ರಾಜ್ಯದಲ್ಲಿ 'ಯಾತ್ರೆ'ಗಳದ್ದೇ ಕಾರುಬಾರು; ಭಾರತ್ ಜೋಡೋ ದರ್ಬಾರು; ಡಿಸೆಂಬರ್ ನಲ್ಲಿ ಕಾಂಗ್ರೆಸ್ ಯಾತ್ರೆ ಶುರು!

'ಟ್ರ್ಯಾಕ್ಟರ್‌ ಯಾತ್ರೆಗಳು ಮುಗಿದ ನಂತರ ಡಿ. ಕೆ. ಶಿವಕುಮಾರ್‌ ನೇತೃತ್ವದಲ್ಲಿ ಎರಡು ತಂಡಗಳು ಎಲ್ಲ 224 ವಿಧಾನಸಭೆ ಕ್ಷೇತ್ರಗಳಲ್ಲೂ ರಥ ಯಾತ್ರೆ ಮಾಡಲಿದ್ದೇವೆ. ತಲಾ ಹದಿನಾಲ್ಕು ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿರ್ವಹಿಸಲಿದ್ದೇವೆ.
ಕರ್ನಾಟಕದಲ್ಲಿ ರಾಹುಲ್ ಗಾಂಧಿ ಐಕ್ಯತಾ ಯಾತ್ರೆ
ಕರ್ನಾಟಕದಲ್ಲಿ ರಾಹುಲ್ ಗಾಂಧಿ ಐಕ್ಯತಾ ಯಾತ್ರೆ

ಚಿತ್ರದುರ್ಗ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಪರಿಣಾಮವನ್ನು 2023 ರ ವಿಧಾನಸಭಾ ಚುನಾವಣೆಯವರೆಗೆ ಉಳಿಸಿಕೊಳ್ಳಲು, ಡಿಸೆಂಬರ್ ಮೊದಲ ವಾರದಿಂದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತೊಂದು ಯಾತ್ರೆಯನ್ನು ಆರಂಭಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯೋಜಿಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆ ನಾಯಕನ ಹಟ್ಟಿಯ ಗಿರಿಯಮ್ಮನ ಹಳ್ಳಿ ತಂಗುದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಭಾರತ್‌ ಜೋಡೋ ಯಾತ್ರೆ ನಂತರ ಪಕ್ಷದ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು.

'ಟ್ರ್ಯಾಕ್ಟರ್‌ ಯಾತ್ರೆಗಳು ಮುಗಿದ ನಂತರ ಡಿ. ಕೆ. ಶಿವಕುಮಾರ್‌ ನೇತೃತ್ವದಲ್ಲಿ ಎರಡು ತಂಡಗಳು ಎಲ್ಲ 224 ವಿಧಾನಸಭೆ ಕ್ಷೇತ್ರಗಳಲ್ಲೂ ರಥ ಯಾತ್ರೆ ಮಾಡಲಿದ್ದೇವೆ. ತಲಾ ಹದಿನಾಲ್ಕು ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿರ್ವಹಿಸಲಿದ್ದೇವೆ. ಡಿಸೆಂಬರ್‌ ಮೊದಲ ವಾರದಿಂದ ಇದು ಆರಂಭವಾಗಲಿದೆ' ಎಂದರು.ನಾವು ಬಿಜೆಪಿಯವರ ಸಂಕಲ್ಪ ಯಾತ್ರೆಗೆ ಪರ್ಯಾಯವಾಗಿ ನಾವು  ಮಾಡುತ್ತಿಲ್ಲ, ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹಾಗೂ ರಾಜ್ಯದಲ್ಲಿ ತಲೆ ದೋರಿರುವ ನಿರುದ್ಯೋಗ ಸಮಸ್ಯೆಗಳನ್ನು ಜನರಿಗೆ ತೋರಿಸಲು ಯಾತ್ರೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

