‘ಕಡಿಮೆ ಮಾತನಾಡಿ, ಹೆಚ್ಚು ಕೇಳಿಸಿಕೊಳ್ಳಿ’: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಮಂತ್ರ!

ಎಲ್ಲಾ ನೇತಾಗಿರಿ ಮರೆತು ಸಾಮಾನ್ಯ ಜನರಲ್ಲಿ ಸಾಮಾನ್ಯರಂತೆ ಬೆರೆತಿದ್ದ ರಾಹುಲ್ ಗಾಂಧಿ,  ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವವರ ಮಾತುಗಳನ್ನು ತಾಳ್ಮೆಯಿಂದ ಕೇಳುತ್ತಿದ್ದಾರೆ, ಪರಿಹಾರಗಳನ್ನು ಸೂಚಿಸುವಂತೆ ವಿನಮ್ರವಾಗಿ ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ
ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ
Updated on

ಮಂಡ್ಯ: ಐಕ್ಯತಾ ಯಾತ್ರೆಗೆ ರಾಜ್ಯದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಹುಲ್‌ ಗಾಂಧಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆತು ಅವರ ಸಂಕಷ್ಟಗಳನ್ನು ವಿಚಾರಿಸುತ್ತಿದ್ದಾರೆ. ಕಡಿಮೆ ಮಾತನಾಡಿ ಹೆಚ್ಚು ಕೇಳಿಸಿಕೊಳ್ಳಬೇಕು ಎಂಬುದು ರಾಹುಲ್ ಗಾಂಧಿ ಮಂತ್ರವಾಗಿದೆ.  

ಎಲ್ಲಾ ನೇತಾಗಿರಿ ಮರೆತು ಸಾಮಾನ್ಯ ಜನರಲ್ಲಿ ಸಾಮಾನ್ಯರಂತೆ ಬೆರೆತಿದ್ದ ರಾಹುಲ್ ಗಾಂಧಿ,  ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವವರ ಮಾತುಗಳನ್ನು ತಾಳ್ಮೆಯಿಂದ ಕೇಳುತ್ತಿದ್ದಾರೆ, ಪರಿಹಾರಗಳನ್ನು ಸೂಚಿಸುವಂತೆ ವಿನಮ್ರವಾಗಿ ತಿಳಿಸಿದ್ದಾರೆ.

3-ಕಿಮೀ ಉದ್ದದ ನಡಿಗೆಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ವಿವಿಧ ಭಾಗಗಳು, ವಿಶೇಷವಾಗಿ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು  ಚರ್ಚಿಸಿದರು. ಈ ಪ್ರದೇಶದ ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಜೊತೆಗೆ ಜನರ ಕುಂದುಕೊರತೆಗಳನ್ನು ತಿಳಿಯಲು  ಕಾಂಗ್ರೆಸ್ ಯುವ ನಾಯಕ ಯತ್ನಿಸಿದರು.

ಬಿಜೆಪಿಯು ಬಡವರಿಗಾಗಿ ಒಂದು, ಶ್ರೀಮಂತರಿಗಾಗಿ ಇನ್ನೊಂದು ಭಾರತ ವನ್ನು ಸೃಷ್ಟಿಸಿದೆ’ ಎಂದು ಟೀಕಿಸಿದರು. ಕರ್ನಾಟಕದಲ್ಲಿ ಮೂರು ಕರಾಳ ಕೃಷಿ ಕಾನೂನುಗಳು ಇನ್ನೂ ಇವೆ. ಅವು ಕೃಷಿಕರು, ಬಡವರು, ಯುವಜನರು, ಕಾರ್ಮಿಕರನ್ನು ನಾಶಮಾಡುವ ಅಸ್ತ್ರಗಳು. ಜಿಎಸ್‌ಟಿ, ನೋಟ್‌ ಬ್ಯಾನ್‌ ಮೂಲಕ ಬಿಜೆಪಿ ಬಡವರ ಹಣ ಲೂಟಿ ಮಾಡುತ್ತಿದೆ’ ಎಂದರು.

