'ಬಿಜೆಪಿ ಮಾಡಿದ ಉತ್ತಮ ರಸ್ತೆಯಲ್ಲಿ ಕಾಂಗ್ರೆಸ್ ಯಾತ್ರೆ: ನಮ್ ತಾಯಾಣೆ ಪಾದಯಾತ್ರೆ ಅಂದ್ರೆ ಹೀಗೆ ಅಂತ ಗೊತ್ತಿರಲಿಲ್ಲ'

ಪಾದಯಾತ್ರೆ ಅಂದ್ರೆ ನಮ್ ತಾಯಾಣೆ ಹೀಗೆ ಅಂತ ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ವಸತಿ ಸಚಿವ ವಿ. ಸೋಮಣ್ಣ ರಾಹುಲ್‌ ಗಾಂಧಿ ಪಾದಯಾತ್ರೆಯನ್ನು ವ್ಯಂಗ್ಯಮಾಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ
ಕಾಂಗ್ರೆಸ್ ಪಾದಯಾತ್ರೆ

ಬೆಂಗಳೂರು: ಪಾದಯಾತ್ರೆ ಅಂದ್ರೆ ನಮ್ ತಾಯಾಣೆ ಹೀಗೆ ಅಂತ ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ವಸತಿ ಸಚಿವ ವಿ. ಸೋಮಣ್ಣ ರಾಹುಲ್‌ ಗಾಂಧಿ ಪಾದಯಾತ್ರೆಯನ್ನು ವ್ಯಂಗ್ಯಮಾಡಿದ್ದಾರೆ.

ಭಾರತ್‌ ಜೋಡೋ ಪಾದಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಲ್ತಾನ್ ಬತ್ತೇರಿ ಇಂದ ಗುಂಡ್ಲುಪೇಟೆ ವರೆಗೂ 60 ಕಿ.ಮೀ ಇದೆ. ಪಾದಯಾತ್ರೆ ಅಂದರೆ ನಡೆದುಕೊಂಡು ಹೋಗುವುದು ಅಂದುಕೊಂಡಿದ್ದೆ. ಆದರೆ ವಾಹನ ಹತ್ತಿ ಓಡಾಡುವುದು ಅಂದುಕೊಂಡಿರಲಿಲ್ಲ. ರಾಹುಲ್ ಗಾಂಧಿ ಪಾದಯಾತ್ರೆ ಹೀಗೆ ಅಂತ ಗೊತ್ತಿಲ್ಲ ಎಂದು ಹೇಳಿದರು.

‘ಭಾರತ್ ಜೋಡೋ ಯಾತ್ರೆ ನನ್ನ ಉಸ್ತುವಾರಿ ಜಿಲ್ಲೆಯಿಂದ ಆರಂಭವಾಗಿದೆ. ಹಿಂದೆ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ನಡೆದುಕೊಂಡು ಬಂದಿದ್ದರು. ನಾನೂ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಬಂದಿದ್ದೆ. ಇದು ಪಾದಯಾತ್ರೆ ಅಲ್ಲ, ಅಲ್ಲಲ್ಲಿ ಹತ್ತುವುದು-ಇಳಿಯುವುದು' ಎಂದು ಹೇಳಿದರು.     

ಬಿಜೆಪಿ ಸರಕಾರದಿಂದ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ 212 ಕೋಟಿ ವೆಚ್ಚದಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಆರಂಭಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಒಂದೇ ಬಾರಿ 110 ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಸೋಮಣ್ಣ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರವು 14-15 ಕೆರೆಗಳನ್ನು ತುಂಬಿಸಿ,  ಬರಡು ಮತ್ತು ಅಸುರಕ್ಷಿತ ಜಿಲ್ಲೆ ಎಂಬ ಭಾವನೆಯನ್ನು ಅಳಿಸಿ ಹಾಕಿದೆ, . 2012-13ರಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲಾಗಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆ ಮಾಡುತ್ತಿದ್ದೇವೆ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಮಲೆ ಮಹದೇಶ್ವರ ಪ್ರಾಧಿಕಾರ ಆರಂಭಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ?.

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದೆ. ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ ಉತ್ತಮ ರಸ್ತೆಗಳನ್ನು ಮಾಡಿದ್ದಾರೆ. ಈ ರಸ್ತೆ ಮೂಲಕ ಜೋಡೋ ಯಾತ್ರೆ ಮುಂದುವರಿಯಲಿ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com