ತೋಡೋ ಪಿತಾಮಹನ ಮರಿಮಗನಿಂದ ಭಾರತ ಜೋಡೋ ಸಾಧ್ಯವೇ? ಹಿಂದೂಗಳ ಪೂಜನೀಯ ಗೋವಿನ ಹತ್ಯೆಗೆ ರಾಹುಲ್ ಸಮ್ಮತಿಯಿದೆಯೇ?
ಭಾರತದ ವಿಭಜನೆಯ ಪಿತಾಮಹನ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ?, ತನ್ನ ಅಧಿಕಾರದ ಹಪಹಪಿಗೆ ದೇಶವಾಸಿಗಳ ರಕ್ತಹರಿಸಿದ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ?
Published: 01st October 2022 02:04 PM | Last Updated: 01st October 2022 02:30 PM | A+A A-

ರಾಹುಲ್ ಗಾಂಧಿ
ಬೆಂಗಳೂರು: ಭಾರತದ ವಿಭಜನೆಯ ಪಿತಾಮಹನ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ?, ತನ್ನ ಅಧಿಕಾರದ ಹಪಹಪಿಗೆ ದೇಶವಾಸಿಗಳ ರಕ್ತಹರಿಸಿದ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸುತ್ತಿರುವ ‘ಭಾರತ್ ಜೋಡೊ ಯಾತ್ರೆ’ ಕುರಿತು ಬಿಜೆಪಿ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಭಾರತದ ಐಕ್ಯಾತಾ ಯಾತ್ರೆಯ ನಿಜವಾದ ಅಜೆಂಡಾ ಭಾರತ ವಿಭಜನೆಯೇ ಆಗಿದೆ’ ಎಂದು ವಾಗ್ದಾಳಿ ನಡೆಸಿದೆ. ಭಾರತ್ ಜೋಡೊ ಯಾತ್ರೆ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಭಾರತದ ವಿಭಜನೆಯ ಪಿತಾಮಹನ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ?, ತನ್ನ ಅಧಿಕಾರದ ಹಪಹಪಿಗೆ ದೇಶವಾಸಿಗಳ ರಕ್ತಹರಿಸಿದ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ?, ಭಾರತದ ಐಕ್ಯಾತಾ ಯಾತ್ರೆಯ ನಿಜವಾದ ಅಜೆಂಡಾ ಭಾರತ ವಿಭಜನೆಯೇ ಆಗಿದೆ’ ಎಂದು ವಾಗ್ದಾಳಿ ನಡೆಸಿದೆ.
‘ರಾಹುಲ್ ಗಾಂಧಿ ಯಾತ್ರೆ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆ. ತಮಿಳುನಾಡಿನಿಂದ ಆರಂಭಗೊಂಡ ಯಾತ್ರೆ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುತ್ತಿದೆ. ಹಿಂದೂ ಸಮಾಜವನ್ನು ಕೆಣಕಿ ನಿಮ್ಮ ಮತ ಬ್ಯಾಂಕ್ ಗಟ್ಟಿಗೊಳಿಸುವ ಹುನ್ನಾರವೇ ಇದು’ ಎಂದು ಬಿಜೆಪಿ ಪ್ರಶ್ನಿಸಿದೆ.
ರಾಹುಲ್ ಗಾಂಧಿ ಯಾತ್ರೆ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆ.
— BJP Karnataka (@BJP4Karnataka) October 1, 2022
ತಮಿಳುನಾಡಿನಿಂದ ಆರಂಭಗೊಂಡ ಯಾತ್ರೆ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುತ್ತಿದೆ.
ಹಿಂದೂ ಸಮಾಜವನ್ನು ಕೆಣಕಿ ನಿಮ್ಮ ಮತಬ್ಯಾಂಕ್ ಗಟ್ಟಿಗೊಳಿಸುವ ಹುನ್ನಾರವೇ ಇದು?#HinduVirodhiYatra
‘ಕೇರಳದಲ್ಲೂ ಹಿಂದೂ ದ್ವೇಷವನ್ನು ರಾಹುಲ್ ಗಾಂಧಿ ಮುಂದುವರೆಸಿದ್ದಾರೆ. ನಡುಬೀದಿಯಲ್ಲಿ ಗೋವಿನ ತಲೆ ಕಡಿದ ಯುವ ಕಾಂಗ್ರೆಸ್ ಮುಖಂಡನೊಂದಿಗೆ ಪಾದಯಾತ್ರೆ ಮಾಡುವ ಮೂಲಕ ರಾಹುಲ್ ಗಾಂಧಿ ಬಹುಸಂಖ್ಯಾತ ಹಿಂದೂಗಳನ್ನು ಅಪಮಾನಿಸಿದ್ದಾರೆ. ಹಿಂದೂಗಳ ಪೂಜನೀಯ ಗೋವಿನ ಹತ್ಯೆಗೆ ರಾಹುಲ್ ಗಾಂಧಿ ಅವರ ಸಮ್ಮತಿಯಿದೆಯೇ’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: 'ಬಿಜೆಪಿ ಮಾಡಿದ ಉತ್ತಮ ರಸ್ತೆಯಲ್ಲಿ ಕಾಂಗ್ರೆಸ್ ಯಾತ್ರೆ: ನಮ್ ತಾಯಾಣೆ ಪಾದಯಾತ್ರೆ ಅಂದ್ರೆ ಹೀಗೆ ಅಂತ ಗೊತ್ತಿರಲಿಲ್ಲ'
‘ತಮಿಳುನಾಡು, ಕೇರಳದಲ್ಲಿ ತೋರಿದ ಹಿಂದೂ ದ್ವೇಷವನ್ನು ರಾಹುಲ್ ಗಾಂಧಿ ಕರ್ನಾಟಕದಲ್ಲೂ ಬಿಡಲಿಲ್ಲ. ಮತಾಂಧರ ಮೂಲಕ ಡಿ.ಜೆ ಹಳ್ಳಿಯ ಹಿಂದೂಗಳ ಮನೆಗೆ ಬೆಂಕಿಹಚ್ಚಲು ಪ್ರಚೋದನೆ ನೀಡಿದ ಸಂಪತ್ ರಾಜ್ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ್ದಾನೆ. ಕಾಂಗ್ರೆಸ್ಸಿಗರೇ, ಯಾತ್ರೆಯ ಹೆಸರನ್ನು ಹಿಂದೂ ವಿರೋಧಿ ಯಾತ್ರೆ ಎಂದು ಬದಲಾಯಿಸಿಕೊಳ್ಳುವಿರಾ’ ಎಂದು ಬಿಜೆಪಿ ಕಿಡಿಕಾರಿದೆ.
ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೇ ? #Rahukaala #BharatTodoYatra pic.twitter.com/vCpgJyMC2e
— BJP Karnataka (@BJP4Karnataka) October 1, 2022