ರಾಜಾಹುಲಿ ಘರ್ಜನೆಗೆ ಕಾಂಗ್ರೆಸ್ ತತ್ತರಿಸಿದೆ, ಸಿದ್ದರಾಮಯ್ಯಗೆ ಅರಳು ಮರಳು ಹೊರತು ಯಡಿಯೂರಪ್ಪಗಲ್ಲ: ಸಿಎಂ ಬೊಮ್ಮಾಯಿ

2023ರ ವಿಧಾನಸಭೆ ಚುನಾವಣೆಯ ಚುನಾವಣಾ ಪ್ರಚಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಅತ್ತ ಕಾಂಗ್ರೆಸ್ ನಿಂದ ಚಿತ್ರದುರ್ಗದಲ್ಲಿ ಭಾರತ್ ಜೋಡೋ ಯಾತ್ರೆ ಭರ್ಜರಿಯಾಗಿ ನಡೆಯುತ್ತಿದ್ದರೆ ಇತ್ತ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಬಿಜೆಪಿ ಸಂಕಲ್ಪ ಯಾತ್ರೆ ನೆರವೇರಿತು.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಯಾತ್ರೆ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಲಾಯಿತು.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಯಾತ್ರೆ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಲಾಯಿತು.
Updated on

ಹೊಸಪೇಟೆ: 2023ರ ವಿಧಾನಸಭೆ ಚುನಾವಣೆಯ ಚುನಾವಣಾ ಪ್ರಚಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಅತ್ತ ಕಾಂಗ್ರೆಸ್ ನಿಂದ ಚಿತ್ರದುರ್ಗದಲ್ಲಿ ಭಾರತ್ ಜೋಡೋ ಯಾತ್ರೆ ಭರ್ಜರಿಯಾಗಿ ನಡೆಯುತ್ತಿದ್ದರೆ ಇತ್ತ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಬಿಜೆಪಿ ಸಂಕಲ್ಪ ಯಾತ್ರೆ ನೆರವೇರಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಇಂದು ಹೊಸಪೇಟೆಯ ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮದೊಂದಿಗೆ ಜನ ಸಂಪರ್ಕ ಯಾತ್ರೆಗೆ ಚಾಲನೆ ಸಿಕ್ಕಿದೆ. 

ಸಮಾವೇಶ ಉದ್ದೇಶಿಸಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಷಣ
ನಾನು ರಾಹುಲ್ ಗಾಂಧಿಗೆ ಬಚ್ಚಾ ಅಂದಿದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರನ್ನು ಬಚ್ಚಾ ಅಂತ ನಾನು ಕರೆದಿದ್ದು ಸರಿಯಲ್ಲಾ ಅಂತ ಸಿದ್ದರಾಮಯ್ಯ ಅವರು ಬೇರೆ, ಬೇರೆ ಮಾತುಗಳು ಕೂಡ ಆಡಿದ್ದಾರೆ. ಪ್ರಧಾನಿ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ಹಗುರವಾಗಿ ಮಾತನಾಡಿದ್ದಕ್ಕೆ ನಾನು, ಬಚ್ಚ ಅನ್ನೋ ಪದ ಬಳಸಿದ್ದೇನೆ. ಅದು ರಾಹುಲ್ ಗಾಂಧಿಯವರೇ, ಹಾಗೆ ಮಾತನಾಡೋ ಹಾಗೆ ಮಾಡಿಕೊಂಡ್ರು. ಪ್ರಧಾನಿ ಮೋದಿ ಬಗ್ಗೆ ಯಾರೇ ಮಾತನಾಡಿದ್ರು, ನೀವು ಪ್ರತಿಭಟಿಸಬೇಕು ಅಂತ ಭಾಷಣದ ಸಮಯದಲ್ಲಿ ಬಿಎಸ್ ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. 

ಯಡಿಯೂರಪ್ಪ ಈಗಲೂ ಮುಂದೂ ರಾಜಾಹುಲಿ
ನಿನ್ನೆ ರಾಜಾಹುಲಿ ಗರ್ಜನೆಗೆ ಕಾಂಗ್ರೆಸ್​​ನವರು ತತ್ತರಿಸಿದ್ದಾರೆ. ಯಡಿಯೂರಪ್ಪಗೆ ಅರಳು ಮರಳು ಅಂತಾರೆ ಸಿದ್ದರಾಮಯ್ಯ. ಯಡಿಯೂರಪ್ಪ ಯಾವತ್ತೂ ಜಗ್ಗಲ್ಲ ಕುಗ್ಗಲ್ಲ. ಯಡಿಯೂರಪ್ಪ ಯಾವತ್ತೂ ಅರಳು ಅವರು ಮರಳಲ್ಲ. ಯಡಿಯೂರಪ್ಪ ಈಗಲೂ ರಾಜ್ಯದ ಜನರ ಮನದಲ್ಲಿದ್ದಾರೆ. ಸಿದ್ದರಾಮಯ್ಯರ ಹೇಳಿಕೆ ನೋಡಿದ್ರೆ ಅವರಿಗೆ ಅರಳು ಮರಳು ಆದಂತೆ ಕಾಣುತ್ತಿದೆ. ದೇಶದಲ್ಲಿ ಕೊವಿಡ್​ ವೈರಸ್​ ನಿಯಂತ್ರಣ ಮಾಡಿದ್ದೇವೆ. ಪ್ರಧಾನಿ ಮೋದಿ ಪ್ರವಾಹ ಬಂದ್ರೆ ಸಹಾಯ ಮಾಡುತ್ತಾರೆ. ಉದ್ಯೋಗ ಯೋಜನೆ ಸೇರಿ ಹಲವು ಯೋಜನೆ ಜಾರಿ ಮಾಡಿದ್ದಾರೆ. ಸಿದ್ದರಾಮಣ್ಣ ಮರಳು ನಿಮಗೆ ಎಂದು ಕಟುವಾಗಿ ಟೀಕಿಸಿದರು. 

ಕಾಂಗ್ರೆಸ್ ನವರು ರಾಜ್ಯದಲ್ಲಿ ಧರ್ಮ ಒಡೆಯುವ ಪ್ರಯತ್ನ ಮಾಡಿದರು. ನಮಗೆ ದುಡ್ಡು ಹೊಡೆಯುವ ಭಯ ಇಲ್ಲ. ನಮ್ಮ ಸರ್ಕಾರ ಬಂದ ಮೇಲೆ ರೈತರಿಗೆ ಭಯ ಇಲ್ಲ. ಬೆಳೆಹಾನಿಯಾದ ರೈತರ ಖಾತೆಗೆ ಪರಿಹಾರ ಹಾಕಿದ್ದೇವೆ. ನಮ್ಮ ಸರ್ಕಾರದಲ್ಲಿ ಕಾರ್ಯಕರ್ತರಿಗೆ ಭಯ ಇಲ್ಲ. ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಭ್ರಷ್ಟಾಚಾರ ಆಗಿದ್ರೆ ದೂರು ಕೊಡಿ ಸ್ವಾಮಿ ತನಿಖೆ ಮಾಡಿಸ್ತೇವಿ. ಇಂದು ರಾಜ್ಯದಲ್ಲಿ ಯಾವ ಜನರಿಗೂ ಭಯ ಇಲ್ಲ. ದೀನದಲಿತರಿಗೆ ಸ್ವಯಂಉದ್ಯೋಗ ಯೋಜನೆ ಮಾಡಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com