‘ವಿಶ್ವದ 2ನೇ ಶ್ರೀಮಂತ ಭಾರತೀಯ ಪ್ರಧಾನಿಗೆ ಹತ್ತಿರವಿದ್ದಾರೆ. ಕೆಲ ವರ್ಷಗಳ ಹಿಂದೆ ಪಟ್ಟಿಯಲ್ಲೇ ಇರದಿದ್ದ ಅವರು, ರಾಕೆಟ್‌ ವೇಗದಲ್ಲಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಡ ಜನರ ಹಣ ಲೂಟಿ ಮಾಡುತ್ತಾ ಶ್ರೀಮಂತನಾಗಿದ್ದಾರೆ’ ಎಂದರು. ದೇಶದಲ್ಲಿ ಶ್ರೀಮಂತರಿಗೆ ಕನಸುಗಳಿವೆ, ಅವರಿಗೆ ವಿಮಾನ ನಿಲ್ದಾಣ, ಬಂದರು, ರಸ್ತೆ, ದೊಡ್ಡ ಸಂಸ್ಥೆಗಳು ಬೇಕಾಗಿವೆ. ಅವರು ಕೃಷಿ ವ್ಯವಸ್ಥೆ ನಿಯಂತ್ರಿಸುತ್ತಾರೆ, ನಿತ್ಯ ಶ್ರೀಮಂತರಾಗುತ್ತಿದ್ದಾರೆ. ಬಡವರ ಮಕ್ಕಳು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದರು.

ಶಾಂತಿ ಕರ್ನಾಟಕದ ಡಿಎನ್‌ಎ. ಯಾರನ್ನೂ ದ್ವೇಷಿಸಬೇಡ, ಯಾರನ್ನೂ ಹಿಂಸಿಸಬೇಡ ಎಂದು ಬಸವಣ್ಣ ಹೇಳಿದ್ದಾರೆ. ಅವರು ತೋರಿದ ಹಾದಿಯಲ್ಲೇ ನಾನೂ ನಡೆಯುತ್ತಿದ್ದೇನೆ. ಕರ್ನಾಟಕ ಸರ್ಕಾರ ಬಸವಣ್ಣನ ಸಂದೇಶವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ’ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

‘ಪಠ್ಯಪರಿಷ್ಕರಣೆ ನೆಪದಲ್ಲಿ ಬಸವಣ್ಣನ ಸಂದೇಶ ಮುಚ್ಚಿಡಲು ಪ್ರಯತ್ನಿಸಲಾಗುತ್ತಿದೆ. ದೇಶದ ಸಂಸ್ಕೃತಿ, ಇತಿಹಾಸ ಮುಚ್ಚಿಡಲು ಸಾಧ್ಯವೇ? ಕರ್ನಾಟಕದಲ್ಲಿ ಜನಸಾಗರವನ್ನು ಕಂಡಿದ್ದೇನೆ. ಹರಿಯುತ್ತಿರುವ ಜನಸಾಗರದಲ್ಲಿ ಜಾತಿ, ಧರ್ಮಗಳೆಂಬ ಭೇದವಿಲ್ಲ’ ಎಂದರು.

ಮಾಜಿ ರಾಷ್ಟ್ರಪತಿ ಕೆ ನಾರಾಯಣನ್ ಅವರ ಬಗ್ಗೆ ಅಪಾರ ಗೌರವವನ್ನು ವ್ಯಕ್ತಪಡಿಸಿದ ಅವರು, "ನಾನು ಅವರನ್ನು ಭೇಟಿಯಾಗಿದ್ದೇನೆ, ಅವರು ಹೋಲಿಸಲಾಗದವರು ಮತ್ತು ಅವರು ಯಾವಾಗಲೂ ಸಂವಿಧಾನವನ್ನು ಅನುಸರಿಸುತ್ತಿದ್ದರು,  ಆಧುನಿಕ ಕಾಲದಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ ಅನಿಷ್ಟಗಳ ಬಗ್ಗೆ ಮಾತನಾಡಿದ ಅವರು, ಸಾಮಾಜಿಕ ಬಹಿಷ್ಕಾರವು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಮತ್ತು ಸಂವಿಧಾನದ ಮೇಲಿನ ನಂಬಿಕೆ ಮತ್ತು ಪರಸ್ಪರ ಗೌರವವು ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಎಂದು ಹೇಳಿದರು. ವಾರಗಟ್ಟಲೆ ಯಾತ್ರೆಯಲ್ಲಿ ತೊಡಗಿರುವ ರಾಹುಲ್, ಕನ್ಯಾಕುಮಾರಿಯಿಂದ ಕೇರಳ ಮತ್ತು ಕರ್ನಾಟಕದ ಮೂಲಕ "ಜನರ ದೊಡ್ಡ ನದಿಯೇ ಹರಿಯುತ್ತಿದೆ" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com