2023 ರ ವಿಧಾನಸಭಾ ಚುನಾವಣೆಯಲ್ಲಿ 130 ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದ್ದು, ನಾವು ಸರ್ಕಾರವನ್ನು ರಚಿಸುತ್ತೇವೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ ಎಂದು ಸಿದ್ದರಾಮಯ್ಯ ಹೇಳಿದರು.  ಸ್ವಾತಂತ್ರ್ಯೋತ್ಸವದ ಪಾದಯಾತ್ರೆಯಲ್ಲಿ ತೋರಿದ ಆವೇಗ ಭಾರತ್ ಜೋಡೋ ಯಾತ್ರೆಯಲ್ಲೂ ಮುಂದುವರಿದಿದೆ ಎಂದರು.

ಮಹದಾಯಿ, ಕೃಷ್ಣಾ ಮೇಲ್ದಂಡೆ ವಿಷಯಕ್ಕೆ ಟ್ರ್ಯಾಕ್ಟರ್‌ ಯಾತ್ರೆ ಮತ್ತು ಕಲ್ಯಾಣ-ಕರ್ನಾಟಕ ಯಾತ್ರೆಯನ್ನು ಕೈಗೆತ್ತಿಕೊಳ್ಳಲಿದೆ. ಬಿಜೆಪಿಗೆ ತಕ್ಕ ಪಾಠ ಕಲಿಸಲು 2023ರ ಚುನಾವಣೆಗಾಗಿ ರಾಜ್ಯದ ಜನತೆ ಕಾಯುತ್ತಿದ್ದಾರೆ. ಅವರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕಾಂಗ್ರೆಸ್‌ ಸರಕಾರದಲ್ಲಿ ಜ. ನಾಗಮೋಹನದಾಸ್‌ ಸಮಿತಿ ರಚನೆಯಾಯಿತು. ಅವರು ವರದಿ ಸಲ್ಲಿಸಿ, ಎರಡು ವರ್ಷ ಮೂರು ತಿಂಗಳು, ಒಂದು ವಾರ ಆಯಿತು. ಅಷ್ಟೂ ದಿನ ಅವರು ನಿದ್ದೆ ಮಾಡುತ್ತಿದ್ದರು. ಎಸ್ಸಿ, ಎಸ್ಟಿ ಶಾಸಕರಿಂದ ಒತ್ತಡ ಜಾಸ್ತಿಯಾಯಿತು. ಅಸೆಂಬ್ಲಿಯಲ್ಲಿ ನಾನೇ ನಾಲ್ಕೈದು ಬಾರಿ ಪ್ರಸ್ತಾಪಿಸಿದ್ದೆ. ವಾಲ್ಮೀಕಿ ಸ್ವಾಮೀಜಿ ಧರಣಿ ಕುಳಿತಿದ್ದರು. ಇದೆಲ್ಲದರ ಪರಿಣಾಮ ಬೇರೆ ಆಯ್ಕೆ ಇಲ್ಲದೇ ಅವರು ಒಪ್ಪಿಗೆ ಕೊಡಬೇಕಾಗಿ ಬಂತು' ಎಂದು ಸಿದ್ದರಾಮಯ್ಯ ಹೇಳಿದರು.

ಜಾತ್ಯತೀತತೆ ತನ್ನ ಪಕ್ಷದ ಮೂಲ ತತ್ವಗಳಲ್ಲಿ ಒಂದಾಗಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ. ಇದು 1950 ರ ನಾಸಿಕ್ ನಿರ್ಣಯದಿಂದ ಸ್ಪಷ್ಟವಾಗಿದೆ, ಇದರಲ್ಲಿ ಜವಾಹರಲಾಲ್ ನೆಹರು ಅವರು "ಬಹುಮತ ಮತ್ತು ಅಲ್ಪಸಂಖ್ಯಾತರ ಕೋಮುವಾದವು ಭಾರತಕ್ಕೆ ಅಪಾಯಕಾರಿ" ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಈ ನಿರ್ಣಯವನ್ನು ಮರೆತಿದೆ ಮತ್ತು ನೆಹರೂ ಅವರ ತತ್ವವನ್ನು ಮರುಶೋಧಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com