ಸಿದ್ದರಾಮಯ್ಯ Vs ಡಿಕೆಶಿ: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾದ ಸಿಎಂ ಗದ್ದುಗೆ ರೇಸ್!
ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಅನ್ನೋ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಮುಂದಿನ ಸಿಎಂ ವಿಚಾರ ಕುರಿತು ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರು ಶನಿವಾರ ಮತ್ತೆ ಪ್ರಸ್ತಾಪ ಮಾಡಿದ್ದಾರೆ.
Published: 28th May 2022 08:00 PM | Last Updated: 28th May 2022 08:00 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಅನ್ನೋ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಮುಂದಿನ ಸಿಎಂ ವಿಚಾರ ಕುರಿತು ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರು ಶನಿವಾರ ಮತ್ತೆ ಪ್ರಸ್ತಾಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಭೈರತಿ ಸುರೇಶ್, ಸಿದ್ದರಾಮಯ್ಯ ಅವರಿಗೆ ಮುಂದಿನ ಸಿಎಂ ಆಗಬೇಕು ಎಂದು ಅವರಿಗೆ ಮನಸಿಲ್ಲ. ಆದರೆ ನಮ್ಮ ಮನಸಲ್ಲಿ, ಜನರ ಮನಸ್ಸಿನಲ್ಲಿ ಅವರು ಸಿಎಂ ಆಗಬೇಕು ಅಂತಾ ಇದೆ. ಸಿದ್ದರಾಮಯ್ಯನವರು ಮತ್ತೆ ಮುಂದಿನ ಸಿಎಂ ಆಗಬೇಕು ಅಂತಾ ನಮಗೆ ನಿಮಗೆ ಇದೆ. ಹೌದೋ ಅಲ್ವೋ ಎಂದು ಪ್ರಶ್ನಿಸಿದರು.
ಇದನ್ನು ಓದಿ: 2023ರ ವಿಧಾನಸಭೆ ಚುನಾವಣೆ: 2013 ರಂತೆ ಕುರುಬ ಕಮಾಂಡರ್ ಆಗಿ ಸಿದ್ದರಾಮಯ್ಯ ಸಾರಥ್ಯ!
ಬಳಿಕ ಮಾತನಾಡಿದ ಟಿ.ಬಿ.ಜಯಚಂದ್ರ, ದಾವಣಗೆರೆಯಲ್ಲಿ ಅಗಸ್ಟ್ ೩ ರಂದು ಹತ್ತು ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡ್ತೇವೆ. ಮುಂದೆ ಪರೀಕ್ಷೆ ಇದೆ. ಆ ಪರೀಕ್ಷೆಯಲ್ಲಿ ಸಿದ್ದರಾಮಯ್ಯಗೆ ಆಶೀರ್ವಾದ ಮಾಡಿ ಎಂದು ಪರೋಕ್ಷವಾಗಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಟಿ ಬಿ ಜಯಚಂದ್ರ ಹೇಳಿದರು.
ವಿಪಕ್ಷ ನಾಯಕ ಎಂದರೆ ಶಾಡೋ ಸಿಎಂ ಎಂಬ ಅರ್ಥವಿದೆ. ಆ ಶಾಡೋವನ್ನ ತೆಗೆಯಬೇಕು ಎಂದು ಕುರುಬರ ಜಾಗೃತಿ ಕಾರ್ಯಕ್ರಮದಲ್ಲಿ ಟಿ ಬಿ ಜಯಚಂದ್ರ ಹೇಳಿದರು.