕಾರವು ದೀರ್ಘಾವಧಿಯ ದೃಷ್ಟಿಯನ್ನು ಹೊಂದಿರಬೇಕು. ಇತ್ತೀಚೆಗೆ ಬಂದ ಸರ್ಕಾರಗಳು ದೀರ್ಘಾವಧಿಯ ದೂರದೃಷ್ಟಿಯ ಕೊರತೆಯನ್ನು ಹೇಳುತ್ತದೆ.

ಸರ್ಕಾರದಲ್ಲಿರುವವರು ತಕ್ಷಣದ ಸವಾಲುಗಳನ್ನು ಎದುರಿಸಲು ತಮ್ಮ ಚಾಣಾಕ್ಷತೆ ಮತ್ತು ಕ್ರಿಯಾಶೀಲತೆಯನ್ನು ಪ್ರದರ್ಶಿಸಬೇಕು. ಬೆಂಗಳೂರು ನಗರ ಮತ್ತು ರಾಜ್ಯದ ಅಭಿವೃದ್ಧಿಗೆ ದೀರ್ಘಾವಧಿಯ ದೃಷ್ಟಿಕೋನವನ್ನು ಹಾಕಿಕೊಳ್ಳಬೇಕು. ರಾಜಕೀಯ ರಂಗದಲ್ಲಿ, ಸರ್ಕಾರ-ಆಡಳಿತ ಪಕ್ಷವಾದ ಬಿಜೆಪಿ ಪ್ರಧಾನಮಂತ್ರಿಯವರ ಮಾತು, ಭರವಸೆಗಳನ್ನು ಈಡೇರಿಸಲು ಶ್ರಮಿಸಬೇಕಾಗುತ್ತದೆ. 

ಅಭಿವೃದ್ಧಿಯ ಅಜೆಂಡಾದಲ್ಲಿ ಉಳಿದಿರುವ ಕೆಲಸಗಳನ್ನು ಮುಗಿಸುವುದು ಬಿಜೆಪಿಗೆ ನಿರ್ಣಾಯಕವಾಗಿದೆ, ರಾಜ್ಯಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದ ನಂತರ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತ ಪಕ್ಷದ ಸಾಧನೆ ಹೆಚ್ಚು ಉತ್ತೇಜನಕಾರಿಯಾಗಿರಲಿಲ್ಲ. ಇದು ಭಾವನಾತ್ಮಕ ಸಮಸ್ಯೆಗಳು ವಿದ್ಯಾವಂತ ಮತದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂಬುದನ್ನು ಸಾರುತ್ತದೆ. 

ಬಿಜೆಪಿಗೆ ಎಲ್ಲಿ ಸವಾಲು?: ವಿಧಾನ ಪರಿಷತ್ ನ ಒಟ್ಟು ನಾಲ್ಕು ಸ್ಥಾನಗಳ ಪೈಕಿ ಎರಡನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಉತ್ತರ ಕರ್ನಾಟಕದ ಲಿಂಗಾಯತ ಭದ್ರಕೋಟೆಯಲ್ಲಿ ಬಿಜೆಪಿ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಹಳೆ ಮೈಸೂರಿನಲ್ಲಿ ತನ್ನ ಹಿಡಿತವನ್ನು ಬಲಪಡಿಸುವ ಪ್ರಯತ್ನದಲ್ಲಿ ಅದು ಯಶಸ್ವಿಯಾಗಲಿಲ್ಲ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತನ್ನ ಸವಾಲುಗಳ ನಡುವೆಯೂ ಎರಡೂ ಸ್ಥಾನಗಳನ್ನು ಉಳಿಸಿಕೊಂಡಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ತನ್ನ ಹೊಸ ವಿಶ್ವಾಸದ ಮೇಲೆ ಸವಾರಿ ಮಾಡುವ ನಿರೀಕ್ಷೆಯಲ್ಲಿದೆ. ಪ್ರಧಾನಿ ಮೋದಿ ಅವರು ನಗರವನ್ನು ತೊರೆದ ತಕ್ಷಣ ಬೆಂಗಳೂರಿನ ರಸ್ತೆಗಳ ಕಳಪೆ ಕಾಮಗಾರಿ ಬಿಜೆಪಿಗೆ ಒಂದು ಪಾಠವಾಗಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com